Mission Paani: ನೀರಿನ ಸಂರಕ್ಷಣೆ ಯುವಕರ ಪ್ರಾಥಮಿಕ ಸಾಮಾಜಿಕ ಕರ್ತವ್ಯ ಆಗಬೇಕು; ವೆಂಕಯ್ಯ ನಾಯ್ಡು

ನೀರಿನ ಸಂರಕ್ಷಣೆ ಎಂಬುದು ಜನಾಂದೋಲನ ಆಗಬೇಕು. ಇದರಲ್ಲಿ ಜನರು ಕೂಡ ಪಾಲ್ಗೊಂಡು ಈ ಆಂದೋಲನವನ್ನು ಯಶಸ್ವಿ ಮಾಡಬೇಕು ಎಂದು ವೆಂಕಯ್ಯ ನಾಯ್ಡು ಕರೆ ನೀಡಿದರು.

venakayya naidu

venakayya naidu

 • Share this:
  ನ್ಯೂಸ್​18 ಕನ್ನಡ ಹಾಗೂ ಹಾರ್ಪಿಕ್​ ಜಂಟಿಯಾಗಿ ಆಯೋಜಿಸಿದ್ದ ಜಲ ಪ್ರತಿಜ್ಞೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ನೀರಿನ ಸಂರಕ್ಷಣೆಗೆ ಕರೆ ನೀಡಿದ್ದಾರೆ. ನೀರನ್ನು ರಕ್ಷಣೆ ಮಾಡೋದು ಯುವಕರ ಪ್ರಾಥಮಿಕ ಕರ್ತವ್ಯ ಆಗಬೇಕೇ ಹೊರತು ನಿರ್ಲಕ್ಷ್ಯ ತೋರಬಾರದು ಎಂದಿದ್ದಾರೆ.

  ಮಿಷನ್​ ಪಾನಿಯ ಅಂಗವಾಗಿರುವ ಜಲ ಪ್ರತಿಜ್ಞೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ವೆಂಕಯ್ಯ ನಾಯ್ಡು, ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ ಶೇ. 18 ನಮ್ಮ ದೇಶದಲ್ಲೇ ಇದ್ದಾರೆ. ಆದರೆ ನಮ್ಮಲ್ಲಿ ಶೇ. 4ರಷ್ಟು ಮಾತ್ರ ನೀರಿದೆ. ಏನಾದರೂ ನಡೆಯುತ್ತೆ ಎನ್ನುವ ಮನಸ್ಥಿತಿ ಬದಲಾಗಬೇಕಿದೆ ಎಂದರು.

  ನೀರಿನ ಸಂರಕ್ಷಣೆ ಎಂಬುದು ಜನಾಂದೋಲನ ಆಗಬೇಕು. ಇದರಲ್ಲಿ ಜನರು ಕೂಡ ಪಾಲ್ಗೊಂಡು ಈ ಆಂದೋಲನವನ್ನು ಯಶಸ್ವಿ ಮಾಡಬೇಕು. ಈಗಾಗಲೇ ಸ್ವಚ್ಛ ಭಾರತ್​ ಯೋಜನೆ ಆಂದೋಲನವಾಗಿ ಬದಲಾಗಿದೆ. ನೀರಿನ ಸಂರಕ್ಷಣೆ ಕೂಡ ಹೀಗೆ ಆಗಬೇಕು ಎಂದು ಕೋರಿದರು.  ನವೆಂಬರ್​ 19ನ್ನು ವಿಶ್ವ ಶೌಚಾಲಯ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಇದೇ ದಿನವನ್ನು ಜಲ ಪ್ರತಿಜ್ಞೆ ದಿನವನ್ನಾಗಿ ಆಚರಣೆ ಮಾಡಲಾಗಿದೆ. ಜಲ ಪ್ರತಿಜ್ಞೆ ದಿನದಂದು ದೇಶದ ಮಾಜಿ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಾಗೂ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್​ ಶೇಖಾವತ್​ ಕೂಡ ಉಪಸ್ಥಿತರಿದ್ದರು. ಈ ಮೂಲಕ ಮಿಷನ್​ ಪಾನಿ ಆಂದೋಲನಕ್ಕೆ ಬೆಂಬಲ ಸೂಚಿಸಿದರು. ಇದರ ಜೊತೆಗೆ ಬೇರೆ ಬೇರೆ ರಾಜ್ಯದ ಮುಖ್ಯಮಂತ್ರಿಗಳು ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.  ನ್ಯೂಸ್​18 ಹಾಗೂ ಹಾರ್ಪಿಕ್​ ಇಂಡಿಯಾ  ಒಟ್ಟಾಗಿ ಮಿಷನ್​ ಪಾನಿಯ ಭಾಗವಾಗಿ ಜಲ ಪ್ರತಿಜ್ಞೆ ದಿನವನ್ನು ಆಚರಿಸುತ್ತಿವೆ. ಶಾಲಾ ವಿದ್ಯಾರ್ಥಥಿಗಳು, ಶಿಕ್ಷಕರು ಸೇರಿ ಅನೇಕರು ಇದರಲ್ಲಿ ಪಾಲ್ಗೊಂಡಿದ್ದರು.
  Published by:Rajesh Duggumane
  First published: