• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • IPL 2023, MI vs GT: ಗುಜರಾತ್ ದಾಳಿಗೆ ತತ್ತರಿಸಿದ ಮುಂಬೈ, ಹಾರ್ದಿಕ್​ ಪಡೆಗೆ ಭರ್ಜರಿ ಗೆಲುವು

IPL 2023, MI vs GT: ಗುಜರಾತ್ ದಾಳಿಗೆ ತತ್ತರಿಸಿದ ಮುಂಬೈ, ಹಾರ್ದಿಕ್​ ಪಡೆಗೆ ಭರ್ಜರಿ ಗೆಲುವು

ಗುಜರಾತ್​ ತಂಡಕ್ಕೆ ಜಯ

ಗುಜರಾತ್​ ತಂಡಕ್ಕೆ ಜಯ

IPL 2023, MI vs GT: ಗುಜರಾತ್ ನೀಡಿದ ಟಾರ್ಗೆಟ್​ ಬೆನ್ನಟ್ಟಿದ ಮುಂಬೈ ತಂಡ ಮುಂಬೈ ತಂಡವು ನಿಗದಿತ 20 ಓವರ್​ಗಳಲ್ಲಿ 9ವಿಕೆಟ್​ ನಷ್ಟಕ್ಕೆ 152 ರನ್​ ಗಳಿಸಿತು. ಮುಂಬೈ ಇಂಡಿಯನ್ಸ್ ಪರ, ರೋಹಿತ್ ಶರ್ಮಾ 2 ರನ್, ಇಶಾನ್ ಕಿಶನ್ 13 ರನ್ ಗಳಿಸಿತು.

  • Share this:

ಐಪಿಎಲ್ 2023ರ (IPl 2023) 35ನೇ ಪಂದ್ಯವು ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ (MI vs GT) ನಡುವೆ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ (Narendra Modi Stadium) ನಡೆಯಿತು. ಮೊದಲು ಬ್ಯಾಟ್ ಮಾಡಿದ ಗುಜರಾತ್ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 207 ರನ್ ಗಳಿಸಿತು. ಒಂದು ಸಮಯದಲ್ಲಿ ಗುಜರಾತ್ ಟೈಟಾನ್ಸ್ ಸ್ಕೋರ್ 12 ಓವರ್‌ಗಳಲ್ಲಿ 3 ವಿಕೆಟ್‌ಗೆ 99 ರನ್ ಆಗಿತ್ತು. ತಂಡ 170ರ ಗಡಿಯನ್ನೂ ತಲುಪಲಾರದು ಎನಿಸಿತು. ಆದರೆ, ಶುಭಮನ್ ಗಿಲ್ ಅವರ ಅರ್ಧಶತಕ, ಡೇವಿಡ್ ಮಿಲ್ಲರ್ ಮಾಡಿದ ನಂತರ ಗುಜರಾತ್ ಐಪಿಎಲ್ ಇತಿಹಾಸದಲ್ಲಿ ತನ್ನ ದೊಡ್ಡ ಸ್ಕೋರ್ ಗಳಿಸಿತು. ಈ ಮೊತ್ತ ಬೆನ್ನಟ್ಟಿದ ಮುಂಬೈ ತಂಡವು ನಿಗದಿತ 20 ಓವರ್​ಗಳಲ್ಲಿ 9ವಿಕೆಟ್​ ನಷ್ಟಕ್ಕೆ 152 ರನ್​ ಗಳಿಸಿತು. ಈ ಮೂಲಕ ಗುಜರಾತ್​ ಟೈಟನ್ಸ್ ತಂಡವು 55 ರನ್​ಗಳ ಭರ್ಜರಿ ಗೆಲುವು ದಾಖಲಿಸಿತು.


ಬ್ಯಾಟಿಂಗ್​ನಲ್ಲಿ ಎಡವಿದ ಮುಂಬೈ:


ಇನ್ನು, ಗುಜರಾತ್ ನೀಡಿದ ಟಾರ್ಗೆಟ್​ ಬೆನ್ನಟ್ಟಿದ ಮುಂಬೈ ತಂಡ ಮುಂಬೈ ತಂಡವು ನಿಗದಿತ 20 ಓವರ್​ಗಳಲ್ಲಿ 9ವಿಕೆಟ್​ ನಷ್ಟಕ್ಕೆ 152 ರನ್​ ಗಳಿಸಿತು. ಮುಂಬೈ ಇಂಡಿಯನ್ಸ್ ಪರ, ರೋಹಿತ್ ಶರ್ಮಾ 2 ರನ್, ಇಶಾನ್ ಕಿಶನ್ 13 ರನ್, ಕ್ಯಾಮೆರಾನ್ ಗ್ರೀನ್ 33 ರನ್, ಸೂರ್ಯಕುಮಾರ್ ಯಾದವ್ 23 ರನ್, ಟಿಮ್ ಡೇವಿಡ್ ಶೂನ್ಯ, ನೆಹಾಲ್ ವಧೇರಾ 40 ರನ್, ಅರ್ಜುನ್ ತೆಂಡೂಲ್ಕರ್ 13 ರನ್, ಪಿಯೂಷ್ ಚಾವ್ಲಾ 18 ರನ್, ಜೇಸನ್ ಬೆಹ್ರೆಂಡಾರ್ಫ್ 3ರನ್ ಗಳಿಸಿದರು.


ಗುಜರಾತ್​ ಭರ್ಜರಿ ಬ್ಯಾಟಿಂಗ್:


ಗುಜರಾತ್ ಬ್ಯಾಟ್ಸ್‌ಮನ್‌ಗಳು ಕೊನೆಯಲ್ಲಿ ಪ್ರತಿ ಓವರ್‌ಗೆ 20 ರನ್‌ ರೇಟ್​ನಲ್ಲಿ ರನ್​ ಗಳಸಿದರು. ಮೊದಲ ಓವರ್‌ನಲ್ಲಿ ದುಬಾರಿಯಾದ ನಂತರವೂ, ರೋಹಿತ್ ಶರ್ಮಾ ಕ್ಯಾಮರೂನ್ ಗ್ರೀನ್ ಮೇಲೆ ನಂಬಿಕೆಯಿಟ್ಟು 18ನೇ ಓವರ್ ಅನ್ನು ಅವರಿಗೆ ನೀಡಿದರು. ಆದರೆ, ಗ್ರೀನ್ ಅವರ ಈ ಓವರ್ ನಲ್ಲಿ ಡೇವಿಡ್ ಮಿಲ್ಲರ್ ಮೂರು ಸಿಕ್ಸರ್ ಬಾರಿಸಿದರು. ಈ ಓವರ್‌ನಲ್ಲಿ ಒಟ್ಟು 22 ರನ್‌ಗಳು ಬಂದವು. ರಿಲೆ ಮೆರೆಡಿತ್ ಮುಂದಿನ ಓವರ್ ಬೌಲ್ ಮಾಡಿದರು. ಈ ಓವರ್ ನ ಮೊದಲ ಎಸೆತದಲ್ಲಿ ಬಿರುಸಿನ ಬ್ಯಾಟಿಂಗ್ ಮಾಡುತ್ತಿದ್ದ ಅಭಿನವ್ ಮನೋಹರ್ ಅವರನ್ನು ಔಟ್ ಮಾಡಿದರು. ಅಭಿನವ್ 21 ಎಸೆತಗಳಲ್ಲಿ 200ರ ಸ್ಟ್ರೈಕ್ ರೇಟ್‌ನಲ್ಲಿ 42 ರನ್ ಗಳಿಸಿ ಔಟಾದರು. ಡೇವಿಡ್ ಮಿಲ್ಲರ್ ಮತ್ತು ರಾಹುಲ್ ತೆವಾಟಿಯಾ ಸೇರಿ ಕೊನೆ ಓವರ್​ನಲ್ಲಿ 19 ರನ್‌ ಸಿಡಿಸಿದರು.


ಇದನ್ನೂ ಓದಿ: IPL 2023: ಈ 2 ತಂಡಗಳು ಐಪಿಎಲ್​ ಫೈನಲ್​ಗೆ ಹೋಗೋದು ಫಿಕ್ಸ್​ ಅಂತೆ! ಹಾಗಿದ್ರೆ ಕಪ್​ ಗೆಲ್ಲೋದು ಯಾರು?


ಕೊನೆಯ ಓವರ್‌ನಲ್ಲಿ ರಾಹುಲ್ ತೆವಾಟಿಯಾ ಸತತ ಎರಡು ಸಿಕ್ಸರ್‌ಗಳನ್ನು ಸಿಡಿಸಿದ್ದು, ಗುಜರಾತ್ ಟೈಟಾನ್ಸ್ ಸ್ಕೋರ್ 200ರ ಗಡಿ ದಾಟಿತು. ಗುಜರಾತ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿತು. ಗುಜರಾತ್ ಇನ್ನಿಂಗ್ಸ್‌ನಲ್ಲಿ ಒಟ್ಟು 12 ಸಿಕ್ಸರ್‌ಗಳು ದಾಖಲಾಗಿದ್ದವು. ಕೊನೆಯ 30 ಎಸೆತಗಳಲ್ಲಿ ಗುಜರಾತ್ ಟೈಟಾನ್ಸ್ 2 ವಿಕೆಟ್ ಕಳೆದುಕೊಂಡು 77 ರನ್ ಗಳಿಸಿತು.




ನೂರ್​ ಅಹ್ಮದ್​ ಬೌಲಿಂಗ್​ನಲ್ಲಿ ಮಿಂಚಿಂಗ್​:


ಗುಜರಾತ್​ ಟೈಟನ್ಸ್ ಪರ ಬೌಲರ್​ಗಳು ಮುಂಬೈ ವಿರುದ್ಧ ಉತ್ತಮ ದಾಳಿ ನಡೆಸಿದರು. ಆರಂಭದಿಂದಲೂ ಮುಂಬೈ ಬ್ಯಾಟರ್​ಗಳ ಮೇಲೆ ಹಿಡಿತ ಸಾಧಿಸಿದ ಬೌಲರ್ಸ್​ ಎಂಐ ತಂಡವನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ಜಿಟಿ ಪರ ನೂರ್​ ಅಹ್ಮದ್​ 4 ಓವರ್​ ಮಾಡಿ 37 ರನ್ ನೀಡಿ 3 ವಿಕೆಟ್ ಪಡೆದರು. ಉಳಿದಂತೆ ರಶೀಧ್​ ಖಾನ್​ 2 ವಿಕೆಟ್​ ಮತ್ತು ಹಾರ್ದಿಕ್​ ಪಾಂಡ್ಯ 1 ವಿಕೆಟ್, ಮೋಹಿತ್​ ಶರ್ಮಾ 2 ವಿಕೆಟ್​​ ಪಡೆದು ಮಿಂಚಿದರು.

top videos
    First published: