ಏಷ್ಯನ್ ಗೇಮ್ಸ್ 2018: 804 ಸದಸ್ಯರ ಭಾರತ ತಂಡಕ್ಕೆ ಕ್ರೀಡಾ ಸಚಿವಾಲಯ ಹಸಿರು ನಿಶಾನೆ

news18
Updated:August 12, 2018, 3:30 PM IST
ಏಷ್ಯನ್ ಗೇಮ್ಸ್ 2018: 804 ಸದಸ್ಯರ ಭಾರತ ತಂಡಕ್ಕೆ ಕ್ರೀಡಾ ಸಚಿವಾಲಯ ಹಸಿರು ನಿಶಾನೆ
news18
Updated: August 12, 2018, 3:30 PM IST
ನ್ಯೂಸ್ 18 ಕನ್ನಡ

ನವ ದೆಹಲಿ: ಆಗಸ್ಟ್​ 18 ರಿಂದ ಆರಂಭವಾಗುವ ಏಷ್ಯಾದ ಪ್ರತಿಷ್ಠಿತ ಕ್ರೀಡಾಕೂಟ ಏಷ್ಯನ್ ಗೇಮ್ಸ್​​ನಲ್ಲಿ ಭಾರತವನ್ನು ಪ್ರತಿನಿಧಿಸಲು 804 ಸದಸ್ಯರ ಕ್ರೀಡಾ ನಿಯೋಗಕ್ಕೆ ಕೇಂದ್ರ ಕ್ರೀಡಾ ಸಚಿವಾಲಯ ಹಸಿರು ನಿಶಾನೆ ತೋರಿದೆ. 572 ಅಥ್ಲೆಟೆಕ್ಸ್​​ನೊಂದಿಗೆ 232 ಮಂದಿ ಅಧಿಕಾರಿಗಳಿದ್ದಾರೆ. ಆದರೆ 755 ಸದಸ್ಯರ ಖರ್ಚುಗಳನ್ನು ಮಾತ್ರ ಭರಿಸುವುದಾಗಿ ಸರ್ಕಾರ ತಿಳಿಸಿದೆ. 232 ಅಧಿಕಾರಿಗಳ ಪೈಕಿ 49 ಮಂದಿಯ ಖರ್ಚನ್ನು ಸರ್ಕಾರ ಬರಿಸುವುದಿಲ್ಲ ಎಂದು ಕೇಂದ್ರ ಸಚಿವಾಲಯ ತಿಳಿಸಿದೆ.

ಭಾರತೀಯ ಒಲಿಂಪಿಕ್ ಸಂಸ್ಥೆ(ಐಒಎ) ಶಿಫಾರಸು ಮಾಡಿದ ಎಲ್ಲಾ ಕ್ರೀಡಾಪಟುಗಳನ್ನು ಮತ್ತು ಅಧಿಕಾರಿಗಳ ಹೆಸರನ್ನು ಸಚಿವಾಲಯ ಅಂಗೀಕರಿಸಿದೆ. ಇದರಲ್ಲಿ 572 ಅಥ್ಲೀಟ್​​ಗಳು, 183 ಅಧಿಕಾರಿಗಳು, 119 ಕೋಚ್​​ಗಳು, 21 ವೈದ್ಯರು ಮತ್ತು ಫಿಜಯೋಗಳಿದ್ದಾರೆ. ಒಟ್ಟು 36 ಕ್ರೀಡೆಗಳಲ್ಲಿ 572 ಕ್ರೀಡಾಪಟುಗಳು ಭಾಗವಹಿಸಲಿದ್ದು, 312 ಪುರುಷರು ಹಾಗೂ 260 ಮಹಿಳಾ ಕ್ರೀಡಾಪಟುಗಳು ಕಣಕ್ಕಿಳಿಯಲಿದ್ದಾರೆ. ಸಂಸ್ಥೆ ಸೂಚಿಸಿರುವ ಹೆಸರಿನಲ್ಲಿ 26 ಮ್ಯಾನೇಜರ್​​ಗಳ ವೆಚ್ಚವನ್ನು ಭರಿಸಲು ಸರ್ಕಾರ ನಿರಾಕರಿಸಿದೆ.

ಏಷ್ಯನ್ ಗೇಮ್ಸ್ ಕ್ರೀಡಾಕೂಟ ಆಗಸ್ಟ್​ 18ರಿಂದ ಆರಂಭಗೊಂಡು ಸೆಪ್ಟೆಂಬರ್ 2ರ ವರೆಗೆ ನಡೆಯಲಿದೆ. ಇನ್ನು ಈ ಬಾರಿ ಕ್ರೀಡಾಪಟುಗಳ ಪೋಷಕರಿಗೆ ತೆರಳಲು ಅವಕಾಶವನ್ನು ನಿರಾಕರಸಲಾಗಿದೆ.
First published:August 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ