ಸಿಡ್ನಿಯಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ (AUS vs SA Test) ನಡುವೆ ಮೂರನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್ (Pat Cummins) ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಆಸ್ಟ್ರೇಲಿಯಾ ಉತ್ತಮ ಆರಂಭವನ್ನು ಮಾಡಿತು. ಡೇವಿಡ್ ವಾರ್ನರ್ ಬೇಗನೆ ಔಟಾದರು. ಆದರೆ, ಮಾರ್ನಸ್ ಲಬುಶೇನ್ (Marnus Labuschagne) ಮತ್ತು ಉಸ್ಮಾನ್ ಖವಾಜಾ ದಕ್ಷಿಣ ಆಫ್ರಿಕಾದ ಬೌಲರ್ಗಳ ಬೆವರಿಳಿಸಿದರು. ಇಬ್ಬರೂ ಅರ್ಧಶತಕ ಗಳಿಸಿ ಮಿಂಚಿದರು. ಬ್ಯಾಟಿಂಗ್ ವೇಳೆ ಲಬುಶೇನ್ ಮಾಡಿದ ಆ ಒಂದು ಸನ್ನೆ ಎಲ್ಲರಿಗೂ ಅಚ್ಚರಿ ಮೂಡಿಸಿತು. ಅಷ್ಟಕ್ಕೂ ಲಬುಶೇನ್ ಅಂತಹುದು ಏನು ಮಾಡಿದು? ಅದಕ್ಕೆ ಕಾರಣವೇನು? ಇಲ್ಲಿದೆ ನೋಡಿ ವಿವರ.
ಲೈಟರ್ ಕೇಳಿದ ಲಬುಶೇನ್:
ವಾಸ್ತವವಾಗಿ, ಬ್ಯಾಟಿಂಗ್ ಸಮಯದಲ್ಲಿ, ಲಬುಶೇನ್ ಸಿಗರೇಟ್ ಹೊತ್ತಿಸುವ ಲೈಟರ್ ಅನ್ನು ನೀಡುವಂತೆ ಡಗೌಟ್ನಲ್ಲಿ ಕುಳಿತಿದ್ದ ತನ್ನ ಸಹ ಆಟಗಾರರ ಕಡೆಗೆ ತೋರಿಸಿದರು. ಅಷ್ಟೇ ಅಲ್ಲ ಲೈಟರ್ ಕೊಡುವಂತೆಯೂ ಕೇಳಿದ್ದಾರೆ. ಕುತೂಹಲಕಾರಿಯಾಗಿ, ಅವರು ಮೈದಾನದಲ್ಲಿ ಲೈಟರ್ ಅನ್ನು ತರಿಸಿಕೊಂಡರು ಮತ್ತು ಅದರಿಂದ ಬೆಂಕಿಯನ್ನು ಹೊತ್ತಿಸಿ ಎಲ್ಲರನ್ನೂ ಅಚ್ಚರಿಪಡಿಸಿದರು. ಈಗ ಲಬುಶೇನ್ ಲೈಟರ್ ಗಾಗಿ ಕರೆದದ್ದು ಏಕೆ? ಪಂದ್ಯದ ವೇಳೆ ಏನು ಮಾಡಿದರು ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡುತ್ತಿರಬೇಕು. ಹಾಗಾದರೆ ನಿಮಗಾಗಿ ಈ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
ಲೈಟರ್ ತರಿಸಿದ್ದು ಏಕೆ?:
ಲಬುಶೇನ್ ಟೆಸ್ಟ್ನ ಮೊದಲ ದಿನದಲ್ಲಿ ಉತ್ತಮ ಆಟವಾಡಿ ಅರ್ಧಶತಕ ಪೂರೈಸಿದರು . ಇದಾದ ನಂತರ ಕೆಟ್ಟ ಬೆಳಕಿನಿಂದ ಪಂದ್ಯವನ್ನು ನಿಲ್ಲಿಸಬೇಕಾಯಿತು. ಅದಕ್ಕೂ ಮೊದಲು ಲಬುಶೇನ್ ಅವರಿಗೆ ಲೈಟರ್ ಬೇಕಿತ್ತು. ವಿಶ್ವದ ನಂ.1 ಟೆಸ್ಟ್ ಬ್ಯಾಟ್ಸ್ಮನ್ಗೆ ಲೈಟರ್ ಏಕೆ ಬೇಕು ಎಂದು ಎಲ್ಲರಿಗೂ ಆಶ್ಚರ್ಯವಾಯಿತು. ಯಾರಾದರೂ ಏನನ್ನಾದರೂ ಅರ್ಥಮಾಡಿಕೊಳ್ಳುವ ಹೊತ್ತಿಗೆ, ಲೈಟರ್ ಆಸ್ಟ್ರೇಲಿಯಾದ ಡ್ರೆಸ್ಸಿಂಗ್ ರೂಮ್ನಿಂದ ಮೈದಾನವನ್ನು ತಲುಪಿತ್ತು. ವಾಸ್ತವವಾಗಿ, ಲಬುಶೇನ್ ತನ್ನ ಹೆಲ್ಮೆಟ್ನಿಂದ ಅಸಮಾಧಾನಗೊಂಡಿದ್ದರು.
Running repairs for Marnus Labuschagne! 🚬#AUSvSA pic.twitter.com/IdSl0PqicV
— cricket.com.au (@cricketcomau) January 4, 2023
ಇದನ್ನೂ ಓದಿ: IND vs SL T20: ಟೀಂ ಇಂಡಿಯಾಗೆ ಬಿಗ್ ಶಾಕ್, ಸಂಜು ಸ್ಯಾಮ್ಸನ್ ತಂಡದಿಂದ ಔಟ್?
16 ವರ್ಷಗಳ ಬಳಿಕ ಗೆಲುವು ಕಂಡ ಆಸೀಸ್:
ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಆಸ್ಟ್ರೇಲಿಯನ್ ಕ್ರಿಕೆಟ್ ತಂಡವು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ (Melbourne Cricket Ground) ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾವನ್ನು (AUS vs SA) ಇನ್ನಿಂಗ್ಸ್ ಮತ್ತು 182 ರನ್ಗಳಿಂದ ಸೋಲಿಸಿ 3 ಪಂದ್ಯಗಳಲ್ಲಿ ಅಜೇಯ 2-0 ಅಂತರದ ಮುನ್ನಡೆ ಸಾಧಿಸಿದೆ. ಇದರೊಂದಿಗೆ ಆಸ್ಟ್ರೇಲಿಯ ಕೂಡ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಗೆಲುವಿನ 16 ವರ್ಷಗಳ ಬರ ನೀಗಿಸಿದೆ. ಈ ಗೆಲುವಿನೊಂದಿಗೆ ಕಾಂಗರೂ ತಂಡ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ (WTC ) ಫೈನಲ್ಗೆ ತನ್ನ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಇದಕ್ಕೂ ಮುನ್ನ ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ಸತತ 3 ಟೆಸ್ಟ್ ಸರಣಿಗಳನ್ನು ಕಳೆದುಕೊಂಡಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ