Asian Boxing Championship: ಮೇರಿ ಕೋಮ್ ಮತ್ತೊಂದು ಸಾಧನೆ; ಭಾರತಕ್ಕೆ ಬೆಳ್ಳಿ ಪದಕ

ಬೆಳ್ಳಿ ಪದಕ ಗೆದ್ದ ಮೇರಿ ಕೋಮ್ 5,000 ಡಾಲರ್(3,61,968 ರೂ) ಬಹುಮಾನ ಪಡೆದರು. ಚಿನ್ನದ ಪದಕ ಗೆದ್ದ ನಾಜಿಮ್​ 10,000 ಡಾಲರ್(7,23,937ರೂ) ಮೊತ್ತವನ್ನು ಬಹುಮಾನವಾಗಿ ಪಡೆದರು.

ಮೇರಿ ಕೋಮ್

ಮೇರಿ ಕೋಮ್

 • Share this:
  ಭಾನುವಾರ ದುಬೈನಲ್ಲಿ ನಡೆದ ಏಷ್ಯನ್​ ಬಾಕ್ಸಿಂಗ್ ಚಾಂಪಿಯನ್​ಶಿಪ್​​ನ 51 ಕೆ.ಜಿ ವಿಭಾಗದ ಫೈನಲ್​ನಲ್ಲಿ ಭಾರತದ ಖ್ಯಾತ ಮಹಿಳಾ ಬಾಕ್ಸರ್​​ ಮೇರಿ ಕೋಮ್​ ಬೆಳ್ಳಿ ಪದಕ ಗೆದಿದ್ದಾರೆ. ಅಂತಿಮ ಸುತ್ತಿನಲ್ಲಿ 6 ಬಾರಿ ವಿಶ್ವ ಚಾಂಪಿಯನ್​​ ಪಡೆದ ಮೇರಿ ಕೋಮ್​ ಮತ್ತು ಕಜಕಿಸ್ತಾನದ ನಾಜಿಮ್ ಕಿಜೈಬೇ ನಡುವೆ ಹಣಾಹಣಿ ಏರ್ಪಟ್ಟಿತ್ತು. ನಾಜಿಮ್​ ವಿರುದ್ಧ ಸೆಣಸಾಡಿದರೂ ಮೇರಿ ಕೋಮ್ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

  ಎರಡು ಬಾರಿ ವಿಶ್ವ ಚಾಂಪಿಯನ್​ ಆಗಿರುವ ನಾಜಿಮ್ ವಿರುದ್ಧ 6 ಬಾರಿ ವಿಶ್ವ ಚಾಂಪಿಯನ್​ ಆಗಿರುವ ಮೇರಿ ಕೋಮ್​ ಸೋಲು ಅನುಭವಿಸಿದರು. ನಾಜಿಮ್​ ಏಷ್ಯನ್ ಚಾಂಪಿಯನ್​ಶಿಪ್​ ಬಾಕ್ಸಿಂಗ್ ಫೈನಲ್​ ಪಂದ್ಯದಲ್ಲಿ ಪಂಚಿಂಗ್ ಮೂಲಕ 3-2 ಅಂತರ ಮುನ್ನಡೆ ಸಾಧಿಸಿದರು. ಆ ಮೂಲಕ ಕೊನೆಯ ಕ್ಷಣದವರೆಗೆ ಮೇರಿ ಕೋಮ್​​ಗೆ ಪ್ರಬಲ ಪೈಪೋಟಿ ನೀಡಿದರು.

  ಇದನ್ನೂ ಓದಿ:Black Fungus: ರಾಜ್ಯದಲ್ಲಿ ಈವರೆಗೆ 39 ಮಂದಿ ಬ್ಲ್ಯಾಕ್​ ಫಂಗಸ್​ಗೆ ಬಲಿ; 1250 ಕೇಸ್​ ಪತ್ತೆ

  ತನಗಿಂತ 11 ವರ್ಷ ಕಿರಿಯವರಾದ ನಾಜಿಮ್ ವಿರುದ್ಧ ಮೇರಿ ಕೋಮ್​ ಸೆಣಸಾಟ ನಡೆಸಿದರು. ಮೊದಲ ಸುತ್ತಿನಲ್ಲಿ ಮೇರಿ ಕೋಮ್​ ಮುನ್ನಡೆ ಸಾಧಿಸಿದರೂ, ನಂತರದ 2 ಸುತ್ತುಗಳಲ್ಲಿ ನಾಜಿಮ್​ ಮೇರಿ ಕೋಮ್​ಗೆ ತಿರುಗೇಟು ನೀಡಿದರು. ಸ್ಪರ್ಧೆ ಮುಂದುವರೆದಂತೆ ನಾಜಿಮ್ ಬಲವಾದರೆ, ಮೇರಿ ಕೋಮ್ ನಿರಾಸೆ ಅನುಭವಿಸಿದರು. ಅಂತಿಮ ಸುತ್ತಿನಲ್ಲಿ ಮೇರಿ ಸ್ವಲ್ಪ ತೀವ್ರತೆಯನ್ನು ತೋರಿಸಿದರೂ ಸಹ ಎದುರಾಳಿ ನಾಜಿಮ್ ಅವರನ್ನು ಹಿಮ್ಮೆಟ್ಟಿಸುವಲ್ಲಿ ವಿಫಲರಾದರು.

  ಬೆಳ್ಳಿ ಪದಕ ಗೆದ್ದ ಮೇರಿ ಕೋಮ್ 5,000 ಡಾಲರ್(3,61,968 ರೂ) ಬಹುಮಾನ ಪಡೆದರು. ಚಿನ್ನದ ಪದಕ ಗೆದ್ದ ನಾಜಿಮ್​ 10,000 ಡಾಲರ್(7,23,937ರೂ) ಮೊತ್ತವನ್ನು ಬಹುಮಾನವಾಗಿ ಪಡೆದರು.

  ಏಷ್ಯನ್​​ ಸರ್ಕ್ಯೂಟ್​​ನಲ್ಲಿ ಇದು ಭಾರತ ಪಡೆದ ಎರಡನೇ ಬೆಳ್ಳಿ ಪದಕವಾಗಿದೆ. ಜೊತೆಗೆ ಈಗಾಗಲೇ 5 ಚಿನ್ನದ ಪದಕಗಳನ್ನು ಭಾರತ ಗಳಿಸಿದೆ. ಮೇರಿ ಕೋಮ್​​ 6 ಬಾರಿ ವಿಶ್ವ ಚಾಂಪಿಯನ್ ಆಗಿದ್ದರೆ, ನಾಜಿಮ್​ 2 ಬಾರಿ ವಿಶ್ವ ಚಾಂಪಿಯನ್ ಆಗಿದ್ದಾರೆ.

  ಇದನ್ನೂ ಓದಿ:Coronavirus India Updates: 50 ದಿನಗಳ ಬಳಿಕ ದೇಶದಲ್ಲಿ ಒಂದೂವರೆ ಲಕ್ಷದಷ್ಟು ಕೊರೋನಾ ಪ್ರಕರಣಗಳು ಪತ್ತೆ

  ಇನ್ನೊಂದೆಡೆ ಭಾರತದ ಹಾಲಿ ಚಾಂಪಿಯನ್ ಪೂಜಾ ರಾಣಿ 75 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿರುವ ಪೂಜಾ ರಾಣಿ ಉಜ್ಬೇಕಿಸ್ತಾನ್‌ನ ಮಾವ್ಲುಡಾ ಮೊವ್ಲೋನೋವಾ ವಿರುದ್ಧ ರೋಚಕ ಕದನದಲ್ಲಿ ಚಿನ್ನ ಗೆದ್ದರು. ಚಿನ್ನದ ಪದಕದ ಈ ಗುದ್ದಾಟಕ್ಕೆ ಪೂಜಾ 10,000 ಡಾಲರ್ (72,41,050 ರೂ.) ನಗದು ಪುರಸ್ಕಾರ ಜಯಿಸಿದ್ದಾರೆ.

  6 ಬಾರಿಯ ವಿಶ್ವಚಾಂಪಿಯನ್‌ ಮೇರಿ ಕೋಮ್ (51 ಕೆಜಿ) ಸೇರಿ ಮೂವರು ಭಾರತೀಯ ಬಾಕ್ಸರ್‌ಗಳಿಗೆ ಬೆಳ್ಳಿಯ ಪದಕ ಲಭಿಸಿದೆ.
  Published by:Latha CG
  First published: