Suresh Raina: ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ನಿವೃತ್ತಿ ಘೋಷಿಸಿದ ಮಿಸ್ಟರ್​ ಐಪಿಎಲ್​​! ನೋವಿನ ವಿದಾಯ

Suresh Raina: ಭಾರತದ ಮಾಜಿ ಆಟಗಾರ, ಮಿ.ಐಪಿಎಲ್​ ಖ್ಯಾತಿಯ ಸುರೇಶ್ ರೈನಾ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ನಿವೃತ್ತಿ ಘೋಷಿಸಿದ್ದಾರೆ. 35 ವರ್ಷ ವಯಸ್ಸಿನ ಸುರೇಶ್​ ರೈನಾ ಟೀಂ ಇಂಡಿಯಾಗೆ ವಿದಾಯದ ಬಳಿಕ ಇದೀಗ ಐಪಿಎಲ್​ಗೂ ವಿದಾಯ ಹೇಳಿದ್ದಾರೆ. 

ಸುರೇಶ್​ ರೈನಾ

ಸುರೇಶ್​ ರೈನಾ

  • Share this:
ಭಾರತದ ಮಾಜಿ ಆಟಗಾರ, ಮಿ.ಐಪಿಎಲ್​ ಖ್ಯಾತಿಯ ಸುರೇಶ್ ರೈನಾ (Suresh Raina) ಇಂಡಿಯನ್ ಪ್ರೀಮಿಯರ್ ಲೀಗ್‌ಗೆ (IPL) ನಿವೃತ್ತಿ ಘೋಷಿಸಿದ್ದಾರೆ. 35 ವರ್ಷ ವಯಸ್ಸಿನ ಸುರೇಶ್​ ರೈನಾ ಟೀಂ ಇಂಡಿಯಾಗೆ (Team India) ವಿದಾಯದ ಬಳಿಕ ಇದೀಗ IPL ​ಗೂ ವಿದಾಯ ಹೇಳಿದ್ದಾರೆ.  2021 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ನಲ್ಲಿ (CSK) ಕಾಣಿಸಿಕೊಂಡರು. ಈ ವರ್ಷದ ಆರಂಭದಲ್ಲಿ ನಡೆದ ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ಧೋನಿ ನೇತೃತ್ವದ ಸಿಎಸ್‌ಕೆ ತಂಡವು ರೈನಾ ಅವರನ್ನು ಉಳಿಸಿಕೊಂಡಿಲ್ಲ. ಅಲ್ಲದೇ ಅವರನ್ನು ಯಾರೂ ಸಹ ಖರೀದಿಸಿರಲಿಲ್ಲ. ಇದರಿಂದಾಗಿ ಅವರು ಇದೀಗ ರೈನಾ ಐಪಿಎಲ್​ಗೂ ಸಹ ವಿದಾಯ ಹೇಳಿದ್ದಾರೆ. ಸುರೇಶ್ ರೈನಾ 2002ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಸುಮಾರು 2 ದಶಕಗಳ ನಂತರ ಅವರು ತಮ್ಮ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ಅವರು ಸಾಮಾಜಿಕ ಜಾಲತಾಣದಲ್ಲಿ ಘೋಷಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಬಿಸಿಸಿಐ, ಉತ್ತರ ಪ್ರದೇಶ ಕ್ರಿಕೆಟ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ಗೆ ಧನ್ಯವಾದ ಹೇಳಿದ್ದಾರೆ.

ಐಪಿಎಲ್​ಗೂ ವಿದಾಯ ಹೇಳಿದ ರೈನಾ:

ಐಪಿಎಲ್​ನ ನಲ್ಲಿ ಮಿಸ್ಟರ್​ ಐಪಿಎಲ್​ ಎಂದೇ ಖ್ಯಾತರಾಗಿರುವ ಸುರೇಶ್​ ರೈನಾ ಅವರು ಇದೀಗ ಟೀಂ ಇಂಡಿಯಾದ ನಂತರ ಐಪಿಎಲ್​ಗೂ ವಿದಾಯ ಘೋಷಿಸಿದ್ದಾರೆ. 2023ರ ಐಪಿಎಲ್‌ಗೆ ಸಿದ್ಧತೆಗಳು ಆರಂಭವಾಗುತ್ತಿರುವ ನಡುವೆ ಸುರೇಶ್‌ ರೈನಾ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ನಡೆದ ಐಪಿಎಲ್ 2022ರ ಮೆಗಾ ಹರಾಜಿನಲ್ಲಿ ಅವರನ್ನು ಯಾವ ಪ್ರಾಂಚೈಸಿಗಳೂ ಸಹ ಖರೀದಿಸಿರಲಿಲ್ಲ. ಇದರಿಂದ ಇದಿಗ ರೈನಾ ವಿದಾಯ ಹೇಳಿದ್ದಾರೆ ಎನ್ನಲಾಗುತ್ತಿದೆ.

ಈ ಕುರಿತು ಟ್ವೀಟ್​ ಮಾಡಿರುವ ಅವರು, ‘ನನ್ನ ದೇಶ ಮತ್ತು ಯುಪಿ ರಾಜ್ಯವನ್ನು ಪ್ರತಿನಿಧಿಸುವುದು ಒಂದು ಸಂಪೂರ್ಣ ಗೌರವವಾಗಿದೆ. ನಾನು ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಿಂದ ನಿವೃತ್ತಿ ಘೋಷಿಸಲು ಬಯಸುತ್ತೇನೆ. ನಾನು @BCCI, @UPCACricket, @ChennaiIPL, @ShuklaRajiv ಸರ್ ಮತ್ತು ನನ್ನ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಅವರ ಬೆಂಬಲ ಮತ್ತು ನನ್ನ ಸಾಮರ್ಥ್ಯದಲ್ಲಿ ಅಚಲವಾದ ನಂಬಿಕೆ ಇದೆ‘ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Virat Kohli: ಧೋನಿ ಒಬ್ರಿಗೆ ನನ್ನ ಮೇಲೆ ಕಾಳಜಿ ಇರೋದು ಅಂತ ಸುಳ್ಳು ಹೇಳಿದ್ರಾ? ವಿರಾಟ್​ಗೆ ಬಿಸಿಸಿಐ ಕ್ಲಾಸ್​!

ಮಿಸ್ಟರ್​ ಐಪಿಎಲ್​ ಆಗಿದ್ದ ರೈನಾ:

ಹೌದು, ಸುರೇಶ್​ ರೈನಾ ಅವರನ್ನು ಐಪಿಎಲ್​ ನಲ್ಲಿ ಮಿಸ್ಟರ್​ ಐಪಿಎಲ್​ ಎಂದೇ ಕರೆಯಲಾಗುತ್ತಿತ್ತು. ಐಪಿಎಲ್ ಆರಂಭದಿಂದಲೂ ಅವರು ಧೋನಿ ನಾಯಕತ್ವದ ಚೆನ್ನೈ ಸೂಪರ್​ ಕಿಂಗ್ಸ್ ತಂಡದ ಪರ ಬ್ಯಾಟ್​ ಬೀಸುತ್ತಿದ್ದರು. ಅನೇಕ ಪಂದ್ಯಗಳನ್ನು ಹಾಗೂ ಚೆನ್ನೈ 4 ಬಾರಿ ಚಾಂಪಿಯನ್​ ಆಗಲು ರೈನಾ ಕೊಡುಗೆಯನ್ನು ಇಲ್ಲಿ ಮರೆಯುವಂತಿಲ್ಲ. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದವರಲ್ಲಿ ಒಬ್ಬರಾಗಿದ್ದಾರೆ. 205 ಐಪಿಎಲ್ ಪಂದ್ಯಗಳಲ್ಲಿ, ರೈನಾ 32.5 ಸರಾಸರಿಯಲ್ಲಿ 5528 ರನ್ ಗಳಿಸಿದ್ದಾರೆ ಮತ್ತು ಸ್ಟ್ರೈಕ್ ರೇಟ್ 136.7 ಆಗಿದೆ.

ಇದರ ಜೊತೆಗೆ  69 ಇನ್ನಿಂಗ್ಸ್‌ಗಳಲ್ಲಿ 25 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು ಮೈದಾನದಲ್ಲಿ ಅತ್ಯುತ್ತಮ ಫೀಲ್ಡರ್‌ಗಳಲ್ಲಿ ಒಬ್ಬರಾಗಿದ್ದರು. ಅವರು ಐಪಿಎಲ್‌ನಲ್ಲಿ 109 ಕ್ಯಾಚ್‌ಗಳು ಮತ್ತು 15 ರನ್ ಔಟ್ ಸೇರಿದಂತೆ 124 ವಿಕೆಟ್ ಗಳನ್ನು ಬಲಿ ಪಡೆದಿದ್ದಾರೆ.

ಇದನ್ನೂ ಓದಿ: IND vs SL Asia Cup 2022: ಇಂದು ಭಾರತ-ಶ್ರೀಲಂಕಾ ಪಂದ್ಯ, ಇಲ್ಲಿದೆ ಉಭಯ ತಂಡಗಳ ಹೆಡ್​ ಟು ಹೆಡ್​

ಟೀಂ ಇಂಡಿಯಾಗೆ ವಿದಾಯ ಹೇಳಿದ್ದ ರೈನಾ: 

ರೈನಾ 15 ಆಗಸ್ಟ್ 2020 ರಂದು ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಅದೇ ದಿನ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ರೈನಾ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟಿಂಗ್ ಲೈನ್‌ಅಪ್‌ಗೆ ಬೆನ್ನೆಲುಬಾಗಿದ್ದರು ಎಂದರೂ ತಪ್ಪಾಗಲಾರದು.
Published by:shrikrishna bhat
First published: