ಇತ್ತೀಚೆಗೆ ಕತಾರ್ನಲ್ಲಿ ನಡೆದಂತಹ ಫಿಫಾ ವಿಶ್ವಕಪ್ 2022 (FIFA World Cup 2022) ವೀಕ್ಷಕರ ಮೆಚ್ಚುಗೆ ಪಾತ್ರವಾಯಿತು. ಅದ್ರಲ್ಲೂ ಫಿಫಾ ವಿಶ್ವಕಪ್ನ ಫೈನಲ್ ಪಂದ್ಯಾಟವನ್ನು ಜಗತ್ತಿನೆಲ್ಲೆಡೆ ಕಾತುರದಿಂದ ಕಾಯ್ತಾ ಇದ್ರು ಅಂತಾನೇ ಹೇಳ್ಬಹುದು. ಈ ಬಾರಿ ಕತಾರ್ ಫಿಫಾ ಫುಟ್ಬಾಲ್ ವಿಶ್ವಕಪ್ 2022 ಹಲವಾರು ದಾಖಲೆಯನ್ನು ಮಾಡಿ ಫುಟ್ಬಾಲ್ (Football) ಯುಗದಲ್ಲಿ ಒಂದು ಇತಿಹಾಸವನ್ನೇ ಸೃಷ್ಟಿ ಮಾಡಿತ್ತು. ಫೈನಲ್ ಪಂದ್ಯಾಟ ಫ್ರಾನ್ಸ್ (France) ಮತ್ತು ಅರ್ಜೆಂಟೀನಾ (Argentina) ತಂಡಗಳ ನಡುವೆ ನಡೆಯಿತು. ಇದೀಗ ಅರ್ಜೆಂಟೀನಾ ತಂಡದ ಪ್ರಮುಖ ಆಟಗಾರ ಲಿಯೋನೆಲ್ ಮೆಸ್ಸಿ ಅವರಿಗೆ ಅಸ್ಸಾಂ (Assam) ಸಂಸದ ಟ್ವಿಟರ್ನಲ್ಲಿ (Twitter) ಅಭಿನಂದನೆ ಸಲ್ಲಿಸಿದರು. ಆದರೆ ಇದರಲ್ಲಿ ಟ್ವೀಟ್ ಮಾಡಿ ಅಸ್ಸಾಂ ಸಂಸದ ಅಬ್ದುಲ್ ಖಲೀಕ್ ಬಹಳಷ್ಟು ಚರ್ಚೆಗೆ ಒಳಗಾದರು.
ಹೌದು, ಅರ್ಜೆಂಟೀನಾದ ಗೆಲುವಿಗೆ ಕಾರಣರಾದ ಲಿಯೊನೆಲ್ ಮೆಸ್ಸಿಯವರಿಗೆ ಹೃದಯಾಂತರಾಳದ ಧನ್ಯವಾದಗಳು, ನಿಮ್ಮ ಅಸ್ಸಾಂ ಸಂಪರ್ಕದ ಬಗ್ಗೆ ನಾವು ಹೆಮ್ಮೆ ಪಡುತ್ತೇವೆ ಎಂದು ಟ್ವೀಟ್ ಮಾಡಿದ್ದರು. ನಂತರದಲ್ಲಿ ಇದು ಬಹಳಷ್ಟು ಚರ್ಚೆಗೆ ಕಾರಣವಾಯಿತು.
ಅಸ್ಸಾಂ ಸಂಸದರ ಟ್ವೀಟ್
ಅಬ್ದುಲ್ ಖಲೀಕ್ ಅಸ್ಸಾಂನ ಬರ್ಪೇಟಾ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ. ಕತಾರ್ ನಲ್ಲಿ ನಡೆದ ವಿಶ್ವಕಪ್ ಫುಟ್ಬಾಲ್ ಪಂದ್ಯದಲ್ಲಿ ಅರ್ಜೆಂಟೀನಾ ಗೆಲುವಿಗೆ ಅಭಿನಂದಿಸಿದ ಅಬ್ದುಲ್, ಹೃದಯಂತರಾಳದ ಅಭಿನಂದನೆಗಳು. ನಿಮ್ಮ ಅಸ್ಸಾಂ ಸಂಬಂಧದ ಬಗ್ಗೆ ನಾವು ಹೆಮ್ಮೆ ಪಡುತ್ತೇವೆ ಎಂದು ಮೆಸ್ಸಿಯ ಫೋಟೋ ಜೊತೆಗೆ ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: ಚರ್ಚೆಗೆ ಕಾರಣವಾಯ್ತು ಮೆಸ್ಸಿ ಧರಿಸಿದ್ದ ಡ್ರೆಸ್, ಏನಿದು ಕತಾರ್ ಬಿಷ್ಟ್?
ವ್ಯಕ್ತಿಯೊಬ್ಬರ ಸಂಸದರ ಟ್ವೀಟ್ಗೆ ಪ್ರತಿಕ್ರಿಯೆ
ಈ ಟ್ವೀಟ್ ಗಮನಿಸಿದ ಆದಿತ್ಯ ಶರ್ಮಾ ಎಂಬವರು ಅಬ್ದುಲ್ ಖಲೀಕ್ ಅವರ ಟ್ವೀಟ್ಗೆ ಅಸ್ಸಾಂ ಜೊತೆ ಸಂಪರ್ಕನಾ? ಎಂದು ಪ್ರತಿಕ್ರಿಯಿಸಿದ್ದಾರೆ. ಅದಕ್ಕೆ ಸಂಸದರು ಹೌದು, ಅವರು ಅಸ್ಸಾಂ ನಲ್ಲೇ ಹುಟ್ಟಿದ್ದು ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಹಲವಾರು ಟ್ವೀಟ್
ಈ ಟ್ವೀಟ್ ಗಮನಿಸಿ ಇನ್ನೊಬ್ಬರು ಸಂಸದರ ಕಾಲೆಳೆದು, ಹೌದು ಸರ್, ಅವರು ನನ್ನ ಸಹಪಾಠಿ ಎಂದೂ ಮರು ಉತ್ತರ ನೀಡಿದ್ದಾರೆ. ಹೀಗೆ ಹಲವಾರು ಟ್ವೀಟ್ಗಳು ಸಂಸದರು ಮೆಸ್ಸಿ ಕುರಿತು ಬರೆದಿದ್ದ ಟ್ವೀಟ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದಾದ ಬಳಿಕ ತನ್ನ ಗೊಂದಲವನ್ನು ಅರಿತು ಕೆಲವೇ ಹೊತ್ತಿನಲ್ಲಿ ಅಬ್ದುಲ್ ಖಲೀಕ್ ಅವರು ತಮ್ಮ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ.
ಇದು ಟ್ವಿಟರ್ನಲ್ಲಿ ಅಸ್ಸಾಂ ಸಂಸದ ಅಬ್ದುಲ್ ಖಲೀಕ್ ಅವರು ಹಾಕಿದಂತಹ ಟ್ವೀಟ್ಗೆ ಬಂದಂತಹ ಪ್ರತಿಕ್ರಿಯೆ ಆಗಿದೆ. ಆದರೆ ಕೆಲವರು ಈ ಟ್ವೀಟನ್ನು ನೋಡಿ ಫ್ಯಾಕ್ಟ್ಚೆಕ್ ಮಾಡಿ ಲಿಯೊನೆಲ್ ಮೆಸ್ಸಿ ಹುಟ್ಟಿದ್ದು ಅರ್ಜೆಂಟೀನಾದಲ್ಲಿ ಎಂದು ಹೇಳಿದ್ದಾರೆ.
ಮೆಸ್ಸಿ ಪರವಾಗಿ ಉಚಿತ ಚಹಾ
ಹೌದು, ಇತ್ತ ಭಾರತದಲ್ಲಿಯೂ ಫುಟ್ಬಾಲ್ ಫೀವರ್ ಹೆಚ್ಚಿತ್ತು ಎಂದರೆ ತಪ್ಪಾಗಲಾರದು. ಅದರಲ್ಲಿಯೂ ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಫಿಫಾ ವಿಶ್ವಕಪ್ ನೋಡುಗರ ಸಂಖ್ಯೆ ಹೆಚ್ಚಿತ್ತು. ಕೇರಳದಲ್ಲಿ ರೋನಾಲ್ಡೋ ಮತ್ತು ಮೆಸ್ಸಿಯ ಆಳೆತ್ತರದ ಕಟೌಟ್ಗಳನ್ನು ನಿರ್ಮಿಸಿದರೆ, ಪಶ್ಚಿಮ ಬಂಗಾಳದ ಮಹಿಳೆಯೊಬ್ಬರು ತಮ್ಮ ಮೆಸ್ಸಿಯ ಮೇಲಿನ ಮತ್ತು ಫುಟ್ಬಾಲ್ ಪ್ರೀತಿಗೆ ಬೇರೆಯದೇ ರೀತಿಯಲ್ಲಿ ಸುದ್ದಿಯಾಗಿದ್ದಾರೆ.
ಟೀ ಸ್ಟಾಲ್ ಹೊಂದಿರುವ ಪಶ್ಚಿಮ ಬಂಗಾಳದ ಮಹಿಳೆಯೊಬ್ಬರು ಈಗ ಇಂಟರ್ನೆಟ್ ಸೆಲೆಬ್ರಿಟಿಯಾಗಿದ್ದಾರೆ. ಅವರು ಮೆಸ್ಸಿ ನಾಯಕತ್ವದ ಅರ್ಜೆಂಟಿನಾ ತಂಡ ಫೈನಲ್ನಲ್ಲಿ ಗೆದ್ದ ಕಶರಣ ಉಚಿತವಾಗಿ ಟೀ ನೀಡುತ್ತಿದ್ದಾರೆ. ಇದರ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ