ನ್ಯೂಸ್ 18 ಕನ್ನಡ
2019ರ ವಿಶ್ವಕಪ್ಗೆ ಇನ್ನೇನು ಕೆಲವು ತಿಂಗಳುಗಳೇ ಬಾಕಿ ಉಳಿದಿದ್ದು, ಎಲ್ಲಾ ತಂಡಗಳು ಸಖಲ ತಯಾರಿಯಲ್ಲಿ ತೊಡಗಿವೆ. ಈ ಮಧ್ಯೆ ಕಳೆದ ಕೆಲ ತಿಂಗಳುಗಳಿಂದ ಚರ್ಚೆಗೆ ಗ್ರಾಸವಾಗಿರುವ ಟೀಂ ಇಂಡಿಯಾ ಮಾಜಿ ನಾಯಕ
ಎಂ. ಎಸ್ ಧೋನಿ ವಿಚಾರವಾಗಿ ಸುನೀಲ್ ಗವಾಸ್ಕರ್ ಮಾತನಾಡಿದ್ದಾರೆ.
2019ರ ವಿಶ್ವಕಪ್ಗೆ ಧೋನಿ ಬೇಕೆ ಎಂಬ ಪ್ರಶ್ನೆಗೆ ಗವಾಸ್ಕರ್ ಅವರು, 'ಧೋನಿ ಅವರ ಅವಶ್ಯಕತೆ
ಭಾರತ ತಂಡಕ್ಕೆ 2019ರ ವಿಶ್ವಕಪ್ನಲ್ಲಿ ಮುಖ್ಯವಾಗಿದೆ. ಅಲ್ಲದೆ ನಾಯಕ ವಿರಾಟ್ ಕೊಹ್ಲಿ ಅವರಿಗೂ ಧೋನಿಯ ಮಾರ್ಗದರ್ಶನ ಬೇಕೆ ಬೇಕು' ಎಂದು ಹೇಳಿದ್ದಾರೆ. ಈ ಹಿಂದೆ ಧೋನಿ ಅವರ ನಾಯಕತ್ವದಲ್ಲಿ ಹಾಗೂ ಅವರ ಅನಭುವದಿಂದ ಅನೇಕ ಪಂದ್ಯಗಳು ಭಾರತ ಗೆದ್ದುಕೊಂಡಿವೆ. ಅವರು ಮುಂಬರುವ ವಿಶ್ವಕಪ್ನಲ್ಲಿ ಆಡಲೇಬೇಕು. ಇಷ್ಟೇ ಅಲ್ಲದೆ ವಿಶ್ವಕಪ್ 50 ಓವರ್ನ ಪಂದ್ಯವಾಗಿದ್ದರಿಂದ ಧೋನಿ ಅವರು ಫೀಲ್ಡಿಂಗ್ ಹೊಂದಾಣಿಕೆಯಲ್ಲಿ ಜೊತೆಗೆ ಬೌಲರ್ಗಳ ಜೊತೆ ಎಲ್ಲಿ ಬಾಲ್ ಎಸೆಯಬೇಕು, ಹೇಗೆ ಬಾಲ್ ಎಸೆಯಬೇಕು ಎಂದು ಹಿಂದಿಯಲ್ಲಿ ವಿಕೆಟ್ ಹಿಂಬದಿಯಿಂದ ಮಾತನಾಡುವ ಚಾತುರ್ಯ ವಿಶ್ವಕಪ್ನಲ್ಲಿ ಮುಖ್ಯವಾಗುತ್ತದೆ. ಅದು ಧೋನಿಯವರಿಂದ ಮಾತ್ರ ಸಾಧ್ಯ, ಇದು ಕೊಹ್ಲಿಗೆ ತುಂಬಾನೆ ಸಹಾಯವಾಗಲಿದೆ ಎಂದಿದ್ದಾರೆ.
ಇದನ್ನೂ ಓದಿ:
ಧೋನಿಗೆ 80 ವರ್ಷವಾಗಿ ವೀಲ್ ಚೇರ್ನಲ್ಲಿ ಕುಳಿತರು ನನ್ನ ತಂಡದಲ್ಲಿ ಸ್ಥಾನವಿದೆ: ಡಿವಿಲಿಯರ್ಸ್
ಎಂ. ಎಸ್ ಧೋನಿ ಅವರು ಕಳೆದ ಕೆಲ ತಿಂಗಳುಗಳಿಂದ ಕಳಪೆ ಫಾರ್ಮ್ನಲ್ಲಿದ್ದು, ರನ್ ಗಳಿಸುವಲ್ಲಿ ವಿಫಲರಾಗಿದ್ದಾರೆ. ಅಲ್ಲದೆ ಮುಂದಿನ ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟಿ-20 ಸರಣಿಯಿಂದ ಧೋನಿ ಅವರನ್ನು ತಂಡದಿಂದ ಕೈ ಬಿಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ