Tokyo Paralympics 2020: ಬೆಳ್ಳಿ ಪದಕ ವಿಜೇತೆ ಭಾವಿನಾ ಪಟೇಲ್ ಗೆ ಕಾರನ್ನು ಉಡುಗೊರೆಯಾಗಿ ನೀಡಲಿದೆ MG ಮೋಟರ್ ಇಂಡಿಯಾ

Car Gift: ಭಾವನಾ ಪಟೇಲ್‌ಗೆ ಯಾವ ಕಾರನ್ನು ಉಡುಗೊರೆಯಾಗಿ ನೀಡಲಾಗುವುದು ಎಂಬುದನ್ನು ಚಾಬಾ ಘೋಷಣೆ ಮಾಡಿಲ್ಲ, ಕಂಪನಿಯು ಎಸ್‌ಯುವಿ ಕಾರನ್ನು ನೀಡಬಹುದು ಎಂದು ಅಂದಾಜಿಸಲಾಗಿದೆ

ಭಾವಿನಾ ಪಟೇಲ್

ಭಾವಿನಾ ಪಟೇಲ್

  • Share this:
ಒಲಂಪಿಕ್ ಮತ್ತು ಪ್ಯಾರಾ ಒಲಿಂಪಿಕ್ಸ್ ನಲ್ಲಿ ಭಾರತದ ಸ್ಪರ್ಧಿಗಳು ಒಳ್ಳೆಯ ಪ್ರದರ್ಶನ ತೋರಿದ್ದು , ಸಧ್ಯ ನಡೆಯುತ್ತಿರುವ ಪ್ಯಾರಾ ಒಲಿಂಪಿಕ್ಸ್ ನಲ್ಲಿ ಪದಕಗಳ ಭೇಟೆಯನ್ನು ಭಾರತೀಯ ಕ್ರೀಡಾಪಟುಗಳು ಮುಂದುವರೆಸಿದ್ದಾರೆ.  ಇನ್ನು ಟೋಕಿಯೊ ಪ್ಯಾರಾ ಒಲಿಂಪಿಕ್ಸ್ 2020 ರಲ್ಲಿ ಭಾರತೀಯ ಪ್ಯಾರಾಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಭಾವಿನಾ ಪಟೇಲ್ ಅವರ ಅಸಾಧಾರಣ ಪ್ರದರ್ಶನಕ್ಕಾಗಿ ಎಂಜಿ ಮೋಟಾರ್ ಇಂಡಿಯಾ ತನ್ನ ಕಾರನ್ನು  ಬಹುಮಾನವಾಗಿ ನೀಡಿ ಅಭಿನಂದಿಸುವುದಾಗಿ ಘೋಷಿಸಿದೆ.

ಪ್ಯಾರಾ ಟೇಬಲ್ ಟೆನಿಸ್ ಆಟಗಾರ್ತಿ ಭಾವಿನಾ ಪಟೇಲ್ ಸೆಮಿಫೈನಲ್ ಮತ್ತು ಫೈನಲ್ ಸುತ್ತುಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಮಹಿಳೆಯರ ಸಿಂಗಲ್ಸ್ ಫೈನಲ್-ಕ್ಲಾಸ್ 4 ರಲ್ಲಿ ಚೀನಾದ ಝ್ಯೂ ಯಿಂಗ್ ವಿರುದ್ಧ 3-0 ಅಂತರದಲ್ಲಿ ಸೋಲುಂಡಿದ್ದಾರೆ.  ಭಾರತದ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಟೇಬಲ್ ಟೆನಿಸ್ ಆಟಗಾರ್ತಿಯಾಗಿ ಭಾವಿನಾ ಪಟೇಲ್ ಮಿಂಚಿದ್ದಾರೆ. ದೀಪಾ ಮಲಿಕ್ ನಂತರ ದೇಶಕ್ಕಾಗಿ ಪದಕ ಗೆದ್ದ  ಎರಡನೇ ಮಹಿಳಾ ಕ್ರೀಡಾಪಟು ಎನಿಸಿಕೊಂಡಿದ್ದಾರೆ.



ಭಾವನಾ ಪಟೇಲ್‌ಗೆ ಯಾವ ಕಾರನ್ನು ಉಡುಗೊರೆಯಾಗಿ ನೀಡಲಾಗುವುದು ಎಂಬುದನ್ನು ಚಾಬಾ ಘೋಷಣೆ ಮಾಡಿಲ್ಲ, ಕಂಪನಿಯು ಎಸ್‌ಯುವಿ ಕಾರನ್ನು ನೀಡಬಹುದು ಎಂದು ಅಂದಾಜಿಸಲಾಗಿದೆ. ಇದು MG ಗ್ಲೋಸ್ಟರ್, ಹೆಕ್ಟರ್, ಹೆಕ್ಟರ್ ಪ್ಲಸ್, ZS EV ಮತ್ತು ಮುಂಬರುವ ಆಸ್ಟರ್ ಕಾಂಪ್ಯಾಕ್ಟ್ SUV ಅನ್ನು ಒಳಗೊಂಡಿದೆ. ಭಾವಿನಾ ಪಟೇಲ್ ಆಸ್ಟರ್‌ನ ಮೊದಲ ಮಾಲೀಕರಲ್ಲಿ ಒಬ್ಬರಾಗುತ್ತಾರೆಯೇ ಎಂದು  ನೋಡಲು ಕಾತುರದಿಂದ ಜನರು ಕಾಯುತ್ತಿದ್ದಾರೆ. ಇದು ಇನ್ನು ಕೆಲವೇ ವಾರಗಳಲ್ಲಿ ಮಾರುಕಟ್ಟೆಗೆ ಬರಲಿದೆ.

ಭಾರತೀಯ ಕ್ರೀಡಾಪಟುಗಳ ಸಾಧನೆಗಳನ್ನು ಸಂಭ್ರಮಿಸಲು ಕಾರು ತಯಾರಕರು ಇಂಥಹ ಹೆಜ್ಜೆ ಇಡುತ್ತಿರುವುದು ನಿಜಕ್ಕೂ ಸಂತೋಷದಾಯಕ ಮತ್ತು ಪ್ರೋತ್ಸಾಹದಾಯಕವಾಗಿದೆ. ಮಹೀಂದ್ರಾ ಹೊಸ XUV700 ಅನ್ನು 13 ವರ್ಷಗಳಲ್ಲಿ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನ ತಂದುಕೊಟ್ಟ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರಿಗೆ ಉಡುಗೊರೆಯಾಗಿ ನೀಡಲಿದೆ. ಇದರ ನಡುವೆ ಟಾಟಾ ಮೋಟಾರ್ಸ್, ಇತ್ತೀಚೆಗೆ ನಾಲ್ಕನೇ ಸ್ಥಾನ ಪಡೆದ 24 ಒಲಿಂಪಿಕ್ ಕ್ರೀಡಾಪಟುಗಳಿಗೆ ಆಲ್ಟ್ರೋಜ್ ಹ್ಯಾಚ್ ಬ್ಯಾಕ್ ಅನ್ನು ಉಡುಗೊರೆಯಾಗಿ ನೀಡುವ ಮೂಲಕ ಆಟಗಾರರಲ್ಲಿ ಮನೋಸ್ಥೈರ್ಯ ಮತ್ತು ಉತ್ಸಾಹವನ್ನು ಹೆಚ್ಚು ಮಾಡಿದೆ.

ಟೋಕಿಯೊ ಒಲಿಂಪಿಕ್ಸ್ 2020 ಪದಕ ವಿಜೇತರಾದ ಮೀರಾಬಾಯಿ ಚಾನು, ರವಿಕುಮಾರ್ ದಹಿಯಾ ಮತ್ತು ಬಜರಂಗ್ ಪುನಿಯಾ ಮತ್ತು ಬಾಕ್ಸರ್ ಎಂಸಿ ಮೇರಿ ಕೋಮ್ ಅವರಿಗೆ ರೆನಾಲ್ಟ್ ಇಂಡಿಯಾ ಕಿಗರ್ ಉಪ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಉಡುಗೊರೆಯಾಗಿ ನೀಡಿದೆ.

ಅಲ್ಲದೇ ಇತ್ತೀಷೆಗಷ್ಟೆ, ಆನಂದ್ ಮಹೀಂದ್ರಾ ಅವರು ಪ್ಯಾರಾಲಿಂಪಿಕ್ ಶೂಟರ್ ಅವನಿ ಲೇಖರಾ ಅವರಿಗೆ ಎಸ್‌ಯುವಿಯನ್ನು ಉಡುಗೊರೆಯಾಗಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ.  ಮಹಿಳಾ 10 ಮೀಟರ್ ಎಆರ್ ಸ್ಟ್ಯಾಂಡಿಂಗ್ ಎಸ್‌ಎಚ್ 1 ಫೈನಲ್‌ನಲ್ಲಿ ಲೇಖಾರಾ ಚಿನ್ನ ಗೆದ್ದು ಪ್ಯಾರಾಲಿಂಪಿಕ್ ದಾಖಲೆ ನಿರ್ಮಿಸಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Sandhya M
First published: