ಫುಟ್ಬಾಲ್ ದಂತಕಥೆ ಬ್ರೆಝಿಲ್ನ ಪೀಲೆ ಹೆಸರಿನಲ್ಲಿದ್ದ ಸಾರ್ವಕಾಲಿಕ ದಾಖಲೆಯನ್ನು ಮುರಿದು ಹೊಸ ಇತಿಹಾಸ ನಿರ್ಮಿಸಿದ್ದಾರೆ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ. ಡಿಸೆಂಬರ್ 22 ರಂದು ನಡೆದ ಲಾ ಲೀಗಾ ಪಂದ್ಯದಲ್ಲಿ ವಲ್ಲಾಡೋಲಿಡ್ ವಿರುದ್ಧ ಗೋಲು ಬಾರಿಸುವುದರೊಂದಿಗೆ ಮೆಸ್ಸಿ ಕ್ಲಬ್ ಪರ ಅತೀ ಹೆಚ್ಚು ಗೋಲು ದಾಖಲಿಸಿದ ದಾಖಲೆ ಬರೆದರು.
1956ರಿಂದ 1974ರ ವರೆಗೆ ಬ್ರೆಝಿಲ್ನ ಸ್ಯಾಂಟೋಸ್ ಕ್ಲಬ್ ಪರ ಆಡಿದ್ದ ಪೀಲೆ 757 ಪಂದ್ಯಗಳಲ್ಲಿ 643 ಗೋಲ್ ಬಾರಿಸಿ ಫುಟ್ಬಾಲ್ ಇತಿಹಾಸದಲ್ಲೇ ಯಾರು ಮಾಡದ ಸಾಧನೆ ಮರೆದಿದ್ದರು. ಈ ಅಪೂರ್ವ ದಾಖಲೆಯನ್ನು ಇದೀಗ ಮೆಸ್ಸಿ 644 ಗೋಲುಗಳೊಂದಿಗೆ ಮುರಿದಿದ್ದಾರೆ. 17 ಸೀಸನ್ಗಳಿಂದ ಬಾರ್ಸಿಲೋನಾ ಫುಟ್ಬಾಲ್ ಕ್ಲಬ್ ಪರ ಕಣಕ್ಕಿಳಿಯುತ್ತಿರುವ ಅರ್ಜೆಂಟೀನಾ ಆಟಗಾರ ಮೆಸ್ಸಿ 644 ಗೋಲ್ಗಳನ್ನು ಬಾರಿಸುವ ಮೂಲಕ ಈ ಅಪರೂಪದ ದಾಖಲೆ ನಿರ್ಮಿಸಿದರು.
ಫುಟ್ಬಾಲ್ ದಂತಕಥೆ ಪೀಲೆ ಅವರ ಗೋಲುಗಳ ದಾಖಲೆಯನ್ನು ಬ್ರೇಕ್ ಮಾಡಿರುವ ಖುಷಿ ಹಂಚಿಕೊಂಡಿರುವ ಮೆಸ್ಸಿ, ನಾನು ಫುಟ್ಬಾಲ್ ಆಡಲು ಆರಂಭಿಸಿದಾಗ ಯಾವುದೇ ದಾಖಲೆ ನಿರ್ಮಿಸಬಲ್ಲೆ ಅಂದುಕೊಂಡಿರಲಿಲ್ಲ. ಅದರಲ್ಲೂ ನಾನು ಮುರಿದಿರುವುದು ಪೀಲೆ ಅವರ ದಾಖಲೆ. ಈ ಕಳೆದ ಹೋದ ವರ್ಷಗಳಲ್ಲಿ ನನಗೆ ಸಹಾಯ ಮಾಡಿದ ಎಲ್ಲರಿಗೂ, ನನ್ನ ತಂಡದ ಸದಸ್ಯರು, ನನ್ನ ಕುಟುಂಬ, ನನ್ನ ಸ್ನೇಹಿತರು ಮತ್ತು ಎಲ್ಲರಿಗೂ ನಾನು ಧನ್ಯವಾದ ಹೇಳ ಬಯುಸತ್ತೇನೆ ಎಂದು ಮೆಸ್ಸಿ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ