ಜನಪ್ರಿಯತೆಯಲ್ಲಿ ಕೊಹ್ಲಿ, ಸಚಿನ್ ಹಿಂದಿಕ್ಕಿದ ಧೋನಿ: ಸಮೀಕ್ಷೆ

news18
Updated:July 27, 2018, 10:12 PM IST
ಜನಪ್ರಿಯತೆಯಲ್ಲಿ ಕೊಹ್ಲಿ, ಸಚಿನ್ ಹಿಂದಿಕ್ಕಿದ ಧೋನಿ: ಸಮೀಕ್ಷೆ
news18
Updated: July 27, 2018, 10:12 PM IST
ನ್ಯೂಸ್ 18 ಕನ್ನಡ

ಮಹೇಂದ್ರ ಸಿಂಗ್ ಧೋನಿ.. ಭಾರತ ಕಂಡ ಅತ್ಯಂತ ಪ್ರತಿಭಾನ್ವಿಯ ಕ್ರಿಕೆಟ್​ ಆಟಗಾರ ಹಾಗೂ ನಾಯಕ. ಭಾರತಕ್ಕೆ ಟಿ-20 ಹಾಗೂ ಏಕದಿನ ವಿಶ್ವಕಪ್ ಗೆಲ್ಲಿಸಿಕೊಟ್ಟ ಏಕೈಕ ನಾಯಕ ಧೋನಿ. ಅಷ್ಟೇ ಏಕೆ, ಐಸಿಸಿಯ ಮೂರು ಕಪ್​​ಗಳನ್ನು ಗೆದ್ದ ನಾಯಕ​​. ಟೀಮ್ ಇಂಡಿಯಾವನ್ನು ಟೆಸ್ಟ್​ನಲ್ಲಿ ನಂ. 1 ಸ್ಥಾನಕ್ಕೇರಿಸಿದ ಕೀರ್ತಿಯು ಮಾಹಿಗಿದೆ. 27 ಟೆಸ್ಟ್ ಪಂದ್ಯಗಳ ಗೆಲುವುವಿನ ಮೂಲಕ ಭಾರತದ ಯಶಸ್ವಿ ನಾಯಕ ಎನಿಸಿಕೊಂಡಿರುವ ಧೋನಿ, ತಮ್ಮ ಸರಳತೆ ಹಾಗೂ ತಾಳ್ಮೆಯುತ ಸ್ವಭಾವದಿಂದಲೇ ಅತಿಹೆಚ್ಚು ಅಭಿಮಾನಿಗಳನ್ನು ಸೆಳೆದಿದ್ದಾರೆ.

ಇದೀಗ ಇಂಗ್ಲೆಂಡ್​ ಮೂಲದ ಯುಗೌ .ಕೊ. ಯುಕೆ ಎನ್ನುವ ವೆಬ್​ಸೈಟ್​​ವೊಂದು ನಡೆಸಿದ ಸಮೀಕ್ಷೆಯಲ್ಲಿ ಧೋನಿ ಭಾರತದ ನೆಚ್ಚಿನ ಸೆಲೆಬ್ರೆಟಿಗಳಲ್ಲಿ ಅತಿ ಎತ್ತರದ ಸ್ಥಾನ ಪಡೆದಿದ್ದಾರೆ. ಅದೂ ಕೂಡ ಸೆನ್ಷೇಷನಲ್​ ಕ್ಯಾಪ್ಟನ್ ವಿರಾಟ್​ ಕೊಹ್ಲಿ, ಕ್ರಿಕೆಟ್ ದೇವರು ಸಚಿನ್​ ತೆಂಡೂಲ್ಕರ್​​ರನ್ನೇ ಹಿಂದಿಕ್ಕಿ ಎಂ.ಎಸ್​. ಧೋನಿ ಮೊದಲ ಸ್ಥಾನ ಪಡೆದಿದ್ದಾರೆ. 40 ಲಕ್ಷ ಮಂದಿ ಪಾಲ್ಗೊಂಡಿದ್ದ ಆನ್​ಲೈನ್​ ಸರ್ವೆಯಲ್ಲಿ ದೇಶದ ಅಗ್ರ ಕ್ರಿಕೆಟರ್ ಎಂಬ ಪಟ್ಟ ಧೋನಿ ಅವರಿಗೆ ಸಿಕ್ಕಿದೆ. ಸಮೀಕ್ಷೆಯಲ್ಲಿ ಧೋನಿಗೆ ಶೇ.7.7 ರಷ್ಟು ಮತಗಳು ಬಿದ್ದಿವೆ. ಶೇ.6.8ರಷ್ಟು ಮತಗಳನ್ನು ಪಡೆದಿರುವ ಸಚಿನ್ ತೆಂಡೂಲ್ಕರ್ ಅವರು ಕ್ರೀಡಾಪಟುಗಳ ಪೈಕಿ 2ನೇ ಸ್ಥಾನ ಪಡೆದರೆ, ಒಟ್ಟಾರೆ 6ನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ  ಶೇ.4.8ರಷ್ಟು ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಕ್ರೀಡಾಪಟುಗಳ ಲಿಸ್ಟ್​ನಲ್ಲಿ ಮೊದಲ ಸ್ಥಾನದಲ್ಲಿರುವ ಮಾಹಿ, ಭಾರತೀಯರು ಅತಿಹೆಚ್ಚು ಇಷ್ಟಪಡುವ ವ್ಯಕ್ತಿಗಳ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದ್ದಾರೆ. ಮೊದಲ ಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿದ್ದಾರೆ. ಹೀಗೆ ಈ ಸರ್ವೆ ಕೇವಲ 40 ಲಕ್ಷ ಜನರ ಅಭಿಪ್ರಾಯವಾದರೂ, ಧೋನಿ ಅವರ ಅಭಿಮಾನಿಗಳು​​ ಭಾರತದಲ್ಲಿ ಎಷ್ಟಿದ್ದಾರೆ ಎಂದು ಗೋಚರಿಸುತ್ತಿದೆ. ಅಲ್ಲದೆ ಮಾಹಿ ಎಷ್ಟರ ಮಟ್ಟಿಗೆ ಭಾರತೀಯರ ಪ್ರೀತಿಯನ್ನು ಸಂಪಾದಿಸಿದ್ದಾರೆ ಎಂದೂ ಸೂಚಿಸುತ್ತಿದೆ.
First published:July 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ