ಕ್ರಿಸ್ಮಸ್ ಆಚರಿಸಿದ್ದೇ ತಪ್ಪಾ..? ಕ್ರಿಕೆಟಿಗ ಮೊಹಮ್ಮದ್ ಕೈಫ್ ವಿರುದ್ಧ ಟೀಕೆಗಳ ಸುರಿಮಳೆ


Updated:December 26, 2017, 4:22 PM IST
ಕ್ರಿಸ್ಮಸ್ ಆಚರಿಸಿದ್ದೇ ತಪ್ಪಾ..? ಕ್ರಿಕೆಟಿಗ ಮೊಹಮ್ಮದ್ ಕೈಫ್ ವಿರುದ್ಧ ಟೀಕೆಗಳ ಸುರಿಮಳೆ
ಕ್ರಿಸ್ಮಸ್ ಆಚರಿಸಿದ್ದೇ ತಪ್ಪಾ..? ಕ್ರಿಕೆಟಿಗ ಮೊಹಮ್ಮದ್ ಕೈಫ್ ವಿರುದ್ಧ ಟೀಕೆಗಳ ಸುರಿಮಳೆ
  • Share this:
ಮುಂಬೈ(ಡಿ.26):  ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕಾಕಾರರಿಗೆ ಆಹಾರವಾಗಿದ್ದಾರೆ. ಮೊಹಮ್ಮದ್ ಕೈಫ್ ಕುಟುಂಬದ ಜೊತೆ ಕ್ರಿಸ್ಮಸ್ ಆಚರಿಸಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಗುರಿಯಾಗಿದೆ. ಮೊಹಮ್ಮದ್ ಕೈಫ್ ಇಸ್ಲಾಂ ವಿರೋಧಿ ಎಂಬ ರೀತಿಯ ಸಂದೇಶಗಳನ್ನ ತೂರಿ ಬಿಟ್ಟಿದ್ದಾರೆ.


ಕೈಫ್ ಕುಟುಂಬದ ಜೊತೆ ಕ್ರಿಸ್ಮಸ್ ಆಚರಿಸಿಕೊಂಡು ಫೋಟೋಗಳನ್ನ ಟ್ವಿಟ್ಟರ್ ಮತ್ತು ಫೇಸ್ಬುಕ್`ನಲ್ಲಿ ಪೋಸ್ಟ್ ಮಾಡಿದ್ದರು. ಪ್ರೀತಿ ಮತ್ತು ಶಾಂತಿ ನೆಲೆಸಲಿ ಎಂದು ಸಂದೇಶ ನೀಡಿದ್ದರು. ಇದನ್ನೇ ಗುರಿಯಾಗಿರಿಸಿಕೊಂಡಿರುವ ಕೆಲವರು ಟ್ವಿಟ್ಟರ್ ಮತ್ತು ಫೇಸ್ಬುಕ್`ನಲ್ಲಿ ಟೀಕೆಗಳ ಸುರಿಮಳೆಗೈದಿದ್ದಾರೆ. ಕೆಲವರು ಕೈಫ್ ಪರವಾಗಿಯೂ ಬ್ಯಾಟಿಂಗ್ ಮಾಡಿದ್ದಾರೆ.

ಅಂದಹಾಗೆ, ಸೋಶಿಯಲ್ ಮೀಡಿಯಾದಲ್ಲಿ ಮೊಹಮ್ಮದ್ ಕೈಫ್ ಟೀಕೆಗೆ ಗುರಿಯಾಗುತ್ತಿರುವುದು ಇದೇ ಮೊದಲಲ್ಲ. ಜನವರಿಯಲ್ಲಿ ಸೂರ್ಯ ನಮಸ್ಕಾರ ಮಾಡಿದ್ದಕ್ಕೂ ಸಾಮಾಜಿಕ ಜಾಲತಾಣಗಳಲ್ಲಿ ಕೈಫ್ ವಿರುದ್ಧ ಮುಗಿಬಿದ್ದಿದ್ದರು. ಸೂರ್ಯ ನಮಸ್ಕಾರ ಯಾವುದೇ ಉಪಕರಣ ಬಳಸದೇ ದೇಹಕ್ಕೆ ಸಂಪೂರ್ಣ ವ್ಯಾಯಾಮ ನೀಡುತ್ತದೆ. #KaifKeFitnessFunde  ಎಂದು 4 ಸೂರ್ಯ ನಮಸ್ಕಾರ ಫೋಟೋಗಳ ಜೊತೆ ಟ್ವೀಟ್ ಮಾಡಿದ್ದರು. ಇದನ್ನೂ ಬಿಡದ ಕೆಲ ಟೀಕಾಕಾರರು ಕೈಫ್ ಯೋಗದ ಭಂಗಿಗಳು ಇಸ್ಲಾಂಗೆ ಅಗೌರವ ತೋರಿವೆ ಎಂದು ಬಅಯ ಬಡಿದುಕೊಂಡಿದ್ದರು. ಟೀಕೆಗಳಿಗೆ ಸರಿಯಾಗಿಯೇ ಉತ್ತರಿಸಿದ್ದ ಕೈಫ್, ಸೂರ್ಯ ನಮಸ್ಕಾರ ಅಥವಾ ಜಿಮ್ ಧರ್ಮಕ್ಕೂ ಸಂಬಂಧವಿಲ್ಲ. ಯಾವುದೇ ಧರ್ಮದವರು ಮಾಡಿದರೂ ಫಲ ಕೊಡುತ್ತದೆ ಎಂದು ಮತ್ತೊಂದು ಟ್ವೀಟ್ ಮೂಲಕ ಟಾಂಗ್ ನೀಡಿದ್ದರು.

ಜುಲೈನಲ್ಲಿ ಮಗನ ಜೊತೆ ಚೆಸ್ ಆಡುತ್ತಿದ್ದ ಫೋಟೋಗಳನ್ನ ಕೈಫ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಇಸ್ಲಾಂ ಚೆಸ್ ನಿಷಿದ್ಧ ಎಂಬ ಟೀಕೆಗಳು ವ್ಯಕ್ತವಾಗಿದ್ದವು.

ಮೊಹಮ್ಮದ್ ಕೈಫ್ ಜೊತೆಗೆ ಇರ್ಫಾನ್ ಪಠಾಣ್, ಮೊಹಮ್ಮದ್ ಶಮಿಗೂ ಇಂಥದ್ದೇ ಅನುಭವಗಳಾಗಿವೆ. ಇರ್ಫಾನ್ ಪಠಾಣ್ ರಕ್ಷಾಬಂಧನ ಆಚರಿಸಿದ್ದಕ್ಕೆ ಕೆಲ ಇಸ್ಲಾಂ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. ಮೊಹಮ್ಮದ್ ಶಮಿ ಪತ್ನಿ ಧರಿಸಿದ್ದ ಉಡುಪಿನ ಬಗ್ಗೆಯೂ ಆಕ್ಷೇಪ ವ್ಯಕ್ತವಾಗಿತ್ತು.
First published:December 26, 2017
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading