ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್​​ಶಿಪ್: ಫೈನಲ್​​ನಲ್ಲಿ ಮುಗ್ಗರಿಸಿದ ಪಿ.ವಿ. ಸಿಂಧು

news18
Updated:August 5, 2018, 3:36 PM IST
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್​​ಶಿಪ್: ಫೈನಲ್​​ನಲ್ಲಿ ಮುಗ್ಗರಿಸಿದ ಪಿ.ವಿ. ಸಿಂಧು
news18
Updated: August 5, 2018, 3:36 PM IST
ನ್ಯೂಸ್ 18 ಕನ್ನಡ

ನನ್​​ಜಿಂಗ್​​ (ಆ. 05): ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್​​ಶಿಪ್​​​​ನಲ್ಲಿ ಫೈನಲ್​​ಗೆ ಲಗ್ಗೆ ಇಟ್ಟಿದ್ದ ಭಾರತದ ಶ್ರೇಷ್ಠ ಆಟಗಾರ್ತಿ ಪಿ. ವಿ ಸಿಂಧು ಅವರು ಫೈನಲ್​​ ಕಾದಾಟದಲ್ಲಿ ಮುಗ್ಗರಿಸಿದ್ದು, ಪ್ರಶಸ್ತಿಗೆ ಮುತ್ತಿಕ್ಕುವ ಕನಸು ಭಗ್ನಗೊಂಡಿದೆ.

ಸ್ಪೇನ್​ನ ಆಟಗಾರ್ತಿ ಕರೋಲಿನಾ ಮರಿನ್ ವಿರುದ್ಧ ಇಂದು ನಡೆದ ಫೈನಲ್​ ಕದನದಲ್ಲಿ ಸಿಂಧು ಅವರು 21-19, 21-10 ನೇರ ಸೆಟ್​ಗಳಿಂದ ಸೋಲು ಕಂಡಿದ್ದು, ಬೆಳ್ಳಿ ಪದಕಕ್ಕೆ ತೃಪ್ತಿಗೊಂಡಿದ್ದಾರೆ. ಸೆಮಿಫೈನಲ್​ ಪಂದ್ಯದಲ್ಲಿ ಸಿಂಧು ಅವರು ಜಪಾನ್​ನ ಅಕಾನೆ ಯಮಗುಚಿ ವಿರುದ್ಧ 21-16, 24-22 ನೇರ ಸೆಟ್​ಗಳಿಂದ ಗೆಲ್ಲುವ ಮೂಲಕ ಫೈನಲ್​ಗೆ ಪ್ರವೇಶ ಪಡೆದಿದ್ದರು.

ಇಂದು ಅಂತಿಮ ಹಣಾಹಣಿಯಲ್ಲಿ ನೀರಸ ಆಟ ಪ್ರದರ್ಶಿಸಿದ ಸಿಂಧು ಎರಡನೇ ಗೇಮ್​ನ ಆರಂಭದಲ್ಲೇ ಕರೋಲಿನಾ ಮುನ್ನಡೆ ಸಾಧಿಸಿಕೊಂಡರು. ಮೊದಲ ಗೇಮ್​ನಲ್ಲಿ 13-21 ರಿಂದ ಹಿನ್ನಡೆ ಅನುಭವಿಸಿದ್ದ, ಕರೊಲಿನಾ ಉಳಿದೆರಡು ಗೇಮ್​ನಲ್ಲಿ ಅದ್ಭುತ ಆಟ ಪ್ರದರ್ಶಿಸಿ 21-16 ಹಾಗೂ 21-13 ರಿಂದ ಗೆದ್ದು ಬೀಗಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ.

ಈ ಮೂಲಕ ಸಿಂಧು ಅವರು ಎರಡನೇ ಬಾರಿಗೆ ಬೆಳ್ಳಿ ಪದಕ ಪಡೆದಂತಾಗಿದೆ. ಈ ಹಿಂದೆ ಗ್ಲಾಸ್ಗೋನದಲ್ಲಿ ನಡೆದ ವಿಶ್ವಚಾಂಪಿಯನ್​ ಫೈನಲ್​ನಲ್ಲಿ ಸಿಂಧು ಅವರು ಜಪಾನ್​ನ ನಜೋಮಿ ಓಕುಹಾರಾ ವಿರುದ್ಧ ಸೋಲು ಅನುಭವಿಸಿ ಬೆಳ್ಳಿಗೆ ತೃಪ್ತಿ ಪಟ್ಟಿದ್ದರು.
First published:August 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...