ವಾಲಿಬಾಲ್​ ಪಂದ್ಯದ ನಡುವೆಯೇ ಮಗುವಿಗೆ ಹಾಲುಣಿಸಿದ ಕ್ರೀಡಾಳುಗೆ ಮೆಚ್ಚುಗೆಯ ಮಹಾಪೂರ

7 ತಿಂಗಳ ಮಗುವಿನ ತಾಯಿಯಾಗಿರುವ ಲಾಲ್ವೆಂಟ್ಲುವಾಗಿ​, ಪಂದ್ಯದ ನಡುವಿನ ಅರ್ಥಗಂಟೆ ಸಮಯದಲ್ಲಿ ಮಗುವಿಗೆ ಹಾಲುಣಿಸಿದ್ದಾರೆ. ಈ ದೃಶ್ಯ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಯಾಗಿದ್ದು, ಈಕೆಯ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

Seema.R | news18-kannada
Updated:December 10, 2019, 3:12 PM IST
ವಾಲಿಬಾಲ್​ ಪಂದ್ಯದ ನಡುವೆಯೇ ಮಗುವಿಗೆ ಹಾಲುಣಿಸಿದ ಕ್ರೀಡಾಳುಗೆ ಮೆಚ್ಚುಗೆಯ ಮಹಾಪೂರ
ಹಾಲುಣಿಸುತ್ತಿರುವ ಕ್ರೀಡಾಳು
  • Share this:
ಏಕಕಾಲಕ್ಕೆ ಎಲ್ಲಾ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸಾಧನೆ ಮಾಡುವ ಶಕ್ತಿ ಒಬ್ಬ ತಾಯಿಗೆ ಇರುತ್ತದೆ ಎಂಬುದಕ್ಕೆ ಸಾಕ್ಷಿ ಈ ಘಟನೆ. ತನ್ನ ಕನಸಿನ ಗುರಿ ಸಾಧಿಸುವ ಛಲ ಹೊಂದಿರುವ ಮಹಿಳೆಗೆ ತಾಯ್ತಾನ ಎಂದು ಅಡ್ಡಿಯಾಗುವುದಿಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದಾಳೆ ಈಕೆ.

ಲಾಲ್ವೆಂಟ್ಲುವಾಂಗಿ​ ಸದ್ಯ ಟ್ವಿಟರ್​ನಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಮಹಿಳೆ. ರಾಜ್ಯ ಮಟ್ಟದ ವಾಲಿಬಾಲ್​ ಕ್ರೀಡಾಪಟುವಾದ ಇವರು ಇತ್ತೀಚೆಗೆ ಮಿಜೋರಾಂ ನಡೆದ ರಾಜ್ಯಮಟ್ಟದ ವಾಲಿಬಾಲ್​ ಪಂದ್ಯದಲ್ಲಿ ಭಾಗಿಯಾಗಿದ್ದರು.

7 ತಿಂಗಳ ಮಗುವಿನ ತಾಯಿಯಾಗಿರುವ ಲಾಲ್ವೆಂಟ್ಲುವಾಗಿ​, ಪಂದ್ಯದ ನಡುವಿನ ಅರ್ಥಗಂಟೆ ಸಮಯದಲ್ಲಿ ಮಗುವಿಗೆ ಹಾಲುಣಿಸಿದ್ದಾರೆ. ಈ ದೃಶ್ಯ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಯಾಗಿದ್ದು, ಈಕೆಯ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಏಕಕಾಲಕ್ಕೆ ಎರಡು ಕೆಲಸಗಳನ್ನು ನಿಭಾಯಿಸುತ್ತಿರುವ ಆಕೆಯ ಸಮರ್ಪಣಾಭಾವ ಮತ್ತು ಧೈರ್ಯವನ್ನು ಹಾಡಿಹೊಗಳಲಾಗಿದೆ. ತಾಯ್ತನದ ಜೊತೆಗೆ ಕ್ರೀಡಾಳುವಿನ ಬದ್ಧತೆ ಅವರಲ್ಲಿದೆ ಎಂಬ ಪ್ರಶಂಸೆ ಕೂಡ ವ್ಯಕ್ತವಾಗಿದೆ.

ಇವರ ಈ ಕಾರ್ಯವನ್ನು ರಾಜ್ಯ ಕ್ರೀಡಾ ಸಚಿವರು ಕೂಡ ಹಾಡಿಹೊಗಳಿದ್ದು, ಅವರಿಗೆ 10 ಸಾವಿರ ನಗದು ಬಹುಮಾನವನ್ನು ನೀಡಿದ್ದಾರೆ.

ಇದನ್ನು ಓದಿ: ಉದ್ದೀಪನ ಮದ್ದು ಸೇವನೆ: ಒಲಿಂಪಿಕ್​ನಿಂದ ರಷ್ಯಾ 4 ವರ್ಷ ನಿಷೇಧ!

ಮಿಜೋರಾಂನಲ್ಲಿ ಡಿ.9ರಿಂದ 13ರವರೆಗೆ ರಾಜ್ಯಮಟ್ಟದ ಪಂದ್ಯಾವಳಿಗಳು ನಡೆಯುತ್ತಿವೆ.
First published:December 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ