ಚಿನ್ನಸ್ವಾಮಿಯಲ್ಲಿ ಅಗರ್ವಾಲ್ ಮಿಂಚಿನ ಆಟ: ಬೃಹತ್ ಮುನ್ನಡೆಯತ್ತ ಭಾರತ 'ಎ'

news18
Updated:August 5, 2018, 5:34 PM IST
ಚಿನ್ನಸ್ವಾಮಿಯಲ್ಲಿ ಅಗರ್ವಾಲ್ ಮಿಂಚಿನ ಆಟ: ಬೃಹತ್ ಮುನ್ನಡೆಯತ್ತ ಭಾರತ 'ಎ'
news18
Updated: August 5, 2018, 5:34 PM IST
ನ್ಯೂಸ್ 18 ಕನ್ನಡ

ಬೆಂಗಳೂರು (ಆ. 05): ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಎ ಹಾಗೂ ದಕ್ಷಿಣ ಆಫ್ರಿಕಾ ಎ ತಂಡಗಳ ನಡುವಣ ಮೊದಲ ಟೆಸ್ಟ್​ ಕ್ರಿಕೆಟ್ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ದ್ವಿಶತಕ ಸಿಡಿಸಿ ರನ್​ ಮಳೆ ಸುರಿಸುತ್ತಿದ್ದಾರೆ. ಎರಡನೇ ದಿನವಾದ ಇಂದು ಭರ್ಜರಿ ಬ್ಯಾಟಿಂಗ್ ನಡೆಸಿದ ಅಗರ್ವಾಲ್, ದಿನದಾಟದ ಅಂತ್ಯಕ್ಕೆ ಮೊದಲ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾ 2 ವಿಕೆಟ್ ಕಳೆದುಕೊಂಡು 411 ರನ್​​ಗಳಿಸಿ 165 ರನ್​​ಗಳ ಮುನ್ನಡೆ ಪಡೆದಿದೆ.

ನಿನ್ನೆ (ಆ. 04) ಆರಂಭವಾದ 4 ದಿನದ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಟಾಸ್ ಗೆದ್ದ ಆಫ್ರಿಕನ್ನರು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಆದರೆ ಮೊಹಮ್ಮದ್ ಸಿರಾಜ್ ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ದ. ಆಫ್ರಿಕಾ ಎ ಮೊದಲನೇ ಇನ್ನಿಂಗ್ಸ್​​ನಲ್ಲಿ 246 ರನ್​ಗೆ ಸರ್ವಪತನ ಕಂಡಿತ್ತು. ಸಿರಾಜ್ 5 ವಿಕೆಟ್ ಕಿತ್ತು ಮಿಂಚಿದ್ದರೆ, ನವ್​ದೀಪ್ ಸೈನಿ ಹಾಗೂ ರಜ್ನೀಶ್ ತಲಾ 2 ವಿಕೆಟ್ ಪಡೆದರು.

ಬಳಿಕ ಬ್ಯಾಟಿಂಗ್ ನಡೆಸಿದ ಭಾರತ ಎ ತಂಡ ಭರ್ಜರಿ ಪ್ರಾರಂಭ ಪಡೆದುಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ಪೃಥ್ವಿ ಷಾ ಹಾಗೂ ಮಯಾಂಕ್ ಅಗರ್ವಾಲ್ ಶತಕ ಸಿಡಿಸಿ, ಮೊದಲನೇ ವಿಕೆಟ್​ಗೆ ಈ ಜೋಡಿ 277 ರನ್​ಗಳ ಕಾಣಿಕೆ ನೀಡಿತು. ಷಾ 196 ಎಸೆತಗಳಲ್ಲಿ 20 ಬೌಂಡರಿ ಹಾಗೂ 1 ಸಿಕ್ಸ್​ನೊಂದಿಗೆ 136 ರನ್​​ ಬಾರಿಸಿ ಔಟ್ ಆದರು. ಬಳಿಕ ಅಗರ್ವಾಲ್ ಜೊತೆಯಾದ ಸಮರ್ಥ್​ ಹೆಚ್ಚು ಕ್ರೀಸ್​ನಲ್ಲಿ ಇರಲಿಲ್ಲ. ಕೇವಲ 37 ರನ್​ ಗಳಿಸಿ ಸಮರ್ಥ್​ ಔಟ್ ಆದರು. ಸದ್ಯ ಎರಡನೇ ದಿನದಾಟದ ಅಂತ್ಯಕ್ಕೆ ಭಾರತ ಎ 2 ವಿಕೆಟ್ ನಷ್ಟಕ್ಕೆ 411 ರನ್​​ ಗಳಿಸಿದೆ. ಮಯಾಂಕ್ ಅಗರ್ವಾಲ್ 220 ರನ್​ ಗಳಿಸಿ ಹಾಗೂ ನಾಯಕ ಶ್ರೇಯಸ್ ಅಯ್ಯರ್ 09 ರನ್​ ಬಾರಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
First published:August 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...