MI Emirates: ಎಂಐ ಎಮಿರೇಟ್ಸ್‌ ತಂಡದ ಬೌಲಿಂಗ್​ ಕೋಚ್​ ಆಗಿ ಆಯ್ಕೆ ಆದ ಕನ್ನಡಿಗ

ಎಂಐ ಎಮಿರೇಟ್ಸ್‌ (MI Emirates) ಇಂದು ತನ್ನ ತಂಡದ ತರಬೇತುದಾರರ ಸಂಪೂರ್ಣ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈಗಾಗಲೇ ಮುಂಬೈ ಇಂಡಿಯನ್ಸ್ (MI) ತಂಡವನ್ನು ನಡೆಸುತ್ತಿರುವ ರಿಲಾಯನ್ಸ್ ಇಂಡಸ್ಟ್ರಿ ತೆಕ್ಕೆಗೆ MI ಎಮಿರೇಟ್ಸ್‌ ಸಹ ಸೇರ್ಪಡೆಗೊಂಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಎಂಐ ಎಮಿರೇಟ್ಸ್‌ (MI Emirates) ಇಂದು ತನ್ನ ತಂಡದ ತರಬೇತುದಾರರ ಸಂಪೂರ್ಣ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈಗಾಗಲೇ ಮುಂಬೈ ಇಂಡಿಯನ್ಸ್ (MI) ತಂಡವನ್ನು ನಡೆಸುತ್ತಿರುವ ರಿಲಾಯನ್ಸ್ ಇಂಡಸ್ಟ್ರಿ ತೆಕ್ಕೆಗೆ MI ಎಮಿರೇಟ್ಸ್‌ ಸಹ ಸೇರ್ಪಡೆಗೊಂಡಿದ್ದು, ವಿದೇಶಿ ಲೀಗ್​ಗಳಲ್ಲಿಯೂ ಭಾರತೀಯ ಕಾರುಬಾರು ನಡೆಸಲು ಸಂಸ್ಥೆ ಮುಂದಾಗಿದೆ. ಇದರ ಭಾಗವಾಗಿ ಇದೀಗ MI ಎಮಿರೇಟ್ಸ್‌ ತಂಡದ ಸಂಪೂರ್ಣ ಕೋಚ್​ಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಅದರಂತೆ ಶೇನ್ ಬಾಂಡ್ (Shane Bond) ಅವರನ್ನು MI ಎಮಿರೇಟ್ಸ್‌ಗೆ ಮುಖ್ಯ ತರಬೇತುದಾರರಾಗಿ ನೇಮಕ ಮಾಡಲಾಗಿದೆ. ಇದಲ್ಲದೇ ತಂಡದಲ್ಲಿ ಕೋಚ್​ ಸ್ಥಾನದಲ್ಲಿ ಭಾರತೀಯರೂ ಸಹ ಸೇರ್ಪಡೆಗೊಂಡಿದ್ದಾರೆ.

ಅದರಂತೆ, ಪಾರ್ಥಿವ್ ಪಟೇಲ್, ವಿನಯ್ ಕುಮಾರ್ (Vinay Kumar) ಬೌಲಿಂಗ್ ಕೋಚ್​ ಆಗಿ ನೇಮಕಗೊಂಡಿದ್ದಾರೆ. ಮಾಜಿ ಮುಂಬೈ ಇಂಡಿಯನ್ಸ್ ಆಲ್ ರೌಂಡರ್ ಜೇಮ್ಸ್ ಫ್ರಾಂಕ್ಲಿನ್ ಫೀಲ್ಡಿಂಗ್ ಕೋಚ್​ ಆಗಿ ಆಯ್ಕೆ ಆಗಿದ್ದಾರೆ. ಅಲ್ಲದೇ ಯುಎಇ ಕ್ರಿಕೆಟ್‌ನಲ್ಲಿ ಅಪಾರ ಅನುಭವ ಹೊಂದಿರುವ ರಾಬಿನ್ ಸಿಂಗ್ ಜನರಲ್ ಆಗಿ ನೇಮಕವಾಗಿದ್ದಾರೆ.

ಬಲಿಷ್ಠ ಕೋಚ್​ಗಳ ಆಯ್ಕೆ ಮಾಡಿದ ಎಮಿರೇಟ್ಸ್‌ :

ಶೇನ್ ಬಾಂಡ್ 2015 ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡಿದ್ದರು. ಅಲ್ಲದೇ ಇವರ ಅವದಿಯಲ್ಲಿ ಮುಂಬೈ 4 ಪ್ರಶಸ್ತಿಗಳನ್ನು ಗೆದ್ದಿದೆ. ಇವರ ಜೊತೆ ರಾಬಿನ್ ಸಿಂಗ್ 2010 ರಲ್ಲಿ ಮುಂಬೈ ಇಂಡಿಯನ್ಸ್‌ನ ಕೋಚಿಂಗ್ ತಂಡವನ್ನು ಸೇರಿಕೊಂಡರು. ಇನ್ನು, ಮುಂಬೈ ಇಂಡಿಯನ್ಸ್ ಹಿಂದೆ 2020 ರಿಂದ ಟ್ಯಾಲೆಂಟ್ ಸ್ಕೌಟಿಂಗ್ ತಂಡದ ಭಾಗವಾಗಿತ್ತು ಮತ್ತು ಮಾಜಿ MI ಆಟಗಾರರಾದ ವಿನಯ್ ಕುಮಾರ್ 2021 ರಲ್ಲಿ ಸ್ಕೌಟಿಂಗ್ ತಂಡವನ್ನು ಸೇರಿದರು. ಜೊತೆಗೆ ಪಾರ್ಥಿವ್ ಪಟೇಲ್ ಮತ್ತು ವಿನಯ್ ಇಬ್ಬರೂ 2015 ರಲ್ಲಿ ಮುಂಬೈ ಇಂಡಿಯನ್ಸ್ ಗೆಲುವಿನ ಅಭಿಯಾನದ ಭಾಗವಾಗಿದ್ದರು. ಇನ್ನು, ಮಾಜಿ MI ಆಲ್ ರೌಂಡರ್ ಮತ್ತು ಕೋಚ್ ಜೇಮ್ಸ್ ಫ್ರಾಂಕ್ಲಿನ್ ಕೂಡ ಫಿಲ್ಡಿಂಗ್​ ಕೋಚ್​ ಆಗಿ ಎಮಿರೇಟ್ಸ್ ತಂಡವನ್ನು ಸೇರಿಕೊಂಡಿದ್ದಾರೆ.





ಕೋಚ್​ಗಳಿಗೆ ಆತ್ಮೀಯವಾಗಿ ಸ್ವಾಗತಿಸಿದ ಆಕಾಶ್ ಅಂಬಾನಿ:

ಇನ್ನು, ನೂತನ ತಂಡದ ಕೋಚ್​ಗಳಿಗೆ ಆತ್ಮೀಯವಾಗಿ ಸ್ವಾಗತಿಸಿದ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್‌ನ ಅಧ್ಯಕ್ಷ ಆಕಾಶ್ ಎಂ. ಅಂಬಾನಿ, ‘ನಾನು ಶೇನ್, ರಾಬಿನ್, ಪಾರ್ಥಿವ್, ವಿನಯ್ ಮತ್ತು ಜೇಮ್ಸ್ ಅವರನ್ನು ಎಂಐ ಎಮಿರೇಟ್ಸ್‌ ಕುಟುಂಬಕ್ಕೆ ಆತ್ಮೀಯವಾಗಿ ಸ್ವಾಗತಿಸುತ್ತೇನೆ. ಇವರುಗಳು ವಿವಿಧ ಅವಧಿಗಳಲ್ಲಿ MI ಯ ಅವಿಭಾಜ್ಯ ಅಂಗವಾಗಿದ್ದರು. ಆದರೆ ಇದೀಗ ಇವರುಗಳು ಕೋಚ್​ ಗಳಾಗಿದ್ದು, ಉತ್ತಮವಾಗಿ ತಂಡವನ್ನು ಕಟ್ಟುವಲ್ಲಿ ಯಶಸ್ವಯಾಗುತ್ತಾರೆ ಎಂದು ಖಾತ್ರಿಯಿದೆ‘ ಎಂದು ಹೇಳಿದ್ದಾರೆ.

ಇದನ್ನೂ ಓದಿ: T20 World Cup 2022: ಟಿ20 ವಿಶ್ವಕಪ್​ಗೆ 9 ತಂಡಗಳು ಪ್ರಕಟ, ಯಾರೆಲ್ಲಾ ಸ್ಟಾರ್​ ಪ್ಲೇಯರ್ಸ್​ ಇದ್ದಾರೆ ನೋಡಿ; ಇಲ್ಲಿದೆ ಸಂಪೂರ್ಣ ಪಟ್ಟಿ

ಇದೇ ವೇಳೆ ಮಾತಾನಡಿದ MI ಎಮಿರೇಟ್ಸ್‌ನ ಮುಖ್ಯ ತರಬೇತುದಾರ ಶೇನ್ ಬಾಂಡ್, MI ಎಮಿರೇಟ್ಸ್‌ನ ಮುಖ್ಯ ತರಬೇತುದಾರನಾಗಿ ನೇಮಕಗೊಂಡಿರುವುದು ಒಂದು ವಿಶೇಷವಾಗಿದೆ. ಹೊಸ ತಂಡವನ್ನು ನಿರ್ಮಿಸಲು ಇದು ಯಾವಾಗಲೂ ಉತ್ತೇಜನಕಾರಿಯಾಗಿದೆ ಮತ್ತು ನಾನು MI ಪರಂಪರೆಯನ್ನು ಹೆಚ್ಚಿಸಲು ಮತ್ತು ನಮ್ಮ ಆಟಗಾರರನ್ನು ಆಟವನ್ನು ಪ್ರೇರೇಪಿಸಲು ಎದುರು ನೋಡುತ್ತಿದ್ದೇವೆ‘ ಎಂದು ಹೇಳಿದ್ದಾರೆ.
Published by:shrikrishna bhat
First published: