ಐಪಿಎಲ್ 2023 (IPL 2023) ಭಾಗವಾಗಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG vs MI) ಉತ್ತಮ ಬ್ಯಾಟಿಂಗ್ ಮಾಡಿತು. ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 177 ರನ್ ಗಳಿಸಿತು. ಈ ಮೊತ್ತ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಉತ್ತಮ ಅಡಿಪಾಯ ಹಾಕಿಕೊಟ್ಟರು. ಅಂತಿಮವಾಗಿ ಮುಂಬೈ ತಂಡ ನಿಗಿದತ 20 ಓವರ್ನಲ್ಲಿ 5 ವಿಕೆಟ್ ನಷ್ಟಕ್ಕೆ 172 ರನ್ ಗಳಿಸುವ ಮೂಲಕ 5 ರನ್ಗಳಿಂದ ರೋಚಕ ಸೋಲನ್ನಪ್ಪಿತು. ಈ ಮೂಲಕ ಲಕ್ನೋ ಸೂಪರ್ ಜೈಂಟ್ಸ್ 15 ಅಂಕದ ಮೂಲಕ ಅಂಕಪಟ್ಟಿಯಲ್ಲಿ ಮೇಲ್ಕಕೇರಿತು.
ಉತ್ತಮ ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್:
ಇನ್ನು, ಲಕ್ನೋ ಸೂಪರ್ ಜೈಂಟ್ಸ್ ನೀಡಿದ ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್ನಲ್ಲಿ 5 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತು. ಮುಂಬೈ ಪರ ಆರಂಭಿಕರಾಗಿ ಕಣ್ಕಕಿಳಿದ ನಾಯಕ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ 90 ರನ್ ಗಳ ಭರ್ಜರಿ ಜೊತೆಯಾಟವಾಡಿದರು. ಈ ವೇಳೆ ರೋಹಿತ್ ಶರ್ಮಾ 25 ಎಸೆತದಲ್ಲಿ 3 ಸಿಕ್ಸ್ ಮತ್ತು 1 ಫೋರ್ ಮೂಲಕ 37 ರನ್ ಮತ್ತು ಇಶಾನ್ ಕಿಶನ್ 39 ಎಸೆತದಲ್ಲಿ 1 ಸಿಕ್ಸ್ ಮತ್ತು 8 ಬೌಂಡರಿ ಮೂಲಕ ಆಕರ್ಷಕ 59 ರನ್ ಗಳಿಸಿ ಮಿಂಚಿದರು. ಉಳಿದಂತೆ ಸೂರ್ಯಕುಮಾರ್ ಯಾದವ್ 7 ರನ್, ನೇಹಾಲ್ ವದೇರಾ 16 ರನ್, ವಿಶು ವಿನೋಧ್ 2 ರನ್, ಟಿಮ್ ಡೇವಿಡ್ 32 ರನ್ ಮತ್ತು ಕ್ಯಾಮರೂನ್ ಗ್ರೀನ್ 4 ರನ್ ಗಳಿಸಿದರು. ಇನ್ನು, ಲಕ್ನೋ ಪರ ಯಶ್ ಠಾಕೂರ್ 2 ವಿಕೆಟ್ ಮತ್ತು ರವಿ ಬಿಷ್ನೋಯ್ 2 ವಿಕೆಟ್ ಪಡೆದರೆ, ಮೋಹಿನ್ ಖಾನ್ 1 ವಿಕೆಟ್ ಪಡೆದು ಮಿಂಚಿದರು.
ಪಾಂಡ್ಯ - ಸ್ಟೊಯಿನಿಸ್ ಭರ್ಜರಿ ಜೊತೆಯಾಟ:
ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ಲಕ್ನೋವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಕೈಲ್ ಮೇಯರ್ಸ್ ಅನುಪಸ್ಥಿತಿಯಲ್ಲಿ ದೀಪಕ್ ಹೂಡಾ ಓಪನರ್ ಆಗಿ ಬಂದರು. ಆದರೆ ಹೂಡಾ ಮತ್ತೊಮ್ಮೆ (5 ರನ್) ವಿಫಲರಾದರು. ಡಿ ಕಾಕ್ (16 ರನ್) ನಿರಾಸೆ ಮೂಡಿಸಿದರು. ಹೈದರಾಬಾದ್ ಪರ ಪ್ರೇರಕ್ ಮಂಕಡ್ (0) ಗೋಲ್ಡನ್ ಡಕ್ ಆದರು. ಈ ಅನುಕ್ರಮದಲ್ಲಿ ಲಕ್ನೋ ಸೂಪರ್ ಜೈಂಟ್ಸ್ 35 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡು ಒಂದು ಹಂತದಲ್ಲಿ ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಮಾರ್ಕಸ್ ಸ್ಟೊಯಿನಿಸ್ ಮತ್ತು ಕೃನಾಲ್ ಪಾಂಡ್ಯ ತಂಡಕ್ಕೆ ಆಸರೆಯಾದರು.
ಇದನ್ನೂ ಓದಿ: IPL 2023: 6 ತಿಂಗಳಲ್ಲಿ 7 ಶತಕ, 23ರ ಹರೆಯದ ಯುವಕನ ಭರ್ಜರಿ ಬ್ಯಾಟಿಂಗ್
ಇವರಿಬ್ಬರು ಮೊದಲಿಗೆ ನಿಧಾನವಾಗಿ ಆಡಿದರು. ದರು. ಪಾಂಡ್ಯ 49 ರನ್ ಗಳಿಸಿ ಇಂಜುರಿ ಹರ್ಟ್ ಆಗಿ ಹೊರನಡೆದರು. ಅರ್ಧಶತಕದ ನಂತರ ಸ್ಟೊಯಿನಿಸ್ ವೇಗವಾಗಿ ಆಡಿದರು. ಇದರೊಂದಿಗೆ ಲಕ್ನೋ ತಂಡ ಬೃಹತ್ ಮೊತ್ತ ಗಳಿಸಿತು. ಇನ್ನು, ಮಾರ್ಕಸ್ ಸ್ಟೊಯಿನಿಸ್ (47 ಎಸೆತಗಳಲ್ಲಿ ಔಟಾಗದೆ 89; 4 ಬೌಂಡರಿ, 8 ಸಿಕ್ಸರ್) ಬಿರುಸಿನ ಆಟವಾಡಿದರು. ಕೃನಾಲ್ ಪಾಂಡ್ಯ (42 ಎಸೆತಗಳಲ್ಲಿ 49; 1 ಬೌಂಡರಿ, 1 ಸಿಕ್ಸರ್) ಮಿಂಚಿದರು. ಮುಂಬೈ ಬೌಲರ್‌ಗಳ ಪೈಕಿ ಬೆಹ್ರೆಂಡಾರ್ಫ್ 2 ವಿಕೆಟ್ ಪಡೆದರು.
ಇಂಜುರಿ ಹರ್ಟ್ ಆದ ನಾಯಕ:
ಲಕ್ನೋ ಇನ್ನಿಂಗ್ಸ್‌ನ 16ನೇ ಓವರ್‌ನ ಕೊನೆಯ ಎಸೆತದಲ್ಲಿ ನಾಯಕ ಕೃನಲ್ ಗಾಯಗೊಂಡರು. ಕೊನೆಯ ಎಸೆತದಲ್ಲಿ, ಕೃನಾಲ್ ಸಿಂಗಲ್‌ಗೆ ಓಡಿದರು ಆದರೆ ಇದ್ದಕ್ಕಿದ್ದಂತೆ ಅವರು ವಿಕೆಟ್‌ನ ಮಧ್ಯದಲ್ಲಿ ಕುಂಟುತ್ತಿರುವುದು ಕಂಡುಬಂದಿತು. ಅವರ ಕಾಲಿಗೆ ಸ್ವಲ್ಪ ಸಮಸ್ಯೆ ಉಂಟಾಯಿತು. ಇದಾದ ಬಳಿಕ ತಂಡದ ಫಿಸಿಯೋ ಅವರನ್ನು ಮೈದಾನದಿಂದ ಹೊರಗೆ ಕರೆದೊಯ್ದರು. ಕೃನಾಲ್ ಗಾಯದ ಗಂಭೀರತೆಯ ಬಗ್ಗೆ ಇನ್ನೂ ಏನೂ ತಿಳಿದುಬಂದಿಲ್ಲ. ಗಾಯಗೊಂಡು ನಿವೃತ್ತಿಯಾದ ಬಳಿಕ ಮತ್ತೆ ಬ್ಯಾಟಿಂಗ್‌ಗೆ ಇಳಿಯಲು ಸಾಧ್ಯವಾಗಲಿಲ್ಲ. ಆದರೆ ಕೃನಲ್ ಪಾಂಡ್ಯ ಫಿಲ್ಡಿಂಗ್ ವೇಳೆಗೆ ಮತ್ತೆ ಮೈದಾನದಲ್ಲಿ ಕಾಣಿಸಿಕೊಂಡರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ