ಕ್ರಿಕೆಟರ್ಸ್ಗೂ ತಟ್ಟಿದ #MeToo ಬಿಸಿ: ರಘು ದೀಕ್ಷಿತ್ ಬಳಿಕ ಫೇಮಸ್ ಕ್ರಿಕೆಟರ್ ಮೇಲೆ ಶ್ರೀಪಾದ ಆರೋಪ
news18
Updated:October 11, 2018, 6:38 PM IST
news18
Updated: October 11, 2018, 6:38 PM IST
ನ್ಯೂಸ್ 18 ಕನ್ನಡ
ಲೈಂಗಿಕ ಕಿರುಕುಳ ಕುರಿತಂತೆ ತಮ್ಮ ಅಳಲು ತೋಡಿಕೊಳ್ಳಲು #MeToo ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ವೇದಿಕೆ ಆಗುತ್ತಿದೆ. ಇದರಡಿಯಲ್ಲಿ ಸದ್ಯ ಶ್ರೀಲಂಕಾ ಕ್ರಿಕೆಟ್ ತಂಡದ ಪ್ರಮುಖ ಆಟಗಾರ ಲಸಿತ್ ಮಲಿಂಗ ಹೆಸರು ಕೂಡ ಕೇಳಿ ಬಂದಿದೆ.
ಈಗಾಗಲೇ ಗಾಯಕ ರಘು ದೀಕ್ಷಿತ್ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿರುವ ಗಾಯಕಿ ಚಿನ್ಮಯಿ ಶ್ರೀಪಾದ ಅವರೇ ಮಲಿಂಗರವರ ವಿರುದ್ಧವೂ ಧ್ವನಿ ಎತ್ತಿದ್ದಾರೆ.
'ಕಳೆದ 5 ವರ್ಷಗಳ ಹಿಂದೆ ಮುಂಬೈನಲ್ಲಿ ಹೋಟೆಲ್ ಒಂದಕ್ಕೆ ನನ್ನ ಗೆಳತಿಯನ್ನು ಭೇಟಿ ಆಗಲು ಹೋಗಿದ್ದೆ. ಇದೇ ಸಮಯ ಐಪಿಎಲ್ ಕೂಡ ನಡೆಯುತ್ತಿತ್ತು. ಹೋಟೆಲ್ ಸಿಬ್ಬಂದಿಯವರು ನಿಮ್ಮ ಗೆಳತಿ ಶ್ರೀಲಂಕಾ ಕ್ರಿಕೆಟರ್ ಲಸಿತ್ ಮಲಿಂಗಾ ಅವರ ರೂಂಗೆ ತೆರಳಿರುವುದಾಗಿ ತಿಳಿಸಿದ್ದರು. ಆದರೆ ನಾನು ಅಲ್ಲಿ ಹೋಗಿ ನೋಡಿದಾಗ ನನ್ನ ಫ್ರೆಂಡ್ ಇರಲಿಲ್ಲ. ತಕ್ಷಣವೇ ಮಲಿಂಗಾ ನನ್ನನ್ನು ಬೆಡ್ ಮೇಲೆ ತಳ್ಳಿದರು. ಈ ವೇಳೆ ನನಗೆ ಪ್ರತಿಭಟಿಸಲು ಸಾಧ್ಯವಾಗಿಲ್ಲ. ಸುಮ್ಮನೆ ಕಣ್ಣು ಮುಂಚಿಕೊಂಡಿದ್ದೆ. ಕೆಲ ಸಮಯದ ಬಳಿಕ ಹೊಟೇಲ್ ಸಿಬ್ಬಂದಿ ಬಾಗಿಲು ತಟ್ಟಿದ್ದು, ಮಲಿಂಗರವರು ಬಾಗಿಲು ತೆರೆಯಲು ತೆರಳಿದರು. ತಕ್ಷಣ ನಾನು ವಾಶ್ರೂಪ್ಗೆ ತೆರಳಿ ಮುಖ ತೊಳೆದುಕೊಂಡೆ ಹಾಗೂ ಸಿಬ್ಬಂದಿ ತೆರಳಿದ ಬಳಿಕ ನಾನು ಹೊರಹೋದೆ. ಅಂದು ನಾನು ಅವಮಾನವಾಗುತ್ತದೆ ಎಂದು ಎಲ್ಲೂ ಈ ವಿಷಯ ಹೇಳಿರಲಿಲ್ಲ. ಒಂದು ವೇಳೆ ನಾನು ಈ ಕುರಿತಾಗಿ ಸಾರ್ವಜನಿಕವಾಗಿ ಹೇಳಿಕೊಂಡಿದ್ದರೂ, ಮಲಿಂಗ ಬಹಳಷ್ಟು ಫೇಮಸ್ ಕ್ರಿಕೆಟರ್ ಹೀಗಾಗಿ ನೀನೇ ಬೇಕೆಂದು ಹೊಟೇಲ್ ರೂಂಗೆ ಹೋಗಿದ್ದೆ ಎಂದು ಹೇಳಿಕೊಳ್ಳುತ್ತಿದ್ದರು' ಎಂದು ತಮ್ಮ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.

Cricketer Lasith Malinga. pic.twitter.com/Y1lhbF5VSK
— Chinmayi Sripaada (@Chinmayi) October 11, 2018Loading...
Loading...