IPL 2023: ಮುಂಬೈ-ಪಂಜಾಬ್​ ತಂಡಗಳಿಗೆ ಹೊಸ ಕೋಚ್​ ನೇಮಕ, ಭಾರತೀಯರನ್ನು ಬಿಟ್ಟು ವಿದೇಶಿಗರ ಮೊರೆ ಹೋಗಿದ್ಯಾಕೆ?

IPL 2023: ಮುಂಬೈ ಇಂಡಿಯನ್ಸ್ (MI) ಮತ್ತು ಪಂಜಾಬ್ ಕಿಂಗ್ಸ್ (PBKS) ತಂಡಗಳು ಹೊಸ ಕೋಚ್​ ಅನ್ನು ನೆಮಕ ಮಾಡಿಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಆಗಿ ಮಾರ್ಕ್ ಬೌಚರ್ (Mark Boucher) ಆಯ್ಕೆ ಆಗಿದ್ದಾರೆ.

 ಟ್ರೆವರ್ ಬೇಲಿಸ್-ಮಾರ್ಕ್ ಬೌಚರ್

ಟ್ರೆವರ್ ಬೇಲಿಸ್-ಮಾರ್ಕ್ ಬೌಚರ್

  • Share this:
ಐಪಿಎಲ್ 2023 (IPL 2023) ಆರಂಭವಾಗಲು ಇನ್ನೂ ಅನೇಕ ತಿಂಗಳುಗಳು ಬಾಕಿ ಉಳಿದಿವೆ. ಆದರೆ ಇದಕ್ಕೂ ಮುನ್ನವೇ ಪಾಂಚೈಸಿಗಳು ತಂಡವನ್ನು ಕಟ್ಟಲು ಪ್ರಾರಂಭಿಸಿವೆ. ಇದರ ಭಾಗವಾಗಿ ಇದೀಗ ಮುಂಬೈ ಇಂಡಿಯನ್ಸ್ (MI) ಮತ್ತು ಪಂಜಾಬ್ ಕಿಂಗ್ಸ್ (PBKS) ತಂಡಗಳು ಹೊಸ ಕೋಚ್​ ಅನ್ನು ನೇಮಕ ಮಾಡಿಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಆಗಿ ಮಾರ್ಕ್ ಬೌಚರ್ (Mark Boucher) ಆಯ್ಕೆ ಆಗಿದ್ದಾರೆ. ಟಿ20 ವಿಶ್ವಕಪ್ ಬಳಿಕ ದಕ್ಷಿಣ ಆಫ್ರಿಕಾ ತಂಡದ ಕೋಚ್ ಹುದ್ದೆ ತ್ಯಜಿಸಿ ಮುಂಬೈ ಇಂಡಿಯನ್ಸ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಅದೇ ರೀತಿ ಪಂಜಾಬ್​ ಕಿಂಗ್ಸ್ ತಂಡವೂ ಸಹ ಅನಿಲ್​ ಕುಂಬ್ಳೆ (Anil Kumble) ಬದಲಿಗೆ ಇದೀಗ ಮೊದಲ ಬಾರಿಗೆ ವಿಶ್ವಕಪ್ ಗೆದ್ದ ಇಂಗ್ಲೆಂಡ್ ತಂಡದ ಕೋಚ್ ಆಗಿದ್ದ ಆಸ್ಟ್ರೇಲಿಯಾದ ಟ್ರೆವರ್ ಬೇಲಿಸ್ (Trevor Bayliss) ಅವರನ್ನು ತಂಡದ ಹೊಸ ಮುಖ್ಯ ಕೋಚ್ ಆಗಿ ಫ್ರಾಂಚೈಸಿ ನೇಮಿಸಿದೆ.

ಮುಂಬೈಗೆ  ಮಾರ್ಕ್ ಬೌಚರ್ ಕೋಚ್​:

ಮಾರ್ಕ್ ಬೌಚರ್ ಅವರು ವಿಕೆಟ್ ಕೀಪರ್, ಬ್ಯಾಟ್ಸ್‌ಮನ್ ಆಗಿ ಸುದೀರ್ಘ  ವೃತ್ತಿಜೀವನವನ್ನು ಹೊಂದಿದ್ದಾರೆ. ವಿಕೆಟ್‌ಕೀಪರ್ ಆಗಿ, ಅವರು ಟೆಸ್ಟ್‌ನಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದ ದಾಖಲೆಯನ್ನು ಹೊಂದಿದ್ದಾರೆ. ನಿವೃತ್ತಿಯ ನಂತರ, ಅವರು ದಕ್ಷಿಣ ಆಫ್ರಿಕಾದಲ್ಲಿ ಉನ್ನತ ಮಟ್ಟದ ಕ್ರಿಕೆಟ್ ಫ್ರಾಂಚೈಸಿ 'ಟೈಟಾನ್ಸ್' ನ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರ ಕೋಚ್ ಅಡಿಯಲ್ಲಿ ತಂಡವು ಐದು ದೇಶೀಯ ಪ್ರಶಸ್ತಿಗಳನ್ನು ಗೆದ್ದುಕೊಂಡಿತ್ತು. 2019 ರಲ್ಲಿ, ದಕ್ಷಿಣ ಆಫ್ರಿಕಾ ಮಾರ್ಕ್ ಬೌಚರ್ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಿತು, ಅಲ್ಲಿ ಅವರ ನಾಯಕತ್ವದಲ್ಲಿ ತಂಡವು 11 ಟೆಸ್ಟ್, 12 ODI ಮತ್ತು 23 T20 ಪಂದ್ಯಗಳನ್ನು ಗೆದ್ದಿದೆ.





ಸವಾಲುಗಳಿಗೆ ನಾನು ಸಿದ್ಧ:

ಇನ್ನು, ಮುಂಬೈ ಕೋಚ್​ ಆಗಿ ಆಯ್ಕೆ ಆಗಿರುವುದರ ಕುರಿತು ಮಾತನಾಡಿರುವ ಮಾರ್ಕ್ ಬೌಚರ್, ‘ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿರುವುದು
ಗೌರವ ಮತ್ತು ಸೌಭಾಗ್ಯ. ಮುಂಬೈ ಇಂಡಿಯನ್ಸ್‌ನ ಸಾಧನೆಗಳು ಅದನ್ನು ವಿಶ್ವದಾದ್ಯಂತ ಯಶಸ್ವಿ ಕ್ರಿಕೆಟ್ ಫ್ರಾಂಚೈಸಿಯಾಗಿ ಸ್ಥಾಪಿಸಿವೆ. ಅಲ್ಲದೇ ಮುಂಬರುವ ಪ್ರತಿಯೊಂದು ಸವಾಲಿಗೂ ನಾನು ಸಿದ್ಧ.

ಇದನ್ನೂ ಓದಿ: ICC Ranking: ಐಸಿಸಿ ರ‍್ಯಾಕಿಂಗ್​ನಲ್ಲಿ ಟೀಂ ಇಂಡಿಯಾ ಹವಾ, ಕೊಹ್ಲಿ, ರೋಹಿತ್ ಯಾವ ಸ್ಥಾನದಲ್ಲಿದ್ದಾರೆ?

ಐಪಿಎಲ್ ಹೊರತಾಗಿ, ಮುಂಬೈ ಇಂಡಿಯನ್ಸ್ ಈಗ ಎರಡು ಹೊಸ ಟಿ20 ಲೀಗ್‌ಗಳಿಗೆ ಪ್ರವೇಶಿಸಿದೆ. MI ಕೇಪ್ ಟೌನ್ ಮತ್ತು MI ಎಮಿರೇಟ್ಸ್ ಹೆಸರಿನ ತಂಡಗಳನ್ನು ದಕ್ಷಿಣ ಆಫ್ರಿಕಾದ T20 ಲೀಗ್ ಮತ್ತು UAE ನ T20 ಲೀಗ್‌ಗಾಗಿ ಖರೀದಿಸಿದೆ. ಈ ಎರಡೂ ತಂಡಗಳು ಲೀಗ್‌ನಲ್ಲಿ ಆಡಲಿವೆ. ಅಲ್ಲದೇ MI ತನ್ನ ಮುಖ್ಯ ಕೋಚ್ ಮಹೇಲಾ ಜಯವರ್ಧನೆ ಮತ್ತು IPL ಕಾರ್ಯಾಚರಣೆಗಳ ನಿರ್ದೇಶಕ ಜಹೀರ್ ಖಾನ್ ಅವರನ್ನು ಕ್ರಿಕೆಟ್ ಅಭಿವೃದ್ಧಿಯ ಪಡೆಯ ಮುಖ್ಯಸ್ಥರನ್ನಾಗಿ ನೇಮಿಸಿದೆ.

ಅನಿಲ್ ಕುಂಬ್ಳೆ ಜಾಗಕ್ಕೆ ವಿದೇಶಿ ಕೋಚ್​:

ಇನ್ನು, ಪಂಜಾಬ್​ ಕಿಂಗ್ಸ್ ತಂಡ ಸಹ ತಮ್ಮ ಮುಖ್ಯ ಕೋಚ್​ ಆಗಿದ್ದ ಅನಿಲ್ ಕುಂಬ್ಳೆ ಅವರನ್ನು ಈಗಾಗಲೇ ತಂಡದಿಂದ ಕೈಬಿಟ್ಟಿದೆ. ಇದೀಗ ಅವರ ಜಾಗಕ್ಕೆ ವಿಶ್ವಕಪ್ ಗೆದ್ದ ಇಂಗ್ಲೆಂಡ್ ತಂಡದ ಕೋಚ್ ಆಗಿದ್ದ ಆಸ್ಟ್ರೇಲಿಯಾದ ಟ್ರೆವರ್ ಬೇಲಿಸ್ ಅವರನ್ನು ತಂಡದ ಮುಖ್ಯ ಕೋಚ್​ ಆಗಿ ನೇಮಿಸಿದೆ. ಬೇಲಿಸ್ ತಮ್ಮ ಮಾರ್ಗದರ್ಶನದಲ್ಲಿ ಇಂಗ್ಲೆಂಡ್ ತಂಡವನ್ನು 2019 ರಲ್ಲಿ ವಿಶ್ವಕಪ್​ ಗೆದ್ದಿತ್ತು.  2007 ರಲ್ಲಿ ಶ್ರೀಲಂಕಾ ತಂಡದ ಕೋಚ್​ ಆದಾಗ ಸಹ ಆ ವರ್ಷ ಲಂಕಾ ವಿಶ್ವಕಪ್‌ನ ಫೈನಲ್‌ಗೆ  ತಲುಪಿತ್ತು. ಈಗಾಗಿ ಈ ಬಾರಿ ಪಂಜಾಬ್​ ಲಕ್​ ಸಹ ಬದಲಾಗುತ್ತದೆಯೇ ಎಂದು ಕಾದು ನೋಡಬೇಕಿದೆ.





ಆದರೆ ಐಪಿಎಲ್​ನ ಈ ಎರಡೂ ಪ್ರಮುಖ ತಂಡದಲ್ಲಿ ನೂತನ ಕೋಚ್​ ಆಗಿ ಆಯ್ಕೆ ಆದವರು ವಿದೇಶಿ ಕೋಚ್​ ಗಳಾಗಿದ್ದು, ಈ ಪ್ರಾಂಚೈಸಿಗಳು ಭಾರತೀಯರನ್ನು ಕೋಚ್​ಗಳಾಗಿ ಆಯ್ಕೆ ಮಾಡಬಹುದಿತ್ತು ಎಬ ಮಾತುಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿದೆ.
Published by:shrikrishna bhat
First published: