HOME » NEWS » Sports » MARTIN GUPTILL SMASHES JOINT FOURTH FASTEST T20 CENTURY

ಕೇವಲ 38 ಎಸೆತಗಳಲ್ಲಿ 102 ರನ್: ಮಾರ್ಟಿನ್ ಗುಪ್ಟಿಲ್ ಅಬ್ಬರದ ಶತಕ

news18
Updated:July 28, 2018, 6:11 PM IST
ಕೇವಲ 38 ಎಸೆತಗಳಲ್ಲಿ 102 ರನ್: ಮಾರ್ಟಿನ್ ಗುಪ್ಟಿಲ್ ಅಬ್ಬರದ ಶತಕ
  • News18
  • Last Updated: July 28, 2018, 6:11 PM IST
  • Share this:
ನ್ಯೂಸ್ 18 ಕನ್ನಡ

ನ್ಯೂಜಿಲೆಂಡ್ ತಂಡದ ಸ್ಟಾರ್ ಬ್ಯಾಟ್ಸ್​ಮನ್​ ಮಾರ್ಟಿನ್ ಗುಪ್ಟಿಲ್ ಅವರು ಟಿ-20 ಕ್ರಿಕೆಟ್​​ನಲ್ಲಿ 38 ಎಸೆತಗಳಲ್ಲಿ 102 ರನ್ ಬಾರಿಸಿ ವೇಗದ ಶತಕ ಸಿಡಿಸಿದ್ದಾರೆ.

ವೊರ್ಸೆಸ್ಟರ್​​​​ಶೈರ್ ತಂಡದ ಪರ ಆಡಿದ ಗುಪ್ಟಿಲ್ ಇಂಗ್ಲೆಂಡ್​​ ಕೌಂಟಿ ಕ್ರಿಕೆಟ್​​ನ ನಾರ್ಥಂಟನ್​​ಶೈರ್ ತಂಡದ ವಿರುದ್ಧದ ಟಿ-20 ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. 35 ಎಸೆತದಲ್ಲಿ ಶತಕ ಸಿಡಿಸಿದ ಗುಪ್ಟಿಲ್ ಒಟ್ಟು 38 ಎಸೆತಗಳಲ್ಲಿ 12 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸ್​​​ನೊಂದಿಗೆ 102 ರನ್​ ಚಚ್ಚಿ ಔಟ್ ಆದರು.

 ಈ ಹಿಂದೆ 2013ರ ಐಪಿಎಲ್​ನಲ್ಲಿ ಕ್ರಿಸ್ ಗೇಲ್ ಅವರು 30 ಎಸೆತಗಳಲ್ಲಿ ಶತಕ ದಾಖಲಿಸಿದ್ದು ಈವರೆಗಿನ ಅತಿ ವೇಗದ ಶತಕವಾಗಿದೆ. ಅಂತೆಯೆ ಭಾರತದಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ರಿಷಭ್ ಪಂತ್ 32 ಎಸೆತಗಳಲ್ಲಿ ವೇಗದ ಶತಕ ಸಿಡಿಸಿದ್ದರು.ನಾರ್ಥಂಪ್ಟನ್​​ಶೈರ್ ನೀಡಿದ್ದ 188 ರನ್​​ಗಳ ಗುರಿ ಬೆನ್ನಟ್ಟಿದ ವೊರ್ಸೆಸ್ಟರ್​​ಶೈರ್​​​ ತಂಡ ಗುಪ್ಟಿಲ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಕೇವಲ 13.1 ಓವರ್​ನಲ್ಲೇ ಗೆಲುವಿನ ದಡ ಸೇರಿತು. ಗುಪ್ಟಿಲ್ ಅವರಿಗೆ ಜೋ ಕ್ಲಾರ್ಕ್ ಅವರು ಉತ್ತಮ ಸಾತ್ ನೀಡಿ 33 ಎಸೆತಗಳಲ್ಲಿ 61 ರನ್ ಬಾರಿಸಿ ಅಜೇಯರಾಗಿ ಉಳಿದರು.
First published: July 28, 2018, 6:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories