ಯುರೋಪಾದಲ್ಲಿ ಮನುಷ್ಯರು ವಾಸಿಸಬಹುದಾ..? ನಾಸಾ ಹೇಳಿದ್ದೇನು..? ಎಲ್ಲಿದೆ ಈ ಯುರೋಪಾ

2024ರಲ್ಲಿ ಬಾಹ್ಯಾಕಾಶ ನೌಕೆ ಈ ಉಪಗ್ರಹಕ್ಕೆ ಹೋಗುವ ನಿರ್ಧಾರವನ್ನು ತೆಗೆದುಕೊಂಡಿದ್ದು ಪ್ರಯಾಣ ಮಾಡುವ ಗಗನ ಯಾತ್ರಿಗಳು ತಮ್ಮೊಂದಿಗೆ ಗ್ರಹದ ಮೇಲೆ ಸಮೀಕ್ಷೆ ನಡೆಸಲು ಸಹಕಾರಿಯಾಗಿರುವ ಉಪಕರಣವನ್ನು ಸಾಗಿಸಲಿದ್ದಾರೆ. ಇದಲ್ಲದೆ ಈ ಉಪಕರಣವು ಧೂಳು ಹಾಗೂ ಅನಿಲಗಳ ಮಾದರಿಯನ್ನು ಸಂಗ್ರಹಿಸಲಿದೆ

ನಾಸಾ ತೆಗೆದಿರುವ ಯುರೋಪದ ಚಿತ್ರ

ನಾಸಾ ತೆಗೆದಿರುವ ಯುರೋಪದ ಚಿತ್ರ

 • Share this:

  ಭೂಮಿಯಾಚೆಗಿನ ಜೀವನದ ಅನ್ವೇಷಣೆಯನ್ನು ವಿಜ್ಞಾನಿಗಳು ನಡೆಸುತ್ತಿರುವುದು ಇಂದು ಮೊನ್ನೆಯ ಕಥೆಯಲ್ಲ. ಈ ಅನ್ವೇಷಣೆ ಹಲವಾರು ದಶಕಗಳದ್ದು. ಇದೀಗ ನ್ಯಾಶನಲ್ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಶನ್ (ನಾಸಾ) ಗುರುಗ್ರಹದ ಉಪಗ್ರಹವಾದ ಯುರೋಪಾದ ಮೇಲೆ ಜೀವನ ಮಾಡಬಹುದೇ ಎನ್ನುವ ಸಾಧ್ಯತೆಯ ಬಗ್ಗೆ ಅನ್ವೇಷಣೆ ನಡೆಸುತ್ತಿದೆ. ಯುರೋಪಾದೊಂದಿಗೆ ಗುರು ಗ್ರಹದ ಇತರ ಉಪಗ್ರಹಗಳನ್ನು ಇಟಲಿಯ ಖಗೋಳ ವಿಜ್ಞಾನಿ ಗೆಲಿಲಿಯೋ ಗೆಲಿಲಿ ಕಂಡುಹಿಡಿದರು. ಆದರೆ ವಿಜ್ಞಾನಿಗಳಿಗೆ ಗ್ರಹದ ಸಂಕೀರ್ಣತೆಗಳು ಮತ್ತು ಅದರ ಉಪಗ್ರಹವನ್ನು ಕುರಿತು ತಿಳಿದುಕೊಳ್ಳಲು ಮಾತ್ರ ಸಾಧ್ಯವಾಯಿತು.


  ನಾಸಾ ತನ್ನ ಬ್ಲಾಗ್‌ನಲ್ಲಿ ಯುರೋಪಾದಲ್ಲಿನ ವಾತಾವರಣವು ಮನುಷ್ಯನ ಜೀವನ ನಿರ್ವಹಣೆಗೆ ಸಾಧಕವಾಗಿದೆ ಎಂದು ತಿಳಿಸಿದೆ. ಏಕೆಂದರೆ ಇದು ಉಪ್ಪುನೀರಿನ ಸರೋವರವನ್ನು ಹೊಂದಿದ್ದು ಈ ಸರೋವರವು ಮಂಜುಗಡ್ಡೆಯ ದಪ್ಪನೆಯ ಪದರದಡಿಯಲ್ಲಿದೆ ಎಂದು ತಿಳಿಸಿದೆ.


  ನೇಚರ್ ಆಸ್ಟ್ರೋನಮಿಯಲ್ಲಿ ಪ್ರಕಟಗೊಂಡ ಅಧ್ಯಯನದ ಪ್ರಮುಖ ಲೇಖಕ ಎಮಿಲಿ ಕಾಸ್ಟೆಲ್ಲೊ ಹೇಳುವಂತೆ ’’ನಾವು ಪ್ರಾಚೀನ, ರಾಸಾಯನಿಕ ಅಣುಗಳನ್ನು ಪತ್ತೆ ಮಾಡಬೇಕೆಂದು ಬಯಸಿದಲ್ಲಿ ಪರಿಣಾಮ ಬೀರಿರುವ ವಲಯದ ಪರಿಣಾಮಗಳತ್ತ ಗಮನಹರಿಸಬೇಕು. ವಿನಾಶಕಾರಿ ವಿಕಿರಣಕ್ಕೆ ಒಡ್ಡಿಕೊಂಡಿರಬಹುದಾದ ಆ ವಲಯಕ್ಕಿಂತ ಆಳವಿಲ್ಲದ ಪ್ರದೇಶಗಳಲ್ಲಿ ರಾಸಾಯನಿಕ ಅಣುಗಳು ಇರಬಹುದು’’, ಎಂದು ಕಾಸ್ಟೆಲ್ಲೊ ತಿಳಿಸಿದ್ದಾರೆ. ಹವಾಯಿ ವಿಶ್ವವಿದ್ಯಾಲಯದ ಗ್ರಹಗಳ ಸಂಶೋಧನ ವಿಭಾಗದಲ್ಲಿ ವಿಜ್ಞಾನಿಯಾಗಿ ಕಾಸ್ಟೆಲ್ಲೊ ಕಾರ್ಯನಿರ್ವಹಿಸುತ್ತಿದ್ದಾರೆ.


  ಹೊಸ ಯೋಜನೆಯಾದ ಯುರೋಪಾ ಕ್ಲಿಪ್ಪರ್ ಗುರುಗ್ರಹವನ್ನು ಪರಿಭ್ರಮಿಸುವಾಗ ಯುರೋಪಾದ ನಿಕಟ ಸಮೀಪನಗಳ ಸರಣಿಯನ್ನು ಹೊಂದಿರುತ್ತದೆ. 2024ರಲ್ಲಿ ಬಾಹ್ಯಾಕಾಶ ನೌಕೆ ಈ ಉಪಗ್ರಹಕ್ಕೆ ಹೋಗುವ ನಿರ್ಧಾರವನ್ನು ತೆಗೆದುಕೊಂಡಿದ್ದು ಪ್ರಯಾಣ ಮಾಡುವ ಗಗನ ಯಾತ್ರಿಗಳು ತಮ್ಮೊಂದಿಗೆ ಗ್ರಹದ ಮೇಲೆ ಸಮೀಕ್ಷೆ ನಡೆಸಲು ಸಹಕಾರಿಯಾಗಿರುವ ಉಪಕರಣವನ್ನು ಸಾಗಿಸಲಿದ್ದಾರೆ. ಇದಲ್ಲದೆ ಈ ಉಪಕರಣವು ಧೂಳು ಹಾಗೂ ಅನಿಲಗಳ ಮಾದರಿಯನ್ನು ಸಂಗ್ರಹಿಸಲಿದೆ ಎಂಬುದಾಗಿ ಅಧ್ಯಯನಗಳಿಂದ ತಿಳಿದು ಬಂದಿದೆ.


  ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯ ಯುರೋಪಾ ವಿಜ್ಞಾನಿ ಸಿಂಥಿಯಾ ಫಿಲಿಪ್ಸ್, “ಈ ಕಾರ್ಯವು ಸೌರಮಂಡಲದಾದ್ಯಂತದ ಮೇಲ್ಮೈಗಳಲ್ಲಿನ ಪ್ರಕ್ರಿಯೆಗಳ ಕುರಿತು ನಮ್ಮ ತಿಳುವಳಿಕೆಯನ್ನು ಹೆಚ್ಚಿಸುತ್ತದೆ" ಎಂಬ ಅನಿಸಿಕೆ ವ್ಯಕ್ತಪಡಿಸಿದ್ದಾರೆ.


  ಅಧ್ಯಯನದ ಸಹ-ಲೇಖಕರೂ ಆಗಿರುವ ಫಿಲಿಪ್ಸ್ ಹೇಳುವಂತೆ ನಾವು ಭೌತಿಕ ಗುಣಲಕ್ಷಣಗಳನ್ನು ಅರ್ಥಮಾಡಿಕೊಳ್ಳಲು ಬಯಸಿದಾಗ ಗ್ರಹಗಳು ಸಾಮಾನ್ಯವಾಗಿ ಹೇಗೆ ವಿಕಸನಗೊಳ್ಳುತ್ತವೆ ಮತ್ತು ಅವುಗಳ ಚಟುವಟಿಕೆಯ ಬಗೆಗೆ ತಿಳಿದುಕೊಳ್ಳಬಹುದಾಗಿದೆ ಎಂದು ಹೇಳಿದ್ದಾರೆ. ಗುರುಗ್ರಹವು ಐದನೇ ಗ್ರಹವಾಗಿದ್ದು ಸೌರವ್ಯೂಹದ ಅತಿದೊಡ್ಡ ಗ್ರಹವಾಗಿದೆ.


  ಸೌರಮಂಡಲದ ಇತರ ಎಲ್ಲಾ ಗ್ರಹಗಳಿಗಿಂತ ಈ ಗ್ರಹವು ಎರಡು ಪಟ್ಟು ಹೆಚ್ಚು ದ್ರವ್ಯರಾಶಿಯನ್ನು ಹೊಂದಿದೆ. ಯುರೋಪಾದ ಗುರುಗ್ರಹದ ಹಿಮಾವೃತ ಉಪಗ್ರಹವೆಂದೆನಿಸಿದ್ದು ಇದು ಮಾನವನಿಗೆ ವಾಸಯೋಗ್ಯವೇ ಎಂಬುದನ್ನು ತಿಳಿದುಕೊಳ್ಳಲು ಇದರ ಆಳವನ್ನು ಅಗೆಯಬೇಕಾಗುತ್ತದೆ. ವಿಜ್ಞಾನಿಗಳು ಹೇಳಿರುವಂತೆ ಇದು ಉಪ್ಪುನೀರಿನ ಸರೋವರವನ್ನು ಒಳಗೊಂಡಿದ್ದು ಮಂಜುಗಡ್ಡೆಯ ದಪ್ಪನೆಯ ಪದರದಡಿಯಲ್ಲಿದೆ.


  ಇದನ್ನೂ ಓದಿ: Karnataka 2nd PUC Results: ಜು.20ಕ್ಕೆ ಪಿಯು ಫಲಿತಾಂಶ ಪ್ರಕಟ; ರಿಜಿಸ್ಟರ್​ ನಂಬರ್​ ಇಲ್ಲದೇ ಈ ಬಾರಿ ರಿಸಲ್ಟ್​ ನೋಡುವುದು ಹೇಗೆ?

  ಯುರೋಪಾದಲ್ಲಿ ಜೀವಿಗಳು ಅಸ್ವಿತ್ವದಲ್ಲಿದ್ದಲ್ಲಿ ಉಪಗ್ರಹದ ಮೇಲ್ಮೈಯಲ್ಲಿ ಇದು ಗೋಚರಿಸುತ್ತದೆ ಮತ್ತು ಇದನ್ನು ರೊಬೋಟ್‌ಗಳು ಗುರುತಿಸುತ್ತವೆ.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: