ಟಿ20 ಕ್ರಿಕೆಟ್​ಗೆ ದಾಖಲೆಗಳ ಒಡತಿ ಮಿಥಾಲಿ ರಾಜ್ ಗುಡ್​​ಬೈ: ಮತ್ತೆ ಶುರುವಾಯ್ತಾ ತಂಡದಲ್ಲಿ ಒಳಜಗಳ?

ಇತ್ತೀಚೆಗಷ್ಟೇ 200 ಏಕದಿನ ಪಂದ್ಯವನ್ನು ಆಡಿದ ವಿಶ್ವದ ಮೊದಲ ಆಟಗಾರ್ತಿ ಎಂಬ ದಾಖಲೆಯನ್ನು ಮಿಥಾಲಿ ರಾಜ್ ನಿರ್ಮಿಸಿದ್ದರು. 

zahir | news18
Updated:February 6, 2019, 11:48 AM IST
ಟಿ20 ಕ್ರಿಕೆಟ್​ಗೆ ದಾಖಲೆಗಳ ಒಡತಿ ಮಿಥಾಲಿ ರಾಜ್ ಗುಡ್​​ಬೈ: ಮತ್ತೆ ಶುರುವಾಯ್ತಾ ತಂಡದಲ್ಲಿ ಒಳಜಗಳ?
ಮಿಥಾಲಿ ರಾಜ್
zahir | news18
Updated: February 6, 2019, 11:48 AM IST
ಟೀಂ ಇಂಡಿಯಾ ಮಹಿಳಾ ಕ್ರಿಕೆಟ್​ ತಂಡದ ಆಟಗಾರ್ತಿ ಮಿಥಾಲಿ ರಾಜ್​ ಟಿ20 ಕ್ರಿಕೆಟ್​ಗೆ ನಿವೃತ್ತಿ ಘೋಷಿಸಲಿದ್ದಾರೆಂಬ ಸುದ್ದಿಗಳು ಹುಟ್ಟಿಕೊಂಡಿದೆ. ನ್ಯೂಜಿಲ್ಯಾಂಡ್​ ವಿರುದ್ಧ ಮೂರು ಟಿ20 ಸರಣಿಗೆಆಯ್ಕೆಯಾದರೂ, ಮೊದಲ ಪಂದ್ಯದಲ್ಲಿ ಮಿಥಾಲಿಗೆ  ಆಡುವ ಅವಕಾಶ ನೀಡಲಾಗಿಲ್ಲ. ಉತ್ತಮ ಫಾರ್ಮ್​ನಲ್ಲಿದ್ದರೂ ತಂಡದೊಳಗಿನ ಒಳಜಗಳದಿಂದ ಟೀಂ ಇಂಡಿಯಾ ಆಟಗಾರ್ತಿಗೆ ಅವಕಾಶ ನೀಡುತ್ತಿಲ್ಲ ಎಂಬ ಮಾತುಗಳು ಕೇಳಿ ಬಂದಿದೆ.

ಈ ಹಿನ್ನಲೆಯಲ್ಲಿ ಭಾರತದಲ್ಲಿ ನಡೆಯಲಿರುವ ಇಂಗ್ಲೆಂಡ್​ ವಿರುದ್ಧ ಟಿ20 ಸರಣಿಯೊಂದಿಗೆ ಚುಟುಕು ಕ್ರಿಕೆಟ್​ಗೆ ದಾಖಲೆಗಳ ಒಡೆತಿ ಗುಡ್​ಬೈ ಹೇಳಲಿದ್ದಾರೆ ಎನ್ನಲಾಗಿದೆ. ಟಿ20 ತಂಡದ ನಾಯಕಿ ಹರ್ಮನ್​ಪ್ರೀತ್​ ಕೌರ್ ಮುಂದಿನ ವಿಶ್ವಕಪ್​ಗಾಗಿ ಯುವ ಪಡೆಯನ್ನು ಸಿದ್ಧಗೊಳಿಸಲು ಬಯಸಿದ್ದು, ಹೀಗಾಗಿ ತಂಡದ ಕೆಲವರನ್ನು ಕೈ ಬಿಡಲಾಗುತ್ತಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೀಗಾಗಿ ಮಿಥಾಲಿ ರಾಜ್ ಟಿ20 ಕ್ರಿಕೆಟ್​ನಿಂದ ನೇಪಥ್ಯಕ್ಕೆ ಸರಿಯುವುದು ಪಕ್ಕಾ ಎನ್ನಲಾಗಿದೆ. ಆದರೆ ಏಕದಿನ ಕ್ರಿಕೆಟ್​ನಲ್ಲಿ ಹಿರಿಯ ಆಟಗಾರ್ತಿ ನಾಯಕಿಯಾಗಿ ಮುಂದುವರೆಯಲಿದ್ದಾರೆ ಎಂದೂ ಕೂಡ ಹೇಳಲಾಗಿದೆ.

ಈ ಹಿಂದೆ ಟಿ20 ವಿಶ್ವಕಪ್​ ಸೆಮಿಫೈನಲ್​ನಲ್ಲಿ ಹರ್ಮನ್​ಪ್ರೀತ್​ ಕೌರ್​ ಮಿಥಾಲಿ ರಾಜ್​ ರನ್ನು ತಂಡದಿಂದ ಕೈಬಿಟ್ಟಿದ್ದರು. ಇದರಿಂದ ಮಹಿಳಾ ತಂಡದಲ್ಲಿ ಒಣ ಪ್ರತಿಷ್ಠೆಗಳು ಹುಟ್ಟಿಕೊಂಡಿದೆ ಎಂದು ಹೇಳಲಾಗಿತ್ತು. ಅಲ್ಲದೆ ಹಿರಿಯ ಆಟಗಾರ್ತಿಯನ್ನು ಕೋಚ್​ ರಮೇಶ್ ಪವಾರ್ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ವಿವಾದಗಳು ಸೃಷ್ಟಿಯಾಗಿದ್ದವು. ಇದರಿಂದ ಮಾಜಿ ಟೀಂ ಇಂಡಿಯಾ ಆಟಗಾರ ರಮೇಶ್ ಪವಾರ್​ ಕೋಚ್​ ಸ್ಥಾನವನ್ನು ತ್ಯಜಿಸಬೇಕಾಯಿತು.

ಇತ್ತೀಚೆಗಷ್ಟೇ 200 ಏಕದಿನ ಪಂದ್ಯವನ್ನು ಆಡಿದ ವಿಶ್ವದ ಮೊದಲ ಆಟಗಾರ್ತಿ ಎಂಬ ದಾಖಲೆಯನ್ನು ಮಿಥಾಲಿ ರಾಜ್ ನಿರ್ಮಿಸಿದ್ದರು.  16ನೇ ವಯಸ್ಸಿನಲ್ಲಿ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ 114 ರನ್​ ಸಿಡಿಸುವ ಮೂಲಕ ಶತಕ ಬಾರಿಸಿದ ಕಿರಿಯ ಆಟಗಾರ್ತಿ ಎಂಬ ದಾಖಲೆಯನ್ನು ಬರೆದಿದ್ದರು.  ಏಕದಿನ ಪಂದ್ಯಗಳಲ್ಲಿ  51.33ರ ಸರಾಸರಿಯಲ್ಲಿ 6,622 ರನ್ ಗಳಿಸಿರುವ ಏಕೈಕ ಮಹಿಳಾ ಕ್ರಿಕೆಟರ್​ ಎಂಬ ವಿಶ್ವ ದಾಖಲೆ ಮಿಥಾಲಿ ಹೆಸರಲ್ಲಿದೆ. 

ಇದನ್ನೂ ಓದಿ: Valentine’s Week: ಈ ಪ್ರೀತಿ ಪ್ರೇಮ ಅಂತಾರಲ್ಲ ಅದನ್ನ ಗೆಲ್ಲಲು ಒಂದು ತಂತ್ರವಿದೆ!

ಇನ್ನು 85 ಟಿ20 ಪಂದ್ಯಗಳನ್ನು ಆಡಿರುವ ಮಿಥಾಲಿ ರಾಜ್ 2283 ರನ್​ಗಳನ್ನು ಬಾರಿಸಿದ್ದಾರೆ. ಅದರಲ್ಲಿ 17 ಅರ್ಧಶತಕಗಳನ್ನು ಸಿಡಿಸಿರುವುದು ಇವರ ಬ್ಯಾಟಿಂಗ್ ವೈಖರಿಗೆ ಸಾಕ್ಷಿ. ಸಚಿನ್ ತೆಂಡುಲ್ಕರ್, ಸನತ್ ಜಯಸೂರ್ಯ ಹಾಗೂ ಜಾವೆದ್ ಮಿಯಾಂದಾದ್ ಬಳಿಕ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದೀರ್ಘಕಾಲದಿಂದ ಆಡುತ್ತಿರುವ ಏಕೈಕ ಆಟಗಾರ್ತಿ ಎಂಬ ಖ್ಯಾತಿಗೆ ಮಿಥಾಲಿ ರಾಜ್​ ಭಾಜನರಾಗಿದ್ದಾರೆ.
First published:February 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...