• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • MI vs SRH: ಟಾಸ್​ ಗೆದ್ದ ರೋಹಿತ್ ಶರ್ಮಾ, ಮುಂಬೈ ಸೋಲಿಗಾಗಿ ಆರ್​ಸಿಬಿ ಅಭಿಮಾನಿಗಳ ಪಾರ್ಥನೆ

MI vs SRH: ಟಾಸ್​ ಗೆದ್ದ ರೋಹಿತ್ ಶರ್ಮಾ, ಮುಂಬೈ ಸೋಲಿಗಾಗಿ ಆರ್​ಸಿಬಿ ಅಭಿಮಾನಿಗಳ ಪಾರ್ಥನೆ

MI vs SRH IPL 2023

MI vs SRH IPL 2023

SRH vs MI: ಈಗಾಗಲೇ ಟಾಸ್​ ಆಗಿದ್ದು, ಟಾಸ್​ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಮೊದಲಿಗೆ ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ.

  • Share this:

ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) ಕೊನೆಯ ಹಂತಕ್ಕೆ ಬಂದು ತಲುಪಿದೆ. ಇಂದು ಲೀಗ್​ ಹಂತ ಮುಗಿಯಲಿದೆ. ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI) ಸನ್‌ರೈಸರ್ಸ್ ಹೈದರಾಬಾದ್ (SRH) ಸೆಣಸಾಡಲಿದೆ. ಹೈದಾರಾಬಾದ್ ಈಗಾಗಲೇ ಪ್ಲೇಆಫ್‌ ರೇಸ್​ನಿಂದ ಹೊರಗುಳಿದಿದ್ದರೂ, ದೊಡ್ಡ ಅಂತರದೊಂದಿಗೆ ಗೆಲುವು ಮುಂಬೈ ತಂಡವನ್ನು ಪ್ಲೇಆಫ್​ನಿಂದ ಹೊರಗಿಡಬಹುದಾಗಿದೆ. ಆದಾಗ್ಯೂ, ಆರ್​ಸಿಬಿ ತಂಡ ಗುಜರಾತ್​ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಸೋತರೆ ಮಾತ್ರ ಮುಂಬೈಗೆ ಅವಕಾಶವಿರುತ್ತದೆ. ಈಗಾಗಲೇ ಟಾಸ್​ ಆಗಿದ್ದು, ಟಾಸ್​ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಮೊದಲಿಗೆ ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ.


ವಾಂಖೆಡೆ ಸ್ಟೇಡಿಯಂ ಪಿಚ್ ವರದಿ:


ಈ ಸ್ಥಳದಲ್ಲಿ ಹೆಚ್ಚಿನ ಸ್ಕೋರಿಂಗ್ ಆಟಗಳು ಸಾಕಷ್ಟು ನಡೆದಿವೆ. ಮತ್ತೊಂದು ಬಿಗ್​ ಸ್ಕೋರ್​ ಪಂದ್ಯವನ್ನು ಇಂದು ನಿರೀಕ್ಷಿಸಬಹುದು. ಈ ಐಪಿಎಲ್‌ನಲ್ಲಿ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಒಂದು ಮಧ್ಯಾಹ್ನದ ಪಂದ್ಯವನ್ನು ಚೇಸಿಂಗ್ ತಂಡವು ಗೆದ್ದಿತ್ತು. ಅಲ್ಲದೇ ಪಿಚ್​ ಚಿಕ್ಕದಾಗಿರುವುದರಿಂದ ಬಿಗ್​ ಸ್ಕೋರ್​ ಮ್ಯಾಚ್​ ನಡೆಯುವುದು ಬಹುತೇಕ ಫೀಕ್ಸ್ ಆಗಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ಇಂದು ಬಿಸಿ ಮತ್ತು ಆರ್ದ್ರತೆ ಇರಲಿದ್ದು ತಾಪಮಾನವು 34 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಹೀಗಾಗಿ ಪಂದ್ಯಕ್ಕೆ ಮಳೆಯು ಅಡ್ಡಿಯಾಗಗುವುದಿಲ್ಲ.


ಪ್ಲೇಆಫ್​ ರೇಸ್​ನಲ್ಲಿ ಮುಂಬೈ ಇಂಡಿಯನ್ಸ್:


ಈ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಮುಂಬೈಗೆ ದೊಡ್ಡ ಗೆಲುವಿನ ಅಗತ್ಯವಿದೆ, ಆಗ ಮಾತ್ರ ಅದರ ಪ್ಲೇಆಫ್ ಭರವಸೆ ಜೀವಂತವಾಗಿರುತ್ತದೆ. ತಂಡದ ನೆಟ್ ರನ್ ರೇಟ್ ಮೈನಸ್ ನಲ್ಲಿದೆ. ಮುಂಬೈ ಇದುವರೆಗೆ 13 ಪಂದ್ಯಗಳಲ್ಲಿ 7ರಲ್ಲಿ ಜಯ ಸಾಧಿಸಿದೆ. ಮತ್ತೊಂದೆಡೆ ಹೈದರಾಬಾದ್ ತಂಡ ಟೂರ್ನಿಯಿಂದ ಹೊರಬಿದ್ದಿದೆ.


ಇದನ್ನೂ ಓದಿ: RCB vs GT: ಪಂದ್ಯಕ್ಕೂ ಮುನ್ನವೇ ಆರ್​ಸಿಬಿಗೆ ಬಿಗ್​ ಶಾಕ್​! ಮ್ಯಾಚ್​ ವಿನ್ನಿಂಗ್​ ಪ್ಲೇಯರ್​ ಐಪಿಎಲ್​ನಿಂದ ಔಟ್​


ಐಪಿಎಲ್ 2023 ಕುರಿತು ನೋಡುವುದಾದರೆ, ಮುಂಬೈ ಇದುವರೆಗೆ 13 ಪಂದ್ಯಗಳಲ್ಲಿ 7 ಅನ್ನು ಗೆದ್ದಿದೆ. 6ರಲ್ಲಿ ಸೋಲು ಕಂಡಿದ್ದಾರೆ. ಅಂಕಪಟ್ಟಿಯಲ್ಲಿ ತಂಡ 14 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ. RCB ಕೂಡ 13 ಪಂದ್ಯಗಳಲ್ಲಿ 14 ಅಂಕಗಳನ್ನು ಹೊಂದಿದೆ. ಆದರೆ ಅವರ ನೆಟ್ ರನ್​ರೇಟ್​ ಪ್ಲಸ್ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ಮುಂಬೈ ತಂಡವು ಹೈದರಾಬಾದ್ ವಿರುದ್ಧ ದೊಡ್ಡ ಗೆಲುವು ದಾಖಲಿಸಬೇಕಾಗಿದೆ. ಸನ್‌ರೈಸರ್ಸ್ ಹೈದರಾಬಾದ್ ಕುರಿತು ಮಾತನಾಡುತ್ತಾ, ತಂಡವು ಇದುವರೆಗೆ 13 ಪಂದ್ಯಗಳಲ್ಲಿ 4 ರಲ್ಲಿ ಮಾತ್ರ ಗೆಲ್ಲಲು ಸಾಧ್ಯವಾಗಿದೆ. 9ರಲ್ಲಿ ಸೋಲು ಕಂಡಿದ್ದಾರೆ.




ಅಂಕಪಟ್ಟಿಯಲ್ಲಿ ಈ ತಂಡ 10ನೇ ಸ್ಥಾನದಲ್ಲಿದೆ. ಇಲ್ಲಿಯವರೆಗೆ ಗುಜರಾತ್ ಟೈಟಾನ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಪ್ಲೇ ಆಫ್‌ಗೆ ಪ್ರವೇಶಿಸಿವೆ. ಅಂತಿಮ ತಂಡದ ಬಗ್ಗೆ ಇಂದು ನಿರ್ಧಾರವಾಗಲಿದೆ. ಇಂದು ಲೀಗ್ ಸುತ್ತಿನ ಕೊನೆಯ ದಿನವೂ ಹೌದು. ಒಟ್ಟು 70 ಪಂದ್ಯಗಳು ನಡೆಯಲಿವೆ. ಇದಾದ ಬಳಿಕ 4 ಪ್ಲೇಆಫ್ ಪಂದ್ಯಗಳು ನಡೆಯಲಿವೆ. ಮೇ 23ರಿಂದ ಪ್ಲೇಆಫ್ ಪಂದ್ಯಗಳು ಆರಂಭವಾಗಲಿವೆ. ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ಸಹ ಪ್ಲೇಆಫ್‌ಗಳ ರೇಸ್‌ನಲ್ಲಿದೆ. ಅವರು 14 ಪಂದ್ಯಗಳಲ್ಲಿ 14 ಅಂಕಗಳನ್ನು ಹೊಂದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮುಂಬೈ ಮತ್ತು ಆರ್​ಸಿಬಿ ಇಂದು ಸೋಲನುಭವಿಸಿದರೆ ಮಾತ್ರ ಅವರ ಭರವಸೆ ಉಳಿಯುತ್ತದೆ.


ಮುಂಬೈ - ಹೈದರಾಬಾದ್​ ಪ್ಲೇಯಿಂಗ್​ 11:


ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಕ್ಯಾಮೆರಾನ್ ಗ್ರೀನ್, ಸೂರ್ಯಕುಮಾರ್ ಯಾದವ್, ಟಿಮ್ ಡೇವಿಡ್, ನೆಹಾಲ್ ವಧೇರಾ, ಕ್ರಿಸ್ ಜೋರ್ಡಾನ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆಂಡಾರ್ಫ್, ಕುಮಾರ್ ಕಾರ್ತಿಕೇಯ, ಆಕಾಶ್ ಮಧ್ವಲ್.

top videos


    ಸನ್​ರೈಸರ್ಸ್​ ಹೈದರಾಬಾದ್​ ಪ್ಲೇಯಿಂಗ್​ 11: ಮಯಾಂಕ್ ಅಗರ್ವಾಲ್, ವಿವ್ರಾಂತ್ ಶರ್ಮಾ, ಏಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಹ್ಯಾರಿ ಬ್ರೂಕ್, ನಿತೀಶ್ ರೆಡ್ಡಿ, ಗ್ಲೆನ್ ಫಿಲಿಪ್ಸ್, ಸನ್ವಿರ್ ಸಿಂಗ್, ಮಯಾಂಕ್ ದಾಗರ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್.

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು