ವಾಂಖೆಡೆಯಲ್ಲಿ ನಡೆದ ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಮಹತ್ವದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಭರ್ಜರಿ ಗೆಕುವು ದಾಖಲಿತು. ಟಾಸ್ ಸೋತ ಸನ್ ರೈಸರ್ಸ್ ಹೈದರಾಬಾದ್ 20 ಓವರ್ ಗಳಲ್ಲಿ 5 ವಿಕೆಟ್ ಗೆ 200 ರನ್ ಗಳಿಸಿತು. ಈ ಬೃಹತ್ ಮೊತ್ತದ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡವು ನಿಗದಿತು 18 ಓವರ್ಗೆ 2 ವಿಕೆಟ್ ನಷ್ಟಕ್ಕೆ 201 ರನ್ ಗಳಿಸುವ ಮೂಲಕ ಭರ್ಜರಿ 8 ವಿಕೆಟ್ಗಳ ಗೆಲುವು ದಾಖಲಿಸಿದೆ. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡವು ಅಂಕಪಟ್ಟಿಯಲ್ಲಿ 4ನೇ ಸ್ಥಾನ್ಕಕೇರಿದೆ. ಈ ಮೂಲಕ ಪ್ಲೇಆಫ್ ಹಂತಕ್ಕೆ ತಲುಪಿದರೂ ಸಹ ಆರ್ಸಿಬಿ ತಂಡದ ಗೆಲುವು ಸೋಲಿನ ಮೇಲೆ ಮುಂಬೈ ಪ್ಲೇಆಫ್ ಭವಿಷ್ಯ ನಿಂತಿದೆ.
ಗ್ರೀನ್ ಭರ್ಜರಿ ಶತಕ:
ಕ್ಯಾಮರೂನ್ ಗ್ರೀನ್ ಅವರ ಅದ್ಭುತ ಶತಕ ಮತ್ತು ನಾಯಕ ರೋಹಿತ್ ಶರ್ಮಾ ಅವರ ಅರ್ಧಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್ ಐಪಿಎಲ್ ನ 69ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು 8 ವಿಕೆಟ್ ಗಳಿಂದ ಸೋಲಿಸಿ ಪ್ಲೇಆಫ್ ತಲುಪುವ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಈ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ 14 ಪಂದ್ಯಗಳಲ್ಲಿ 16 ಅಂಕ ಗಳಿಸಿ ನಾಲ್ಕನೇ ಸ್ಥಾನಕ್ಕೆ ತಲುಪಿದೆ.
𝗪𝗛𝗔𝗧. 𝗔. 𝗖𝗛𝗔𝗦𝗘!@mipaltan stay alive in #TATAIPL 2023 courtesy of an exceptional batting display and an 8-wicket win over #SRH 👏🏻👏🏻#MIvSRH pic.twitter.com/t1qXyVbkqG
— IndianPremierLeague (@IPL) May 21, 2023
ಇದನ್ನೂ ಓದಿ: RCB vs GT: ಪಂದ್ಯಕ್ಕೂ ಮುನ್ನವೇ ಆರ್ಸಿಬಿಗೆ ಬಿಗ್ ಶಾಕ್! ಮ್ಯಾಚ್ ವಿನ್ನಿಂಗ್ ಪ್ಲೇಯರ್ ಐಪಿಎಲ್ನಿಂದ ಔಟ್
ಅಬ್ಬರಿಸಿದ ಮಾಯಾಂಕ್:
ಮಯಾಂಕ್ ಮತ್ತು ವಿವ್ರಾಂತ್ 140 ರನ್ ಜೊತೆಯಾಟವಾಡಿದರು. ಇದಕ್ಕೂ ಮುನ್ನ ವಿವ್ರಾಂತ್ ಶರ್ಮಾ (69) ಅವರೊಂದಿಗೆ ಆರಂಭಿಕ ವಿಕೆಟ್‌ಗೆ ಮಯಾಂಕ್ ಅಗರ್ವಾಲ್ ಅವರ 83 ರನ್‌ಗಳ ಇನ್ನಿಂಗ್ಸ್‌ನ ಆಧಾರದ ಮೇಲೆ ಸನ್‌ರೈಸರ್ಸ್ ಹೈದರಾಬಾದ್ 5 ವಿಕೆಟ್‌ಗೆ 200 ರನ್ ಗಳಿಸಿ 83 ಎಸೆತಗಳಲ್ಲಿ 140 ರನ್ ಗಳಿಸಿತು. ಪ್ಲೇಆಫ್ ರೇಸ್‌ನಲ್ಲಿ ಉಳಿಯಲು, ಮುಂಬೈ ಈ ಪಂದ್ಯವನ್ನು ಗೆಲ್ಲಬೇಕು ಮತ್ತು ಸಂಜೆ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ಪಂದ್ಯದ ಮೇಲೆ ಎಲ್ಲರ ನಿರೀಕ್ಷೆ ಹೆಚ್ಚಿಸಿದೆ. ಸನ್ ರೈಸರ್ಸ್ ತಂಡ ಈಗಾಗಲೇ ಪ್ರಶಸ್ತಿ ರೇಸ್ ನಿಂದ ಹೊರಬಿದ್ದಿದೆ.
ಸೂರ್ಯಕುಮಾರ್ ಯಾದವ್ ಅವರು ಐದನೇ ಓವರ್‌ನಲ್ಲಿ ಮಯಾಂಕ್ ಅವರನ್ನು ರನ್ ಔಟ್ ಮಾಡುವ ಸುಲಭ ಅವಕಾಶವನ್ನು ಕಳೆದುಕೊಂಡರು. ಎಂಟನೇ ಓವರ್‌ನಲ್ಲಿ ಪಿಯೂಷ್ ವಿರುದ್ಧ ವಿವ್ರಾಂತ್ ಪಂದ್ಯದ ಮೊದಲ ಸಿಕ್ಸರ್ ಬಾರಿಸಿದರು. 10ನೇ ಓವರ್‌ನಲ್ಲಿ ಜೋರ್ಡಾನ್ ವಿರುದ್ಧ ಸತತ ನಾಲ್ಕು ಎಸೆತಗಳ ನಂತರ ಒಂದು ರನ್ ತೆಗೆದುಕೊಳ್ಳುವ ಮೂಲಕ ಅವರು ಐಪಿಎಲ್‌ನಲ್ಲಿ ತಮ್ಮ ಮೊದಲ ಅರ್ಧಶತಕವನ್ನು ಪೂರ್ಣಗೊಳಿಸಿದರು. ಮಯಾಂಕ್ 11ನೇ ಓವರ್ ನಲ್ಲಿ ಕಾರ್ತಿಕೇಯ ವಿರುದ್ಧ ಬೌಂಡರಿ ಬಾರಿಸಿ ತಂಡದ ಶತಕ ಪೂರೈಸಿದರು. ಅವರು 13ನೇ ಓವರ್‌ನಲ್ಲಿ ಬೆಹ್ರೆನ್‌ಡಾರ್ಫ್ ವಿರುದ್ಧ ಮತ್ತು 14ನೇ ಓವರ್‌ನಲ್ಲಿ ಮಧ್ವಲ್ ವಿರುದ್ಧ ಸಿಕ್ಸರ್ ಬಾರಿಸಿ ಮಿಂಚಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ