ಏಷ್ಯಾ ಕಪ್​​ಗೂ ಆಯ್ಕೆಯಾಗದ ಮಯಾಂಕ್ ಅಗರ್ವಾಲ್: ಬಿಸಿಸಿಐ ಹೇಳಿದ್ದೇನು..?

Vinay Bhat | news18
Updated:September 2, 2018, 7:07 PM IST
ಏಷ್ಯಾ ಕಪ್​​ಗೂ ಆಯ್ಕೆಯಾಗದ ಮಯಾಂಕ್ ಅಗರ್ವಾಲ್: ಬಿಸಿಸಿಐ ಹೇಳಿದ್ದೇನು..?
Vinay Bhat | news18
Updated: September 2, 2018, 7:07 PM IST
ನ್ಯೂಸ್ 18 ಕನ್ನಡ

ಸೆಪ್ಟೆಂಬರ್ 15ರಿಂದ ಆರಂಭವಾಗುವ ಏಷ್ಯಾ ಕಪ್​ಗೆ ಭಾರತ ತಂಡವನ್ನು ಬಿಸಿಸಿಐ ಈಗಾಗಲೇ ಪ್ರಕಟಿಸಿದ್ದು, ಆಯ್ಕೆದಾರರ ವಿರುದ್ಧ ಕ್ರಿಕೆಟ್ ಅಭಿಮಾನಿಗಳು ಕೆಂಡಾಮಂಡಲರಾಗಿದ್ದಾರೆ. ಮನೀಶ್ ಪಾಂಡೆ ಸೇರಿದಂತೆ, ಅಂಬಾಟಿ ರಾಯುಡು, ಕೇದಾರ್ ಜಾದವ್ ಹಾಗೂ ಅಹಮ್ಮದ್ ಖಲೀಲ್ ಹೊಸದಾಗಿ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಆದರೆ ಕಳೆದ ಒಂದು ವರ್ಷದಿಂದ ಭರ್ಜರಿ ಫಾರ್ಮ್​​ನಲ್ಲಿರುವ ಕನ್ನಡಿಗ ಮಯಾಂಕ್ ಅಗರ್ವಾಲ್​​ಗೆ ಭಾರೀ ನಿರಾಸೆಯಾಗಿದ್ದು, ಈ ಬಾರಿ ಕೂಡ ಬಿಸಿಸಿಐ ಅಗರ್ವಾಲ್​​ರನ್ನು ಕಡೆಗಣಿಸಿದೆ.

ಈ ಹಿಂದೆ ಇಂಗ್ಲೆಂಡ್ ವಿರುದ್ಧದ 4 ಹಾಗೂ 5ನೇ ಟೆಸ್ಟ್​ ಪಂದ್ಯದಿಂದಲೂ ಮಯಾಂಕ್ ಅವಕಾಶ ವಂಚಿತರಾಗಿದ್ದರು. ಇಲ್ಲಿ ಮಯಾಂಕ್ ಬದಲು ಪೃಥ್ವಿ ಷಾ ಹಾಗೂ ಹನುಮಾ ವಿಹಾರಿ ಅವರಿಗೆ ಅವಕಾಶ ನೀಡಲಾಗಿತ್ತು. ಈ ಬಗ್ಗೆಯು ಕ್ರಿಕೆಟ್ ಅಭಿಮಾನಿಗಳು, ’ಮಯಾಂಕ್ ಅಗರ್ವಾಲ್ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಇನ್ನೇನು ಮಾಡಬೇಕು' ಎಂದು ಪ್ರಶ್ನೆ ಹಾಕಿದ್ದರು. ಸದ್ಯ ಮಯಾಂಕ್ ಅವರ ಬ್ಯಾಟಿಂಗ್ ವೈಖರಿ ನೋಡುವುದಾದರೆ, ಭರ್ಜರಿ ಫಾರ್ಮ್​​ನಲ್ಲಿದ್ದಾರೆ. ಕಳೆದ ಒಂದು ವರ್ಷದಿಂದ ಅದ್ಭುತ ಪ್ರದರ್ಶನ ತೋರಿತ್ತಿದ್ದಾರೆ. ಕಳೆದ ತಿಂಗಳ ಆರಂಭದಲ್ಲಿ ದಕ್ಷಿಣಾ ಆಫ್ರಿಕಾ ಎ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಅಗರ್ವಾಲ್ ಅವರು ದ್ವಿಶತಕ ಸಿಡಿಸಿ ಮಿಂಚಿದ್ದರು. 251 ಎಸೆತಗಳಲ್ಲಿ 31 ಬೌಂಡರಿ ಹಾಗೂ 4 ಸಿಕ್ಸ್​ನೊಂದಿಗೆ 220 ರನ್​ ಬಾರಿಸಿ ತಂಡದ ಗೆಲುವಿಗೆ ಕಾರಣರಾಗಿದ್ದರು. ಅಂತೆಯೆ ಆಂಗ್ಲರ ನೆಲದಲ್ಲಿ ನಡೆದ ಇಂಗ್ಲೆಂಡ್ ಲಯನ್ಸ್ ವಿರುದ್ಧ ಪಂದ್ಯದಲ್ಲಿ 104 ಎಸೆತಗಳಲ್ಲಿ 10 ಬೌಂಡರಿ ಹಾಗೂ 4 ಸಿಕ್ಸ್​ನೊಂದಿಗೆ 112 ರನ್​​​ ಸಿಡಿಸಿದ್ದರು. 2017-18ರ ರಣಜಿಯಲ್ಲಿ 1,000 ಗಳಿಸಿದ ಏಕೈಕ ಆಟಗಾರ ಎಂಬ ಕೀರ್ತಿಗೂ ಅಗರ್ವಾಲ್ ಪಾತ್ರರಾಗಿದ್ದರು. ಇದರ ಜೊತೆಗೆ ಮೊನ್ನೆಷ್ಟೇ ಮುಕ್ತಾಯಗೊಂಡ ಚತುಷ್ಕೋನ ಕ್ರಿಕೆಟ್ ಟೂರ್ನಿಯಲ್ಲೂ ಅಗರ್ವಾಲ್ 1 ಶತಕ ಹಾಗೂ ಅರ್ಧಶತಕ ಸಿಡಿಸಿ ಮಿಂಚಿದ್ದರು.

ಆದರೆ ಬಿಸಿಸಿಐ 'ಕಳೆದ 1 ವರ್ಷದಿಂದ ಅಗರ್ವಾಲ್ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ, ಅವರಿಗೆ ಶೀಘ್ರದಲ್ಲೇ ಅವಕಾಶ ನೀಡಲಾಗುವುದು' ಎಂದು ಹೇಳಿದೆ.

ಅದೇನೆ ಇದ್ದರು ಈ ಬಾರಿ ಕೂಡ ರಾಷ್ಟ್ರೀಯಾ ತಂಡದಲ್ಲಿ ಆಡುವ ಅಗರ್ವಾಲ್ ಕನಸು ಕನಸಾಗೆ ಉಳಿದಿದೆ. ಜೊತೆಗೆ ಕ್ರಿಕೆಟ್ ಅಭಿಮಾನಿಗಳಿಗೆ ಕೋಪದ ಜೊತೆ ನೋವುಂಟು ಮಾಡಿದೆ.

ಮಯಾಂಕ್ ಅಗರ್ವಾಲ್ ಆಯ್ಕೆಯಾಗದ ಬಗ್ಗೆ ಟ್ವಿಟರ್​​ನಲ್ಲಿ ಬೇಸರ ವ್ಯಕ್ತಪಡಿಸಿದ ಅಭಿಮಾನಿಗಳು:

 



 



 



 



 



 

First published:September 2, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ