• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • Mirabai Chanu: ಒಲಿಂಪಿಕ್ಸ್​​ನಲ್ಲಿ ಬೆಳ್ಳಿ ಗೆದ್ದಿರುವ ಮೀರಾಬಾಯಿ ಚಾನುಗೆ ಚಿನ್ನದ ಪದಕ ಸಿಗುವ ಸಾಧ್ಯತೆ.. ರೋಚಕ ಟ್ವಿಸ್ಟ್​​​

Mirabai Chanu: ಒಲಿಂಪಿಕ್ಸ್​​ನಲ್ಲಿ ಬೆಳ್ಳಿ ಗೆದ್ದಿರುವ ಮೀರಾಬಾಯಿ ಚಾನುಗೆ ಚಿನ್ನದ ಪದಕ ಸಿಗುವ ಸಾಧ್ಯತೆ.. ರೋಚಕ ಟ್ವಿಸ್ಟ್​​​

ಮೀರಾಬಾಯಿ ಚಾನು

ಮೀರಾಬಾಯಿ ಚಾನು

Mirabai Chanu could get Gold: ಮೀರಾ ಎದುರು ಮೊದಲ ಸ್ಥಾನ ಗೆದ್ದಿದ್ದ ಚೀನಾದ ಹೋಹು ಜಿಝಿಹಿ (Hou Zhizhi) ಚಿನ್ನದ ಪದಕವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಹೋಹು ಜಿಝಿಹಿ ವಿರುದ್ಧ ಡೋಪಿಂಗ್​ ಆರೋಪ ಎದುರಾಗಿದೆ.

  • Share this:

ಟೊಕಿಯೋ ಒಲಿಪಿಂಕ್ಸ್​ನಲ್ಲಿ ಭಾರತದ ಪದಕದ ಬೇಟೆಯನ್ನು ಶುರು ಮಾಡಿದ ಮೀರಾಬಾಯಿ ಚಾನುಗೆ ಯಾರೂ ಊಹಿಸದ ಅದೃಷ್ಟ ಕೈ ಹಿಡಿಯುವ ಸಾಧ್ಯತೆ ಇದೆ. ಶನಿವಾರ 49 ಕೆಜಿ ವೇಯ್ಟ್​​ ಲಿಫ್ಟಿಂಗ್​ ವಿಭಾಗದಲ್ಲಿ ಮೀರಾಬಾಯಿ ಚಾನು 2ನೇ ಸ್ಥಾನ ಗೆಲ್ಲುವ ಮೂಲಕ ಭಾರತಕ್ಕೆ ಬೆಳ್ಳಿ ಪದಕ ಗಿಟ್ಟಿಸಿದ್ದರು. ಆದರೆ ಈಗ ಮೀರಾಗೆ ಚಿನ್ನದ ಪದಕ ಸಿಗುವ ಸಾಧ್ಯತೆ ಇದೆ. ಮೀರಾ ಎದುರು ಮೊದಲ ಸ್ಥಾನ ಗೆದ್ದಿದ್ದ ಚೀನಾದ ಹೋಹು ಜಿಝಿಹಿ (Hou Zhizhi) ಚಿನ್ನದ ಪದಕವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಹೋಹು ಜಿಝಿಹಿ ವಿರುದ್ಧ ಡೋಪಿಂಗ್​ ಆರೋಪ ಎದುರಾಗಿದ್ದು, ಪರೀಕ್ಷೆಗಾಗಿ ಆಟದ ಬಳಿಕವೂ ಅವರನ್ನು ಒಲಿಂಪಿಕ್​ ಗ್ರಾಮದಲ್ಲಿ ಉಳಿಸಿಕೊಳ್ಳಲಾಗಿದೆ.


ಸದ್ಯದಲ್ಲೇ ಹೋಹು ಜಿಝಿಹಿ ಅವರಿಗೆ ಡೋಪಿಂಗ್​ ಪರೀಕ್ಷೆ ನಡೆಯಲಿದೆ. ಡೋಪಿಂಗ್​ ಪರೀಕ್ಷೆಯಲ್ಲಿ ಹೋಹು ಜಿಝಿಹಿ ವಿಫಲರಾದರೆ ಮೊದಲ ಸ್ಥಾನ ಕಳೆದುಕೊಳ್ಳಲಿದ್ದಾರೆ. 2ನೇ ಸ್ಥಾನದಲ್ಲಿರುವ ಭಾರತದ ಮೀರಾಬಾಯಿ ಚಾನು ಮೊದಲ ಸ್ಥಾನಕ್ಕೇರಲಿದ್ದಾರೆ. ಆಗ ಭಾರತಕ್ಕೆ ಚಿನ್ನದ ಪದಕ ಸ್ಥಾನ ಸಿಗುವ ಸಾಧ್ಯತೆ ಇದೆ. ಇನ್ನು ವೇಯ್ಟ್​​ಲಿಫ್ಟಿಂಗ್​ ವಿಭಾಗದಲ್ಲಿ 3ನೇ ಸ್ಥಾನ ಅಂದರೆ ಕಂಚಿನ ಪದಕ ಗೆದ್ದಿರುವ ಇಂಡೋನೇಷ್ಯಾದ ವಿಂಡಿ ಚಾಂಟಿಕ (Windy Cantika) 2ನೇ ಸ್ಥಾನಕ್ಕೆ ಜಿಗಿದು ಬೆಳ್ಳಿ ಪದಕಕ್ಕೆ ಅರ್ಹರಾಗುವ ಸಾಧ್ಯತೆ ಇದೆ.


ಈ ಹಿನ್ನೆಲೆಯಲ್ಲಿ ಒಲಿಂಪಿಕ್ಸ್​ನಲ್ಲಿ ಭಾರತ ಗೆದ್ದಿರುವ ಬೆಳ್ಳಿ ಪದಕ ಚಿನ್ನವಾಗುವ ನಿರೀಕ್ಷೆ ಗರಿಗೆದರಿದೆ. ಚಿನ್ನ ಗೆದ್ದಿರುವ ಆಟಗಾರ್ತಿ ಮಾದಕ ವಸ್ತು ಸೇವನೆಯಲ್ಲಿ ಸಿಕ್ಕಿಬಿದ್ದರೆ ಮೀರಾಬಾಯಿ ಚಾನು ಪದಕ ಅಪ್​ಗ್ರೇಡ್​ ಆಗಲಿದೆ.


26 ವರ್ಷದ ಮೀರಾಬಾಯಿ ಚಾನು 2018ರಲ್ಲಿ ಕಾಮನ್​​ವೆಲ್ತ್​​​ ಕ್ರೀಡಾಕೂಟದಲ್ಲಿ 48 ಕೆಜಿ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದರು.  ಚಾನು ಒಲಿಂಪಿಕ್ಸ್​​ ಇತಿಹಾಸದಲ್ಲಿ ವೈಯಕ್ತಿಕವಾಗಿ ಪದಕ ಪಡೆದ 5ನೇ ಮಹಿಳಾ ಕ್ರೀಡಾಪಟುವಾಗಿದ್ದಾರೆ.  ಇದಕ್ಕೂ ಮುನ್ನ ಕರ್ಣಂ ಮಲ್ಲೇಶ್ವರಿ 2000ರ ಸಿಡ್ನಿ ಒಲಿಂಪಿಕ್ಸ್​ನಲ್ಲಿ ಕಂಚು ಗೆದ್ದಿದ್ದರು. 2012ರಲ್ಲಿ ಲಂಡನ್​​ ಒಲಿಂಪಿಕ್ಸ್​​ನಲ್ಲಿ ಸಿಂಗಲ್​​ ಬ್ಯಾಟ್ಮಿಂಟನ್​​ನಲ್ಲಿ ಸೈನಾ ನೆಹ್ವಾಲ್​​ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರು. 2016ರ ರಿಯೋ ಒಲಿಂಪಿಕ್ಸ್​ನಲ್ಲಿ ಪಿ.ವಿ.ಸಿಂಧು ಬೆಳ್ಳಿ ಪದಕ ಗೆದ್ದು ಭಾರತಕ್ಕೆ ಹೆಮ್ಮೆ ತಂದಿದ್ದರು. ಇದೇ ಒಲಿಂಪಿಕ್ಸ್​ನ ಕುಸ್ತಿ ವಿಭಾಗದಲ್ಲಿ ಸಾಕ್ಷಿ ಮಲ್ಲಿಕ್​​​ ಕಂಚಿನ ಪದಕ ಗೆದ್ದಿದ್ದರು.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

Published by:Kavya V
First published: