ಕ್ರಿಕೆಟ್ ಕಾಶಿ ಲಾರ್ಡ್ಸ್​​ ಸ್ಟೇಡಿಯಂನಲ್ಲಿ ಮೆರೆದ ಭಾರತೀಯ ಆಟಗಾರರು

news18
Updated:August 7, 2018, 9:13 PM IST
ಕ್ರಿಕೆಟ್ ಕಾಶಿ ಲಾರ್ಡ್ಸ್​​ ಸ್ಟೇಡಿಯಂನಲ್ಲಿ ಮೆರೆದ ಭಾರತೀಯ ಆಟಗಾರರು
news18
Updated: August 7, 2018, 9:13 PM IST
ನ್ಯೂಸ್ 18 ಕನ್ನಡ

ಭಾರತ ಹಾಗೂ ಇಂಗ್ಲೆಂಡ್ ನಡುವಣ 5 ಟೆಸ್ಟ್ ಪಂದ್ಯಗಳ ಸರಣಿ ಪೈಕಿ ಮೊದಲ ಟೆಸ್ಟ್​ನಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಕಂಡಿದೆ. ಸದ್ಯ ಎರಡನೇ ಟೆಸ್ಟ್  ಮೇಲೆ ಕಣ್ಣಿಟ್ಟಿರುವ ಕೊಹ್ಲಿ ಪಡೆ ಕ್ರಿಕೆಟ್ ಕಾಶಿ ಲಾರ್ಡ್ಸ್​​ ಮೈದಾನದಲ್ಲಿ ಆಗಸ್ಟ್​ 9ರಿಂದ ಪುಟಿದೇಳುವ ವಿಶ್ವಾಸದಲ್ಲಿದೆ. ಇಂಗ್ಲೆಂಡ್​ನಲ್ಲಿನ ಲಾರ್ಡ್ಸ್​​ ಕ್ರೀಡಾಂಗಣ ಭಾರತ ಕ್ರಿಕೆಟ್ ತಂಡಕ್ಕೆ ಅದೃಷ್ಟದ ಮೈದಾನ ಎಂದೇ ಹೇಳಬಹುದು.

ಲಾರ್ಡ್ಸ್​​​ ಕ್ರಿಕೆಟ್ ಮೈದಾನದಲ್ಲಿ ಭಾರತ ಕ್ರಿಕೆಟ್ ತಂಡ ಮರೆಯಲಾಗದ ಇತಿಹಾಸ ಹೊಂದಿದೆ. ಭಾರತ 1932ರಲ್ಲಿ ತನ್ನ ಮೊದಲ ಟೆಸ್ಟ್ ಪಂದ್ಯ ಆಡಿದ್ದು ಇದೇ ಕ್ರೀಡಾಂಗಣದಲ್ಲಾಗಿದೆ. ಅಲ್ಲದೆ 2002ರಲ್ಲಿ ಲಾರ್ಡ್ಸ್​​ ಅಂಗಳದಲ್ಲಿ ಟೀಮ್ ಇಂಡಿಯಾ ಐತಿಹಾಸಿಕ ಗೆಲುವು ಸಾಧಿಸಿತ್ತು. ನ್ಯಾಟ್​​​​​ವೆಸ್ಟ್​​​ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಆಗಿನ ಭಾರತ ತಂಡದ ನಾಯಕನಾಗಿದ್ದ ಸೌರವ್ ಗಂಗೂಲಿ ಅವರು ಬಾಲ್ಕನಿಯಲ್ಲಿ ಶರ್ಟ್​ ಬಿಚ್ಚಿ ಸಂಭ್ರಮಿಸಿದ್ದು ಸಹ ಇದೇ ಲಾರ್ಡ್ಸ್ ಮೈದಾನದಲ್ಲಿ.

ಇನ್ನು 2007ರಲ್ಲಿ ಲಾರ್ಡ್ಸ್​​ನಲ್ಲಿ ನಡೆಯುತ್ತಿದ್ದ ಪಂದ್ಯ ಭಾರತಕ್ಕೆ ಮುಖ್ಯವಾಗಿತ್ತು. ಧೊನಿ ಅವರು ಈ ಪಂದ್ಯದಲ್ಲಿ ಶತಕ ಸಿಡಿಸಿಲ್ಲವಾದರು ಮಳೆಯ ನಡುವೆ ಪಂದ್ಯ ಡ್ರಾ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಭಾರತಕ್ಕೆ ಗೆಲ್ಲಲು 380 ರನ್​ಗಳ ಗುರಿ ನೀಡಿದ್ದ ಇಂಗ್ಲೆಂಡ್ 145 ರನ್ ಆಗುವಷ್ಟರಲ್ಲಿ ಭಾರತ 5 ವಿಕೆಟ್ ಕಳೆದುಕೊಂಡಿತ್ತು. ಈ ಸಂದರ್ಭ ವಿವಿಎಸ್ ಲಕ್ಷಣ್ ಜೊತೆಯಾದ ಧೋನಿ ಉತ್ತಮ ಇನ್ನಿಂಗ್ಸ್​ ಕಟ್ಟಿದರು. 86 ರನ್​ಗಳ ಜೊತೆಯಾಟ ನೀಡಿ ಲಕ್ಷಣ್ ಔಟ್ ಆದರು. ಆದರು ಒಬ್ಬಂಟಿಯಾಗಿ ಕ್ರೀಸ್​​ ಕಚ್ಚಿ ಆಡಿದ ಧೊನಿ 159 ಎಸೆತಗಳಲ್ಲಿ 10 ಬೌಂಡರಿ ಜೊತೆಗೆ 76 ರನ್ ಕಲೆಹಾಕಿದ್ದರು. 282 ರನ್​ಗೆ 9 ವಿಕೆಟ್ ಕಳೆದುಕೊಂಡಿದ್ದಾಗ ಜೋರಾಗಿ ಮಳೆ ಸುರಿದ ಕಾರಣ ಪಂದ್ಯವನ್ನು ಡ್ರಾ ಮೂಲಕ ಅಂತ್ಯಗೊಳಿಸಲಾಯಿತು. ಮೂರು ಟೆಸ್ಟ್​ ಪಂದ್ಯಗಳ ಸರಣಿಯಲ್ಲಿ ಭಾರತ 1-0 ಅಂತರದೊಂದಿಗೆ ಜಯ ಸಾಧಿಸಿತ್ತು. ಇನ್ನು 2014ರ ಇಂಗ್ಲೆಂಡ್ ಪ್ರವಾಸದಲ್ಲಿ ಬೌಲರ್ ಇಶಾಂತ್ ಶರ್ಮಾ ಅತ್ಯುತ್ತಮ ಪ್ರದರ್ಶನ ತೋರಿದ್ದರು. ಲಾರ್ಡ್ಸ್​​ನಲ್ಲಿ ನಡೆದ ಪಂದ್ಯದಲ್ಲಿ ಇಶಾಂತ್ 74 ರನ್​​ಗೆ 7 ವಿಕೆಟ್ ಕಬಳಿಸಿದ್ದರು. ಇದರಿಂದಲೇ 28 ವರ್ಷಗಳ ಬಳಿಕ ಇಂಗ್ಲೆಂಡ್​ನ ಲಾರ್ಡ್ಸ್​​​ ಮೈದಾನದಲ್ಲಿ ಭಾರತ ಗೆಲುವಿನ ನಗೆ ಬೀರಿತ್ತು.

ಇನ್ನೊಂದು ಪ್ರಮುಖ ವಿಷಯ ಎಂದರೆ ಗೌರವ ಫಲಕದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್​ನಲ್ಲಿ ಸಾಧನೆ ಮಾಡಿ ಎರಡರಲ್ಲೂ ತಮ್ಮ ಹೆಸರನ್ನು ಹಚ್ಚ ಹಸಿರಾಗಿರಿಸಿರುವ ಭಾರತದ ಏಕೈಕ ಆಟಗಾರ ಎಂದರೆ ವಿನೂ ಮಂಕಡ್. 1952ರಲ್ಲಿ ಲಾರ್ಡ್ಸ್​​ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಇವರು ಬ್ಯಾಟಿಂಗ್-ಬೌಲಿಂಗ್​​ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದರು. ಅದರಲ್ಲು ಇಲ್ಲಿ 184 ರನ್​​​​ ಬಾರಿಸಿದ್ದು ಇವರ ಸಾಧನೆಯಾಗಿದೆ.

ಹೀಗಾಗಿ ಲಾರ್ಡ್ಸ್​ ಅಂಗಳದಲ್ಲಿ ಸಾಧನೆ ಮಾಡಿದ ಎಲ್ಲಾ ಕ್ರಿಕೆಟ್ ತಂಡದ ಆಟಗಾರರ ಹೆಸರನ್ನು ಅಲ್ಲಿನ ಹಾನರ್ಸ್​​ ಬೋರ್ಡ್​​(ಗೌರವ ಫಲಕ)​​ನಲ್ಲಿ ಬರೆಯಲಾಗಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್​​ನಲ್ಲಿ ಸಾಧನೆ ಮಾಡಿದ 400ಕ್ಕೂ ಅಧಿಕ ಆಟಗಾರರ ಹೆಸರನ್ನು ಇಲ್ಲಿ ನಮೋದಿಸಲಾಗಿದೆ.

ಲಾರ್ಡ್ಸ್​​ನ ಮೈದಾನದ ಗೌರವ ಫಲಕದಲ್ಲಿ ನಮೋಧಿಸಿರುವ ಭಾರತೀಯ ಆಟಗಾರರ ಪಟ್ಟಿ:
Loading...

ಬ್ಯಾಟಿಂಗ್:ಬೌಲಿಂಗ್:First published:August 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ