Mithali Raj: ಮಹಿಳಾ ವಿಶ್ವಕಪ್​ನಲ್ಲಿ ಇತಿಹಾಸ ಬರೆದ ಮಿಥಾಲಿ ರಾಜ್, ವೆಸ್ಟ್ ಇಂಡೀಸ್ ವಿರುದ್ಧ ಗೆದ್ದು ಬೀಗಿದ ಟೀಂ ಇಂಡಿಯಾ

ಮಹಿಳೆಯರ ವಿಶ್ವಕಪ್‌ ಟೂರ್ನಿಯಲ್ಲಿ ಅತಿ ಹೆಚ್ಚು ಪಂದ್ಯಗಳಲ್ಲಿ ರಾಷ್ಟ್ರೀಯ ತಂಡವನ್ನು ಮುನ್ನಡೆಸಿದ ವಿಶ್ವದ ಮೊದಲ ನಾಯಕಿ ಎಂಬ ಕೀರ್ತಿಗೆ ಭಾಜನರಾಗಿದ್ದರೆ. ಇಂದು ನಡೆದ ವೆಸ್ಟ್ ಇಂಡೀಸ್ (West Indies) ನಡುವಿನ ವಿಶ್ವಕಪ್ ಪಂದ್ಯದಲ್ಲಿ ಕಣಕ್ಕಿಳಿಯು ಮೂಲಕ ಮಿಥಾಲಿ ರಾಜ್ ಈ ವಿನೂತನ ದಾಖಲೆಯನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ.

ಮಿಥಾಲಿ ರಾಜ್

ಮಿಥಾಲಿ ರಾಜ್

  • Share this:
ಐಸಿಸಿ ಮಹಿಳಾ ವಿಶ್ವಕಪ್‌ ನಲ್ಲಿ (Icc Womens World Cup) ಭಾರತ ತಂಡದ ಯಶಸ್ವಿ ನಾಯಕಿ ಎಂದೇ ಪ್ರಸಿದ್ಧಿಯಾಗಿರುವ ಮಿಥಾಲಿ ರಾಜ್ (Mithali Raj) ಹೊಸ ಸಾಧನೆಯೊಂದನ್ನು ಮಾಡಿದ್ದಾರೆ. ಹೌದು, ಮಹಿಳೆಯರ ವಿಶ್ವಕಪ್‌ ಟೂರ್ನಿಯಲ್ಲಿ ಅತಿ ಹೆಚ್ಚು ಪಂದ್ಯಗಳಲ್ಲಿ ರಾಷ್ಟ್ರೀಯ ತಂಡವನ್ನು ಮುನ್ನಡೆಸಿದ ವಿಶ್ವದ ಮೊದಲ ನಾಯಕಿ ಎಂಬ ಕೀರ್ತಿಗೆ ಭಾಜನರಾಗಿದ್ದರೆ. ಇಂದು ನಡೆದ ವೆಸ್ಟ್ ಇಂಡೀಸ್ (West Indies) ನಡುವಿನ ವಿಶ್ವಕಪ್ ಪಂದ್ಯದಲ್ಲಿ ಕಣಕ್ಕಿಳಿಯು ಮೂಲಕ ಮಿಥಾಲಿ ರಾಜ್ ಈ ವಿನೂತನ ದಾಖಲೆಯನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ (Australia )ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿಯಾದ ಬೆಲಿಂಡಾ ಕ್ಲಾರ್ಕ್‌ ಅವರ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.

ವಿಶ್ವಕಪ್​ನಲ್ಲಿ ಹೊಸ ದಾಖಲೆ ಬರೆದ ಮಿಥಾಲಿ ರಾಜ್:

ಭಾರತ ಮಹಿಳಾ ತಂಡದ ನಾಯಕಿಯಾದ ಮಿಥಾಲಿ ರಾಜ್ ನ್ಯೂಜಿಲ್ಯಾಂಡ್​ನಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ಅವರು ಇಂದು ನಡೆದ ವೆಸ್ಟ್ ಇಂಡೀಸ್ ಪಂದ್ಯದಲ್ಲಿ ಆಡುವ ಮೂಲಕ ಐಸಿಸಿ ಮಹಿಳಾ ವಿಶ್ವಕಪ್​ನಲ್ಲಿ ತಂಡವೊಂದನ್ನು ಅತೀ ಹೆಚ್ಚು ಬಾರಿ ಮುನ್ನಡೆಸಿದ ನಾಯಕಿ ಎಂಬ ದಾಖಲೆಯನ್ನು ಬರೆದಿದ್ದಾರೆ.

ಒಟ್ಟು 23 ಮಹಿಳಾ ವಿಶ್ವಕಪ್‌ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿರುವ ಮಿಥಾಲಿ ರಾಜ್‌, ಈವರೆಗೆ 14 ಪಂದ್ಯಗಳನ್ನು ಗೆದ್ದಿದ್ದರೆ, 8 ಪಂದ್ಯಗಳಲ್ಲಿ ಸೋಲನ್ನಪ್ಪಿದ್ದಾರೆ. ಆದರೆ ಆಸೀಸ್​ನ ಬೆಲಿಂಡಾ ಕ್ಲಾರ್ಕ್‌ 23 ವಿಶ್ವಕಪ್‌ ಪಂದ್ಯಗಳ ಪೈಕಿ 21 ರಲ್ಲಿ ಗೆಲುವು ದಾಖಲಿಸಿದ್ದಾರೆ.

ಇದನ್ನೂ ಓದಿ: ಕ್ರಿಕೆಟ್ ಇತಿಹಾಸದಲ್ಲೇ​ ಹೊಸ ದಾಖಲೆ​ ನಿರ್ಮಿಸಿದ ಮಿಥಾಲಿ ರಾಜ್

ಮಹಿಳಾ ವಿಶ್ವಕಪ್‌ ನಲ್ಲಿ ಅತಿ ಹೆಚ್ಚು ಬಾರಿ ತಂಡವನ್ನು ಮುನ್ನಡೆದ ನಾಯಕಿಯರು:

ಮಿಥಾಲಿ ರಾಜ್‌ (ಭಾರತ): 24* ಪಂದ್ಯ
ಬೆಲಿಂಡಾ ಕ್ಲಾರ್ಕ್‌ (ಆಸ್ಟ್ರೇಲಿಯಾ): 23 ಪಂದ್ಯ
ಸುಸಾನ್‌ ಗೋಟ್‌ಮ್ಯಾನ್‌ (ಇಂಗ್ಲೆಂಡ್‌): 19 ಪಂದ್ಯ
ಟ್ರಿಶ್‌ ಮೆಕ್‌ಕೆಲ್ವೀ (ನ್ಯೂಜಿಲೆಂಡ್‌): 15 ಪಂದ್ಯ
ಮ್ಯಾರಿ-ಪ್ಯಾಟ್‌ ಮೋರ್‌ (ಐರ್ಲೆಂಡ್‌): 15 ಪಂದ್ಯ

ಸಚಿನ್ ಸರಿಸಮರಾದ ಮಿಥಾಲಿ:

ಸತತ ಆರು ಏಕದಿನ ವಿಶ್ವಕಪ್​ನಲ್ಲಿ ಆಟವಾಡಿದ ಮೊದಲ ಮಹಿಳಾ ಕ್ರಿಕೆಟ್ ಆಟಗಾರ್ತಿ ಎಂಬ ಖ್ಯಾತಿಗೆ ಮಿಥಾಲಿ ರಾಜ್​ ಭಾಜನರಾಗಿದ್ದಾರೆ. ಕಳೆದ ಹಿಂದಿನ ಪಂದ್ಯದಲ್ಲಿ ಆಡುವ ಮೂಲಕ ಮಿಥಾಲಿ ಈ ಸಾಧನೆಯನ್ನು ಮಾಡಿದ್ದಾರೆ. ಇದು ಕ್ರಿಕೆಟ್ ದೇವರು ಎಂದೇ ಪ್ರಸಿದ್ಧಿಗಳಿಸಿರುವ ಸಚಿನ್ ತೆಂಡೂಲ್ಕರ್ ಮತ್ತು ಪಾಕಿಸ್ತಾನದ ಜಾವೇದ್ ಮಿಯಾಂದಾದ್ ಅವರ ಸಾಧನೆಗೆ ಸರಿಸಮವಾಗಿದೆ.

ಇದನ್ನೂ ಓದಿ: Mithali Raj: ವಿಶ್ವ ದಾಖಲೆ ಬರೆದ ಟೀಮ್ ಇಂಡಿಯಾ ನಾಯಕಿ: ಕ್ರಿಕೆಟ್ ಅಂಗಳದಲ್ಲಿ ಮಿಥಾಲಿ "ರಾಣಿ"

ಇದಲ್ಲದೆಯೇ ಮಿಥಾಲಿ ರಾಜ್ ಎರಡಕ್ಕಿಂತ ಹೆಚ್ಚು ಮಹಿಳಾ ವಿಶ್ವಕಪ್​ ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ ಖಾ್ಯತಿಗೂ ಭಾಜನರಾಗಿದ್ದಾರೆ. ಈ ಸಾಧನೆ ಮಾಡಿದವರಲ್ಲಿ ವಿಶ್ವ ಮಹಿಳಾ ಕ್ರಿಕೆಟರ್​ಗಳಲ್ಲಿ ಮಿಥಾಲಿ ರಾಜ್ ಮತ್ತು ಆಸೀಸ್​ನ ಬೆಲಿಂಡಾ ಕ್ಲಾರ್ಕ್‌ ಇಬ್ಬರು ಮಾತ್ರ  ಎನ್ನುವುದು ವಿಶೇಷವಾಗಿದೆ.

ಟೀ ಇಂಡಿಯಾಗೆ ಭರ್ಜರಿ ಜಯ:

ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ 10ನೇ ಪಂದ್ಯದಲ್ಲಿ ಇಂದು ಭಾರತವು ವೆಸ್ಟ್ ಇಂಡೀಸ್ ತಂಡದ ವಿರುದ್ಧದ ಭರ್ಜರಿ ಗೆಲುವನ್ನು ದಾಖಲಿಸಿದೆ. ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ನಿಗದಿತ 50 ಓವರ್​ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 317 ರನ್​ಗಳ ಬೃಹತ್ ಮೊತ್ತ ಪೇರೆಪಿಸಿತು. ಭಾರತದ ಪರ ಸ್ಮೃತಿ ಮಂಧಾನ (123) ಮತ್ತು ಹರ್ಮನ್ಪ್ರೀತ್ ಕೌರ್ (109) ಶತಕ ಸಿಡಿಸಿ ಮಿಂಚಿದರು.ಈ ಟಾರ್ಗೆಟ್ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡ ನಿಗದಿತ 40.3 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು ಕೇವಲ 162 ರನ್​ ಗಳಿಸಿತು. ಈ ಮೂಲಕ ಭಾರತ ತಂಡಕ್ಕೆ 155 ರನ್​ಗಳ ಭರ್ಜರಿ ಜಯ ದೊರಕಿತು. ಈ ಗೆಲುವಿನ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಟೀಂ ಇಂಡಿಯಾ ಅಗ್ರಸ್ಥಾನಕ್ಕೇರಿದೆ

ಐಸಿಸಿ ಮಹಿಳಾ ವಿಶ್ವಕಪ್​ನ ಭಾರತ ತಂಡ:

ಮಿಥಾಲಿ ರಾಜ್ (ನಾಯಕಿ) , ಸ್ಮೃತಿ ಮಂಧಾನ , ಯಾಸ್ತಿಕಾ ಭಾಟಿಯಾ ,  ದೀಪ್ತಿ ಶರ್ಮಾ, ರಿಚಾ ಘೋಷ್ ( ವಿಕೆಟ್ ಕೀಪರ್),  ಸ್ನೇಹ್ ರಾಣಾ, ಹರ್ಮನ್ಪ್ರೀತ್ ಕೌರ್, ಪೂಜಾ ವಸ್ತ್ರಾಕರ್ , ಮೇಘನಾ ಸಿಂಗ್ , ಜೂಲನ್ ಗೋಸ್ವಾಮಿ , ರಾಜೇಶ್ವರಿ ಗಾಯಕ್ವಾಡ್,  ಪೂನಂ ಯಾದವ್ , ತಾನಿಯಾ ಭಾಟಿಯಾ , ಶಫಾಲಿ ವರ್ಮಾ, ರೇಣುಕಾ ಸಿಂಗ್.
Published by:shrikrishna bhat
First published: