Michael Jordan: ದಾಖಲೆ ಮೊತ್ತಕ್ಕೆ ಸೇಲಾಯ್ತು ಬಾಸ್ಕೆಟ್‌ಬಾಲ್ ದಂತಕಥೆ ಮೈಕಲ್ ಜೆರ್ಸಿ, ಈ ದುಡ್ಡಲ್ಲಿ 10 ಸಾವಿರ ಬಟ್ಟೆ ಅಂಗಡಿನೇ ತೆಗಿಬಹುದಿತ್ತು!

Michael Jordan: ಜೋರ್ಡಾನ್‌ನ ಬಳಸಿದ ಶೂಗಳು ಮತ್ತು ಜೆರ್ಸಿಗಳು ಅಮೆರಿಕದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಭಾರೀ ಕ್ರೇಜ್ ಅನ್ನು ಹೊಂದಿವೆ. ಅವರ ಅಭಿಮಾನಿಗಳು ಕೂಡ ಇವುಗಳನ್ನು ತಮ್ಮದಾಗಿಸಿಕೊಳ್ಳಲು ಕಾತರರಾಗಿರುತ್ತಾರೆ.

ಮೈಕೆಲ್ ಜೋರ್ಡಾನ್

ಮೈಕೆಲ್ ಜೋರ್ಡಾನ್

  • Share this:
ನಾವೆಲ್ಲಾ ಹೆಚ್ಚಾಗಿ ಪ್ರಸಿದ್ಧ ಆಟಗಾರರು ಬಳಸಿದಂತಹ ಜೆರ್ಸಿ, ಬ್ಯಾಟ್​, ಕ್ಯಾಪ್​ ಹೀಗೆ ಹಲವು ವಸ್ತುಗಳನ್ನು ಹರಾಜಿಗೆ ಇಡುವುದನ್ನು ನೋಡಿದ್ದೇವೆ. ನಂತರ ಅವುಗಳು ದೊಡ್ಡ ಮೊತ್ತದ ಹಣಕ್ಕೆ ಮಾರಾಟ ಆಗುವುದನ್ನೂ ಕೇಳಿದ್ದೇವೆ. ಅದೇ ರೀತಿ ಕ್ರಿಕೆಟ್​ನಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ (MS Dhoni)  ವಿಶ್ವಕಪ್​ನಲ್ಲಿ ಕೊನೆಯ ಸಿಕ್ಸ್ ಸಿಡಿಸಿದ ಬ್ಯಾಟ್ (BAT)​ ಬರೋಬ್ಬರಿ ಕೋಟಿಗಳ ಬೆಲೆಗೆ ಹರಾಜಾಗುವ ಮೂಲಕ ವಿಶ್ವ ದಾಖಲೆ ಬರೆದಿತ್ತು. ಆದರೆ ಇಲ್ಲಿ ನಾವು ಹೇಳಹೊರಟಿರುವ ವಿಷಯ ಕೇಳಿದ್ರೆ ನೀವು ಒಮ್ಮೆ ಶಾಕ್​ ಆಗ್ತೀರಾ. ಹೌದು, ಖ್ಯಾತ ಬಾಸ್ಕೆಟ್​ ಬಾಲ್ (Basket Ball) ಆಟಗಾರ, ನ್ಯಾಷನಲ್ ಬಾಸ್ಕೆಟ್​ಬಾಲ್ ಅಸೋಸಿಯೇಷನ್ ​​(NBA) ಹೀರೋ ಮೈಕಲ್ ಜೋರ್ಡಾನ್ (Michael Jordan) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಅವರು ಆಟಕ್ಕೆ ವಿದಾಯ ಹೇಳಿದ 2 ದಶಕಗಳ ನಂತರವೂ ತಮ್ಮ ಆಟದಲ್ಲಿನ ಐಟಂಗಳ ಮೂಲಕ ಒಂದಲ್ಲ ಒಂದು ರೂಪದಲ್ಲಿ ಸುದ್ದಿಯಲ್ಲಿದ್ದಾರೆ. ಅದೇ ರೀತಿ ಇದೀಗ ಅವರ ಶರ್ಟ್​ ಕಾರಣದಿಂದ ಮತ್ತೆ ಸುದ್ದಿಯಲ್ಲಿದ್ದಾರೆ.

ಕೋಟಿಗಳ ಬೆಲೆಗೆ ಮಾರಾಟವಾದ ಒಂದು ಶರ್ಟ್​:

ಹೌದು, ಕೇಳಲು ಅಚ್ಚರಿ ಆದರೂ ಇದು ಸತ್ಯ. ಜೋರ್ಡಾನ್‌ನ ಬಳಸಿದ ಶೂಗಳು ಮತ್ತು ಜೆರ್ಸಿಗಳು ಅಮೆರಿಕದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಭಾರೀ ಕ್ರೇಜ್ ಅನ್ನು ಹೊಂದಿವೆ. ಅವರ ಅಭಿಮಾನಿಗಳು ಕೂಡ ಇವುಗಳನ್ನು ತಮ್ಮದಾಗಿಸಿಕೊಳ್ಳಲು ಕಾತರರಾಗಿರುತ್ತಾರೆ. ಇತ್ತೀಚೆಗಷ್ಟೇ ಮೈಕಲ್ ಜೋರ್ಡಾನ್ ಗೆ ಸಂಬಂಧಿಸಿದ ಜರ್ಸಿ ಹರಾಜಿನಲ್ಲಿ ದಾಖಲೆ ಬೆಲೆಗೆ ಮಾರಾಟವಾಗಿದೆ. ಒಂದಲ್ಲ, ಎರಡಲ್ಲ, ಜೋರ್ಡಾನ್ ಜೆರ್ಸಿಯನ್ನು ಅಭಿಮಾನಿಯೊಬ್ಬರು US$10.1 ಮಿಲಿಯನ್ ಗೆ ಖರೀದಿಸಿದ್ದಾರೆ. ಇದು ನಮ್ಮ ಕರೆನ್ಸಿಯಲ್ಲಿ ಸರಿಸುಮಾರು ರೂ. 80 ಕೋಟಿ ಆಗುತ್ತದೆ. ಜೋರ್ಡಾನ್ 1998 ರ NBA ಫೈನಲ್ಸ್‌ನ ಪಂದ್ಯದಲ್ಲಿ ಈ ಜರ್ಸಿಯನ್ನು ಧರಿಸಿದ್ದರು.

ಮೈಕಲ್ ಜೋರ್ಡಾನ್ ಜೆರ್ಸಿಯನ್ನು ಹರಾಜು ಮನೆ ಸೋಥೆಬಿಸ್ ಹರಾಜು ಮಾಡಿತು. 23 ಸಂಖ್ಯೆಯ ಜರ್ಸಿಗಾಗಿ 20 ವಿಭಿನ್ನ ಬಿಡ್‌ಗಳನ್ನು ಸ್ವೀಕರಿಸಿರುವುದಾಗಿ ಸಂಸ್ಥೆ ಹೇಳಿಕೊಂಡಿದೆ. ಸೋಥೆಬೈಸ್ ಹರಾಜಿನಲ್ಲಿ ಆರಂಭಿಕ ಬೆಲೆ $5 ಮಿಲಿಯನ್ ಹೊಂದಿತ್ತು. ಆದರೆ ನಂತರ ಹರಾಜಿನಲ್ಲಿ ನಿರೀಕ್ಷೆಗೂ ಮೀರಿ ಹಣ ಸಂಗ್ರಹವಾಗಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: Shubman Gill: ಗುಜರಾತ್ ತಂಡಕ್ಕೆ ವಿದಾಯ ಹೇಳಿದ್ರಾ ಶುಭಮನ್ ಗಿಲ್? GT ಟ್ವೀಟ್ ವೈರಲ್

ಜೋರ್ಡಾನ್ ವೃತ್ತಿ ಜೀವನ:

1984 ರಲ್ಲಿ NBA ಪ್ರವೇಶಿಸಿದ ಜೋರ್ಡಾನ್, 1998ರ ವರೆಗೆ ಚಿಕಾಗೋ ಬುಲ್ಸ್‌ಗಾಗಿ ಆಡಿದರು. ಆಟದ ಮಧ್ಯೆ ನಿವೃತ್ತಿ ಘೋಷಿಸಿದರು. ಜೋರ್ಡಾನ್ ನಂತರ ಅದನ್ನು ಹಿಂದಕ್ಕೆ ತೆಗೆದುಕೊಂಡು ತನ್ನ ಆಟವನ್ನು ಮುಂದುವರೆಸಿದರು. ಜೋರ್ಡಾನ್ ತನ್ನ ತಂಡವಾದ ಚಿಕಾಗೊ ಬುಲ್ಸ್ ಅನ್ನು ಒಟ್ಟು 6 ಬಾರಿ ಚಾಂಪಿಯನ್ ಮಾಡಿರುವ ಗೌರವವನ್ನು ಹೊಂದಿದ್ದಾರೆ. ಜೊತೆಗೆ, ಅವರು ಐದು ಬಾರಿ NBA ಫೈನಲ್ಸ್ ಬೆಸ್ಟ್ ಪ್ಲೇಯರ್​ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ನೆಟ್‌ಫ್ಲಿಕ್ಸ್ 1998 NBA ಋತುವಿನ ಕುರಿತು ಸಾಕ್ಷ್ಯಚಿತ್ರವನ್ನು ಸಹ ನಿರ್ಮಿಸಿದೆ. ಅದನ್ನು ತನ್ನ OTT ನಲ್ಲಿ 'ದಿ ಲಾಸ್ಟ್ ಡ್ಯಾನ್ಸ್' ಎಂದು ಬಿಡುಗಡೆ ಮಾಡಿದೆ. ಅದರಲ್ಲಿ, ಚಿಕಾಗೊ ಬುಲ್ಸ್ 1998 ರ ಋತುವಿನಲ್ಲಿ ಹೇಗೆ ಚಾಂಪಿಯನ್ ಆಯಿತು ಎನ್ನುವುದರ ಕುರಿತು ಸಂಕ್ಷಿಪ್ತವಾಗಿ ವಿವರಿಸಲಾಗಿದೆ.
Published by:shrikrishna bhat
First published: