• Home
  • »
  • News
  • »
  • sports
  • »
  • T20 World Cup: ಟಿ20 ವಿಶ್ವಕಪ್​ನಿಂದ ದೀಪಕ್​ ಚಹಾರ್ ಔಟ್? ಯಾರಿಗೆ ಸಿಗಲಿದೆ ಆಸೀಸ್​ ಟಿಕೆಟ್​?

T20 World Cup: ಟಿ20 ವಿಶ್ವಕಪ್​ನಿಂದ ದೀಪಕ್​ ಚಹಾರ್ ಔಟ್? ಯಾರಿಗೆ ಸಿಗಲಿದೆ ಆಸೀಸ್​ ಟಿಕೆಟ್​?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

T20 World Cup: ಟಿ20 ವಿಶ್ವಕಪ್‌ಗಾಗಿ ಟೀಂ ಇಂಡಿಯಾ ಆಸ್ಟ್ರೇಲಿಯಾ ತಲುಪಿದೆ. ಆದರೆ, ಇದುವರೆಗೂ 15ನೇ ಆಟಗಾರನ ಹೆಸರನ್ನು ಮಂಡಳಿ ಪ್ರಕಟಿಸಿಲ್ಲ. ಜಸ್ಪ್ರೀತ್ ಬುಮ್ರಾ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದು, ಚಹಾರ್​ ಸಹ ಟೂರ್ನಿಯಿಂದ ಔಟ್​ ಆಗುವ ಸಾಧ್ಯತೆ ಇದೆ.

  • Share this:

ಟಿ20 ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾ ಸಿದ್ಧತೆಗಾಗಿ ಆಸ್ಟ್ರೇಲಿಯಾ ತಲುಪಿದೆ. ಟಿ20 ಟೂರ್ನಿಯ (T20 World Cup) 8ನೇ ಸೀಸನ್ ಅಕ್ಟೋಬರ್ 16ರಿಂದ ಆರಂಭವಾಗಲಿದೆ. ಆದರೆ, ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ (Jasprit Bumrah) ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹೊರಗುಳಿದಿದ್ದಾರೆ. ಅವರ ಸ್ಥಾನದಲ್ಲಿ ಮೊಹಮ್ಮದ್ ಶಮಿ (Jasprit Bumrah) 15 ಸದಸ್ಯರ ತಂಡದಲ್ಲಿ ಸ್ಥಾನ ಪಡೆಯಬಹುದು ಎನ್ನಲಾಗುತ್ತಿದೆ. ಶಮಿ ಪ್ರಸ್ತುತ ಎನ್‌ಸಿಎಯಲ್ಲಿದ್ದು, ಶೀಘ್ರದಲ್ಲೇ ಆಸ್ಟ್ರೇಲಿಯಾಕ್ಕೆ ಹಾರುವ ಸಾಧ್ಯತೆಯಿದೆ. ಶಮಿ ಮೊದಲು ಸ್ಟ್ಯಾಂಡ್‌ಬೈನಲ್ಲಿದ್ದರು. ಈಗ ಮೊಹಮ್ಮದ್ ಸಿರಾಜ್ (Mohammed Siraj) ಸ್ಟ್ಯಾಂಡ್‌ಬೈನಲ್ಲಿ ಸ್ಥಾನ ಪಡೆಯಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಅವರು ಈ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಅದೇ ಸಮಯದಲ್ಲಿ ವೇಗದ ಬೌಲರ್ ದೀಪಕ್ ಚಹಾರ್ (Deepak Chahar) ಕೂಡ ಗಾಯಗೊಂಡಿದ್ದಾರೆ. ಅವರ ಸ್ಥಾನದಲ್ಲಿ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಅವರನ್ನು ಟಿ20 ವಿಶ್ವಕಪ್‌ಗೆ ಸ್ಟ್ಯಾಂಡ್‌ಬೈ ಆಗಿ ಆಯ್ಕೆ ಮಾಡಬಹುದು ಎಂದು ವರದಿಯಾಗಿದೆ.


ಮೊಹಮ್ಮದ್ ಸಿರಾಜ್​ಗೆ ಸ್ಥಾನ?:


ಮೊಹಮ್ಮದ್ ಸಿರಾಜ್ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ರಾಂಚಿಯಲ್ಲಿ ನಡೆದ ಎರಡನೇ ಪಂದ್ಯದಲ್ಲಿ 10 ಓವರ್ ಗಳಲ್ಲಿ 38 ರನ್ ನೀಡಿ 3 ವಿಕೆಟ್ ಪಡೆದರು. ಅದೇ ವೇಳೆ ದೆಹಲಿಯಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ 17 ರನ್ ನೀಡಿ 2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಭಾರತ ತಂಡ 2-1 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದೆ. ರವಿಶಾಸ್ತ್ರಿಯಿಂದ ಹಿಡಿದು ಆಸ್ಟ್ರೇಲಿಯಾದ ಮಾಜಿ ದಿಗ್ಗಜ ಶೇನ್ ವ್ಯಾಟ್ಸನ್ ವರೆಗೆ ಸಿರಾಜ್ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಬಗ್ಗೆ ಒಲವು ತೋರಿದ್ದಾರೆ. ಆದರೆ ದೀಪಕ್ ಚಹಾರ್ ವಿಶ್ವಕಪ್​ನಿಂದ ಔಟ್​ ಆಗಿರುವ ಕುಜರಿತು ಬಿಸಿಸಿಐ ಈವರೆಗೂ ಅಧಿಕೃತವಾಗಿ ಮಾಹಿತಿ ನೀಡಿಲ್ಲ.


ಶಾರ್ದೂಲ್ ಅದ್ಭುತ ಪ್ರದರ್ಶನ:


ವೇಗದ ಬೌಲರ್ ಮತ್ತು ಆಲ್ ರೌಂಡರ್ ಶಾರ್ದೂಲ್ ಠಾಕೂರ್ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ 3 ವಿಕೆಟ್ ಪಡೆದರು. ಮೊದಲ ಏಕದಿನ ಪಂದ್ಯದಲ್ಲೂ ಅವರು 33 ರನ್ ಗಳಿಸಿದ್ದರು. ಈ ಕ್ರಮಾಂಕದಲ್ಲಿ ಅವರು ಬ್ಯಾಟಿಂಗ್​ನಲ್ಲಿಯೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದ್ದರಿಂದ ಅವರು ಆಸ್ಟ್ರೇಲಿಯಾಕ್ಕೆ ಹೋಗಬಹುದು ಎಂದು ಸ್ಪೋರ್ಟ್ಸ್ ಟಾಕ್’ ವರದಿ ಮಾಡಿದೆ. ಇದೀಗ ಹಾರ್ದಿಕ್ ಪಾಂಡ್ಯ ಮಾತ್ರ ಭಾರತ ತಂಡದಲ್ಲಿ ಆಲ್ ರೌಂಡರ್ ಆಗಿ ಫಿಟ್ ಆಗಿದ್ದಾರೆ. ರವೀಂದ್ರ ಜಡೇಜಾ ಕೂಡ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದಾರೆ. ಮತ್ತೊಂದೆಡೆ, ಅಕ್ಷರ್ ಪಟೇಲ್ ಈವರೆಗೂ ತಮ್ಮ ಉತ್ತಮ ಪ್ರದರ್ಶನ ನೀಡಿಲ್ಲ.


ಇದನ್ನೂ ಓದಿ: T20 World Cup 2022: ಕ್ರಿಕೆಟ್​ ಪ್ರೇಮಿಗಳಿಗೆ ಭರ್ಜರಿ ಅವಕಾಶ​, ದೊಡ್ಡ ಪರೆದಯಲ್ಲಿ ಕಣ್ತುಂಬಿಕೊಳ್ಳಿ ಭಾರತ-ಪಾಕ್ ಹೈವೋಲ್ಟೇಜ್ ಕದನ


ಬಿಸಿಸಿಐ ಶೀಘ್ರದಲ್ಲೇ ಈ ಆಟಗಾರರನ್ನು ಆಸ್ಟ್ರೇಲಿಯಾಕ್ಕೆ ಕಳುಹಿಸಬಹುದು, ಇದರಿಂದ ಅವರು ಅದಕ್ಕೆ ತಕ್ಕಂತೆ ಹೊಂದಿಕೊಳ್ಳಬಹುದು ಎನ್ನಲಾಗಿದ್ದು, ಅಕ್ಟೋಬರ್ 23 ರಂದು ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಬೇಕಾಗಿದೆ.


ಭಾರತ-ಪಾಕ್ ಮುಖಾಮುಖಿ:


ಟೀಂ ಇಂಡಿಯಾ ವಿಶ್ವಕಪ್ ಅಭಿಯಾನದ ಆರಂಭಿಕ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸೆಣಸಲಿದೆ. ಕಳೆದ ವರ್ಷ, ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾವನ್ನು ಸೋಲಿಸಿದ್ದು ಪಾಕಿಸ್ತಾನ. ಆದರೆ ಈ ಬಾರಿ ಆ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಭಾರತ ಸಿದ್ಧವಾಗಿದೆ.


ಇದನ್ನೂ ಓದಿ: IND vs NZ: ಟಿ20 ವಿಶ್ವಕಪ್​ ನಂತರ ಭಾರತ-ನ್ಯೂಜಿಲೆಂಡ್​ ಸರಣಿ, ವೇಳಾಪಟ್ಟಿ ಪ್ರಕಟ


ಅಕ್ಟೋಬರ್ 23 ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಪಂದ್ಯ ನಡೆಯಲಿದೆ. ಮುಖ್ಯವಾಗಿ, ಸುಮಾರು 1 ಲಕ್ಷ ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿರುವ ಎಂಸಿಜಿಯಲ್ಲಿ ಈ ಪಂದ್ಯದ ಎಲ್ಲಾ ಟಿಕೆಟ್‌ಗಳು ಒಂದು ತಿಂಗಳು ಮುಂಚಿತವಾಗಿ ಮಾರಾಟವಾಗಿವೆ. ಹೀಗಾಗಿ ಈ ಅಮೋಘ ಪಂದ್ಯದ ವೇಳೆ ಎರಡೂ ತಂಡಗಳಿಗೆ ಮೈದಾನದಲ್ಲಿ ಅಭಿಮಾನಿಗಳಿಂದ ಉತ್ತಮ ಬೆಂಬಲ ಸಿಗಲಿದೆ.

Published by:shrikrishna bhat
First published: