ಮಿಂಚಿದ ಅಗರ್ವಾಲ್; ಭಾರತ ಎ ವಿರುದ್ಧ ಭಾರತ ಬಿ ತಂಡಕ್ಕೆ ಭರ್ಜರಿ ಜಯ

news18
Updated:August 25, 2018, 4:46 PM IST
ಮಿಂಚಿದ ಅಗರ್ವಾಲ್; ಭಾರತ ಎ ವಿರುದ್ಧ ಭಾರತ ಬಿ ತಂಡಕ್ಕೆ ಭರ್ಜರಿ ಜಯ
  • News18
  • Last Updated: August 25, 2018, 4:46 PM IST
  • Share this:
ನ್ಯೂಸ್ 18 ಕನ್ನಡ

ಬೆಂಗಳೂರಿನ ಹೊರವಲಯದಲ್ಲಿರುವ ಆಲೂರಿನ ಕೆಎಸ್​​ಸಿಎ ಕ್ರೀಡಾಂಗಣದಲ್ಲಿ ನಡೆದ ಚತುಷ್ಕೋನ ಏಕದಿನ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಭಾರತ ಎ ವಿರುದ್ಧ ಭಾರತ ಬಿ ತಂಡ 7 ವಿಕೆಟ್​​ಗಳ ಭರ್ಜರಿ ಜಯ ಸಾಧಿಸಿದೆ. ಭಾರತ ಎ ನೀಡಿದ್ದ 218 ರನ್​​ಗಳ ಟಾರ್ಗಟ್ ಅನ್ನು ಸುಲಭ ರೀತಿಯಲ್ಲಿ ಬೆನ್ನಟ್ಟಿ ಮಯಾಂಕ್ ಅಗರ್ವಾಲ್ ಅವರ ಶತಕದ ನೆರವಿನಿಂದ ಭಾರತ ಬಿ ಗೆಲುವು ಕಂಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ಎ ಉತ್ತಮ ಆರಂಭ ಸಿಕ್ಕಿಲ್ಲ. 50 ರನ್​​ಗೂ ಮುನ್ನ ತನ್ನ ಪ್ರಮುಖ 3 ವಿಕೆಟ್ ಕಳೆದುಕೊಂಡಿತು. ಒಂದು ಕಡೆ ವಿಕೆಟ್ ಉರುಳುತ್ತಿದ್ದರೆ ಅಂಬಾಟಿ ರಾಯುಡು ಕ್ರೀಸ್ ಕಚ್ಚಿ ಆಡುವ ಮೂಲಕ ತಂಡಕ್ಕೆ ಕೊಂಚ ಚೇತರಿಕೆ ನೀಡಿದರು. ಆದರೆ 48 ರನ್ ಗಳಿಸುವ ಹೊತ್ತಿಗೆ ರಾಯುಡು ಔಟ್ ಆದರೆ, ಸಂಜು ಸ್ಯಾಮ್ಸ್ 32, ಕೃಷ್ಣಪ್ಪ ಗೌತಮ್ 35 ರನ್​​​ ಬಾರಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್​ಮನ್​​ಗಳು ಬೇಗನೆ ಪೆವಿಲಿಯನ್ ಸೇರಿಕೊಂಡರು. ಪರಿಣಾಮ ಭಾರತ ಎ ತಂಡ 217 ರನ್​​ಗೆ ಆಲೌಟ್ ಆಯಿತು. ಭಾರತ ಬಿ ಪರ ಪ್ರಸಿದ್ಧ್ ಕೃಷ್ಣ 4 ವಿಕೆಟ್ ಪಡೆದರೆ, ಶ್ರೇಯಸ್ ಗೋಪಾಲ್ 2 ವಿಕೆಟ್ ಕಿತ್ತರು.

ಇತ್ತ 218 ರನ್​ಗಳ ಗುರಿ ಬೆನ್ನಟ್ಟಿದ ಭಾರತ ಬಿ ತಂಡಕ್ಕೆ ಮಯಾಂಕ್ ಅಗರ್ವಾಲ್ ಹಾಗೂ ಶುಭ್ಮನ್ ಗಿಲ್ ಭರ್ಜರಿ ಜೊತೆಯಾಟ ನೀಡಿದರು. 2ನೇ ವಿಕೆಟ್​​ಗೆ ಈ ಜೋಡಿ 97 ರನ್​​​ಗಳ ಕಾಣಿಕೆ ನೀಡಿತು. ಆದರೆ ಗಿಲ್ 42 ರನ್​​ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಬಳಿಕ ಮನೀಶ್ ಪಾಂಡೆ ಜೊತೆಯಾದ ಅಗರ್ವಾಲ್ ಭರ್ಜರಿ ಬ್ಯಾಟಿಂಗ್ ನಡೆಸಿ ಶತಕ ಸಿಡಿಸಿದರು. 114 ಎಸೆತಗಳಲ್ಲಿ 14 ಬೌಂಡರಿ ಹಾಗೂ 3 ಸಿಕ್ಸ್​ನೊಂದಿಗೆ 124 ರನ್ ಬಾರಿಸಿ, ತಂಡಕ್ಕೆ ಗೆಲುವನ್ನು ಖಚಿತ ಪಡಿಸಿ ಅಗರ್ವಾಲ್ ನಿರ್ಗಮಿಸಿದರು. ಕೊನೆಗೆ ನಾಯಕ ಮನೀಶ್ ಪಾಂಡೆ 21 ರನ್ ಬಾರಿಸುವ ಮೂಲಕ 41.1 ಓವರ್​​ನಲ್ಲಿ ತಂಡ ಗೆಲುವಿನ ನಗೆ ಬೀರಿತು. ಶತಕ ಬಾರಿಸಿ ತಂಡದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ ಮಯಾಂಕ್ ಅಗರ್ವಾಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.
First published: August 25, 2018, 4:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading