ಕರ್ನಾಟಕದ ಈ ಕ್ರಿಕೆಟರ್ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಿಟ್ಟಿಸಲು ಇನ್ನೇನು ಮಾಡಬೇಕು..?

news18
Updated:August 24, 2018, 1:15 PM IST
ಕರ್ನಾಟಕದ ಈ ಕ್ರಿಕೆಟರ್ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಿಟ್ಟಿಸಲು ಇನ್ನೇನು ಮಾಡಬೇಕು..?
news18
Updated: August 24, 2018, 1:15 PM IST
ನ್ಯೂಸ್ 18 ಕನ್ನಡ

ಭಾರತ ಹಾಗೂ ಇಂಗ್ಲೆಂಡ್ ನಡುವಣ ನಾಲ್ಕು ಹಾಗೂ ಐದನೇ ಟೆಸ್ಟ್​ ಪಂದ್ಯಕ್ಕೆ ಬಿಸಿಸಿಐ ಟೀಂ ಇಂಡಿಯಾ ಪ್ರಕಟಿಸಿದ್ದು, ಪೃಥ್ವಿ ಷಾ ಹಾಗೂ ಹನುಮಾ ವಿಹಾರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಆದರೆ ಬಿಸಿಸಿಐಯ ಈ ಆಯ್ಕೆಯ ವಿರುದ್ಧ ಅಭಿಮಾನಿಗಳು ಗರಂ ಆಗಿದ್ದಾರೆ.

ಕಳಪೆ ಫಾರ್ಮ್​​ನಲ್ಲಿರುವ ಮುರಳಿ ವಿಜಯ್ ಹಾಗೂ ಕುಲ್ದೀಪ್ ಯಾದವ್ ಅವರನ್ನು ಕೈ ಬಿಟ್ಟು ಪೃಥ್ವಿ ಷಾ ಹಾಗೂ ಹನುಮಾ ವಿಹಾರಿಯನ್ನು ಆಯ್ಕೆಮಾಡಿದ್ದು ಸರಿ. ಆದರೆ, ಇವರಿಗಿಂತ ಹೆಚ್ಚು ಅನುಭವ ಹಾಗೂ ಫಾರ್ಮ್​​ನಲ್ಲಿರುವ ಕರ್ನಾಟಕದ ಮಯಾಂಕ್ ಅಗರ್ವಾಲ್ ಅವರನ್ನು ಆಯ್ಕೆ ಸಮಿತಿ ಯಾಕೆ ಆಯ್ಕೆ ಮಾಡಲಿಲ್ಲ?. ಅಗರ್ವಾಲ್ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಇನ್ನೇನು ಮಾಡಬೇಕು? ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

 


Loading...ಸದ್ಯ ಮಯಾಂಕ್ ಅವರ ಬ್ಯಾಟಿಂಗ್ ವೈಖರಿ ನೋಡುವುದಾದರೆ, ಭರ್ಜರಿ ಫಾರ್ಮ್​​ನಲ್ಲಂತು ಇದ್ದಾರೆ. ಅಲ್ಲದೆ ಆಂಗ್ಲರ ನಾಡಲ್ಲಿ ಆಡಿದ ಅನುಭವ ಕೂಡ ಇವರಿಗಿದೆ. ಈ ತಿಂಗಳ ಆರಂಭದಲ್ಲಿ ದಕ್ಷಿಣಾ ಆಫ್ರಿಕಾ ಎ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಅಗರ್ವಾಲ್ ಅವರು ದ್ವಿಶತಕ ಸಿಡಿಸಿ ಮಿಂಚಿದ್ದರು. 251 ಎಸೆತಗಳಲ್ಲಿ 31 ಬೌಂಡರಿ ಹಾಗೂ 4 ಸಿಕ್ಸ್​ನೊಂದಿಗೆ 220 ರನ್​ ಬಾರಿಸಿ ತಂಡದ ಗೆಲುವಿಗೆ ಕಾರಣರಾಗಿದ್ದರು. ಅಂತೆಯೆ ಆಂಗ್ಲರ ನೆಲದಲ್ಲೇ ನಡೆದ ಇಂಗ್ಲೆಂಡ್ ಲಯನ್ಸ್ ವಿರುದ್ಧ ಪಂದ್ಯದಲ್ಲಿ 104 ಎಸೆತಗಳಲ್ಲಿ 10 ಬೌಂಡರಿ ಹಾಗೂ 4 ಸಿಕ್ಸ್​ನೊಂದಿಗೆ 112 ರನ್​​​ ಸಿಡಿಸಿದ್ದರು. ಇಷ್ಟೇ ಅಲ್ಲದೆ ಇಂಗ್ಲೆಂಡ್​ನಲ್ಲೇ ಕಳೆದ ಜೂನ್​​ನಲ್ಲಿ ಸತತ ಮೂರು ಶತಕವನ್ನೂ ಬಾರಿಸಿದ್ದರು. ಇನ್ನು 2017-18ರ ರಣಜಿಯಲ್ಲಿ 1,000 ಗಳಿಸಿದ ಏಕೈಕ ಆಟಗಾರ ಎಂಬ ಕೀರ್ತಿಗೂ ಅಗರ್ವಾಲ್ ಪಾತ್ರರಾಗಿದ್ದರು.

 ಪೃಥ್ವಿ ಷಾ ಅವರು ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಆಡಿದ್ದು ಕೇವಲ 14 ಪಂದ್ಯವನ್ನಷ್ಟೆ. ಇವರ ಖಾತೆಯಲ್ಲಿ 1418 ರನ್​​​ ಇದ್ದು, 7 ಶತಕ ಹಾಗೂ 5 ಅರ್ಧಶತಕ ಸೇರಿದೆ. 188 ಷಾ ಅವರ ಗರಿಷ್ಠ ಸ್ಕೋರ್ ಆಗಿದೆ. ಅದೆ ಅಗರ್ವಾಲ್ ಅವರು ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಒಟ್ಟು 42 ಪಂದ್ಯಗಳನ್ನು ಆಡಿದ್ದು 3245 ರನ್​​ ಚಚ್ಚಿದ್ದಾರೆ. ಇದರಲ್ಲಿ 8 ಶತಕ ಹಾಗೂ 17 ಅರ್ಧಶತಕ ಸೇರಿದೆ. ಅಜೇಯ 304 ಅಗರ್ವಾಲ್ ಅವರ ಗರಿಷ್ಠ ಸ್ಕೋರ್ ಆಗಿದೆ. ಇಷ್ಟೇಲ್ಲಾ ಅನುಭವ ಹೊಂದಿರುವ ಅಗರ್ವಾಲ್ ಈಗಲೂ ಉತ್ತಮ ಪ್ರದರ್ಶನ ನೀಡುತ್ತಿದ್ದು, ಕಳೆದ ವರ್ಷ ಗಳಿಸಿದಷ್ಟು ರನ್ ಬೇರೆ ಯಾವ ಆಟಗಾರರು ಕೂಡ ಗಳಿಸಿಲ್ಲ. ಇಷ್ಟೇಲ್ಲಾ ಪ್ರತಿಭೆ ಇದ್ದರು, ಸಾಧನೆ ಮಾಡಿದ್ದರು ಅಗರ್ವಾಲ್​ಗೆ  ತಂಡದಲ್ಲಿ ಸ್ಥಾನ ಸಿಕ್ಕಿಲ್ಲದ್ದು ಅಭಿಮಾನಿಗಳಿಗೆ ಬೇಸರ ತಂದಿದೆ. ಜೊತೆಗೆ ಮಯಾಂಕ್ ತಂಡದಲ್ಲಿ ಸ್ಥಾನ ಗಿಟ್ಟಿಸ ಕೊಳ್ಳಬೇಕಾದರೆ ಇನ್ನೆಷ್ಟು ರನ್ ಬಾರಿಸಬೇಕು?, ಇನ್ನೇನು ಮಾಡಬೇಕು? ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ. ಇನ್ನು ಆಯ್ಕೆ ಸಮಿತಿ ಕರ್ನಾಟಕದ ಆಟಗಾರರನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

  

First published:August 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ