MI vs GT 2023: ಐಪಿಎಲ್​ ಫೈನಲ್​ಗೆ ಲಗ್ಗೆಯಿಟ್ಟ ಗುಜರಾತ್, ಮುಂಬೈ ಕನಸು ನುಚ್ಚುನೂರು

ಫೈನಲ್​ಗೆ ಗುಜರಾತ್​!

ಫೈನಲ್​ಗೆ ಗುಜರಾತ್​!

MI vs GT 2023: ಗುಜರಾತ್​ ಟೈಟನ್ಸ್ ತಂಡವು ಭರ್ಜರಿ ಗೆಲುವು ದಾಖಲಿಸಿ ಸತತ 2ನೇ ಬಾರಿಗೆ ಫೈನಲ್​ ತಲುಪಿದೆ. ಅಲ್ಲದೇ ಮೇ 28ರಂದು ನಡೆಯಲಿರುವ ಫೈನಲ್​ನಲ್ಲಿ ಗುಜರಾತ್​ ತಂಡವು ಚೆನ್ನೈ ವಿರುದ್ಧ ಸೆಣಸಾಡಲಿದೆ.

  • Share this:

ಐಪಿಎಲ್ 2023ರಲ್ಲಿ (IPl 2023) ಇಂದು ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್​ ಟೈಟನ್ಸ್ ನಡುವಿನ ಮಹತ್ವದ ಪಂದ್ಯದಲ್ಲಿ ಯುವ ಆರಂಭಿಕ ಆಟಗಾರ ಶುಭ್​ಮನ್ ಗಿಲ್ (Shubman Gill) ಭರ್ಜರಿ ಶತಕ ಸಿಡಿಸಿ ಮಿಂಚಿದರು. 23 ವರ್ಷದ ಗಿಲ್ ಐಪಿಎಲ್ 16ನೇ ಋತುವಿನಲ್ಲಿ 3ನೇ ಶತಕ ಬಾರಿಸಿದರು. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಶತಕ ಬಾರಿಸುವ ಮೂಲಕ ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಗುಜರಾತ್​ ಟೈಟನ್ಸ್ ತಂಡವು ನಿಗದಿತ 20 ಓವರ್​ಗೆ 3 ವಿಕೆಟ್​ ನಷ್ಟಕ್ಕೆ 233 ರನ್​ ಗಳಿಸಿತು. ಈ ಮೊತ್ತ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡವು ನಿಗದಿತ 18.2 ಓವರ್​ಗೆ 10 ವಿಕೆಟ್​ ನಷ್ಟಕ್ಕೆ 171 ರನ್​ ಗಳಿಸುವ ಮೂಲಕ 62 ರನ್​ ಗಳಿಂದ ಸೋಲನ್ನಪ್ಪಿತು. ಈ ಮೂಲಕ ಗುಜರಾತ್​ ಟೈಟನ್ಸ್ ತಂಡವು ಭರ್ಜರಿ ಗೆಲುವು ದಾಖಲಿಸಿ ಸತತ 2ನೇ ಬಾರಿಗೆ ಫೈನಲ್​ ತಲುಪಿದೆ. ಅಲ್ಲದೇ ಮೇ 28ರಂದು ನಡೆಯಲಿರುವ ಫೈನಲ್​ನಲ್ಲಿ ಗುಜರಾತ್​ ತಂಡವು ಚೆನ್ನೈ ವಿರುದ್ಧ ಸೆಣಸಾಡಲಿದೆ.


ಮೋಹಿತ್​ ಶರ್ಮಾ ಬೌಲಿಂಗ್ ಮ್ಯಾಜಿಕ್:


ಇನ್ನು, ಗುಜರಾತ್​ ನೀಡಿದ ಬಿಗ್​ ಟಾರ್ಗೆಟ್​ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡವು ಆರಂಭದಿಂದಲೇ ವಿಕೆಟ್​ ಕಳೆದುಕೊಳ್ಳಲಾರಂಭಿಸಿತು. ಆದರೆ ಒಂದೆಡೆ ಸೂರ್ಯಕುಮಾರ್ ಯಾದವ್​ ಮಾತ್ರ ಗೋಡೆಯಂತೆ ನಿಂತು ಗೆಲುವಿನ ಆಸೆ ಚಿಗುರಿಸಿದ್ದರೂ ಸಹ ಅಂತಿಮವಾಗಿ ತಂಡ ಸೋಲನ್ನಪ್ಪಿತು. ಮುಂಬೈ ಇಂಡಿಯನ್ಸ್ ಪರ ನಾಯಕ ರೋಹಿತ್ ಶರ್ಮಾ 8 ರನ್, ನೇಹಾಲ್​ ವದೇರಾ 4 ರನ್, ಕ್ಯಾಮರೂನ್​ ಗ್ರೀನ್ 30 ರನ್, ಸೂರ್ಯಕುಮಾರ್ ಯಾದವ್ 61 ರನ್, ತಿಲಕ್ ವರ್ಮಾ 43 ರನ್, ವಿಷ್ಣು ವಿನೋಧ್ 5 ರನ್, ಟೀಮ್​ ಡೇವಿಡ್ 2 ರನ್, ಕ್ರಿಸ್​ ಜೋರ್ಡನ್​​ 2 ರನ್, ಪಿಯೂಶ್ ಚಾವ್ಲಾ ಶೂನ್ಯಕ್ಕೆ ಔಟ್​ ಆಗುವ ಮೂಲಕ ಹೀನಾಯವಾಗಿ ಸೋಲನ್ನಪ್ಪಿತು.


ಈ ಮೂಲಕ ಗುಜರಾತ್ ತಂಡ ಮತ್ತೊಮ್ಮೆ ಫೈನಲ್​ ತಲುಪಿದೆ. ಇತ್ತ ಗುಜರಾತ್​ ಪರ ಕೊನೆಯ ಹಂತದಲ್ಲಿ ಬೌಲಿಂಗ್​ಗೆ ಬಂದ ಮೋಹಿತ್​ ಶರ್ಮಾ ಸಂಪೂರ್ಣ ಪಂದ್ಯದ ಗತಿಯನ್ನೇ ಬದಲಿಸಿತು. ಮೋಹಿತ್ ಶರ್ಮಾ ಪ್ರಮುಖ 5 ವಿಕೆಟ್​ ಉರುಳಿಸುವ ಮೂಲಕ ಪಂದ್ಯದ ಗತಿಯನ್ನೇ ತಿರುಗಿಸಿದರು. ಉಳಿದಂತೆ ಮೊಹಮ್ಮದ್ ಶಮಿ 2 ವಿಕೆಟ್​, ರಶೀಧ್ ಖಾನ್​ 2 ವಿಕೆಟ್ ಜೋಶಲ್​ ಲಿಟಲ್​ 1 ವಿಕೆಟ್​ ಪಡೆದು ಮಿಂಚಿದರು.


ಇದನ್ನೂ ಓದಿ: IPL 2023 Closing Ceremony: ಐಪಿಎಲ್ ಅದ್ಧೂರಿ ಸಮಾರಂಭಕ್ಕೆ ಕೌಂಟ್‌ಡೌನ್, ಕಿಕ್ ಏರಿಸಲು ಯಾವೆಲ್ಲ ಸ್ಟಾರ್ಸ್ ಬರ್ತಿದ್ದಾರೆ?


ಶತಕದ ಮೂಲಕ ಅಬ್ಬರಿಸಿದ ಗಿಲ್:


ಶುಭಮನ್ ಗಿಲ್ ಐಪಿಎಲ್ ಪ್ಲೇಆಫ್‌ನಲ್ಲಿ ಭರ್ಜರಿ ಶತಕ ಸಿಡಿಸ ಮಿಂಚಿದರು. ಆರ್​ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ರಾಜಸ್ಥಾನ ರಾಯಲ್ಸ್ ಆರಂಭಿಕ ಆಟಗಾರ ಜೋಸ್ ಬಟ್ಲರ್ ಐಪಿಎಲ್ ಋತುವಿನಲ್ಲಿ ಅತಿ ಹೆಚ್ಚು ಶತಕಗಳ ದಾಖಲೆಯನ್ನು ಹೊಂದಿದ್ದಾರೆ. ಇಬ್ಬರೂ ಬ್ಯಾಟ್ಸ್‌ಮನ್‌ಗಳು 4-4 ಶತಕಗಳನ್ನು ಸಮಾನವಾಗಿ ಸಿಡಿಸಿದ್ದಾರೆ. ವಿರಾಟ್ ಕೊಹ್ಲಿ 2016ರಲ್ಲಿ ಈ ಸಾಧನೆ ಮಾಡಿದ್ದರೆ, ಬಟ್ಲರ್ 2022ರಲ್ಲಿ ಈ ಸಾಧನೆ ಮಾಡಿದ್ದರು. ಇದು ಕಳೆದ 6 ಇನ್ನಿಂಗ್ಸ್‌ಗಳಲ್ಲಿ ಬಲಗೈ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಅವರ ಮೂರನೇ ಶತಕವಾಗಿದೆ.




ಈ ಋತುವಿನ ಆರಂಭದಲ್ಲಿ ಅವರು ಸತತ 2 ಶತಕಗಳನ್ನು ಗಳಿಸಿದ್ದರು. ಗಿಲ್ ಈ ಋತುವಿನಲ್ಲಿ ಅತಿ ದೊಡ್ಡ ಇನ್ನಿಂಗ್ಸ್ ಆಡಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಶುಭ್​ಮನ್ ಗಿಲ್​ 60 ಎಸೆತದಲ್ಲಿ 10 ಸಿಕ್ಸ್ ಮತ್ತು 7 ಫೋರ್​ ಮೂಲಕ ಬರೋಬ್ಬರಿ 129 ರನ್ ಗಳಿಸಿದರು. ಈ ಮೂಲಕ ಐಪಿಎಲ್ 2023 ಫಾಫ್ ಡುಪ್ಲೆಸಿ ಅವರನ್ನು ಹಿಂದಿಕ್ಕಿ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಐಪಿಎಲ್​ನಲ್ಲಿ ಒಂದು ಸೀಸನ್​ನಲ್ಲಿ ಅತಿ ಹೆಚ್ಚು ರನ್​ ಗಳಿಸಿದವರ ಪಟ್ಟಿಯಲ್ಲಿ ಗಿಲ್​ ಸ್ಥಾನ ಪಡೆದಿದ್ದು, ವಿರಾಟ್ ಕೊಹ್ಲಿ ಬಳಿಕ ಒಂದು ಸೀಸನ್​ನಲ್ಲಿ 800+ ರನ್​ ಗಳಿಸಿದ 2ನೇ ಭಾರತೀಯ ಆಟಗಾರರಾಗಿದ್ದಾರೆ.

top videos
    First published: