Manon Moutinho: ವಿಶ್ವ ಚಾಂಪಿಯನ್​ ಪಟ್ಟ ಅಲಂಕರಿಸಿದ ಮನೋನ್ ಮೌಟಿನ್ಹೋ

ಕಿಂಬರ್ಲಿ ಪಾಮರ್ ಬಾಕ್ಸೆನ್ ಅಖಾಡಲ್ಲಿ ಮನೋನ್ ಮೌಟಿನ್ಹೋ ಅದ್ಭುತ ಪ್ರದರ್ಶನ ನೀಡುವ ಮೂಲಕ ಚಿನ್ನದ ಪದಕವನ್ನು ಗೆದ್ದು ಬೀಗಿದರು. ವಿಶ್ವದ ನಂಬರ್​ 1 ಆಟಗಾರ್ತಿಯಾಗಿ ಹೊರಹೊಮ್ಮಿದರು.

ವಿಶ್ವ ಚಾಂಪಿಯನ್​ ಮನೋನ್ ಮೌಟಿನ್ಹೋ

ವಿಶ್ವ ಚಾಂಪಿಯನ್​ ಮನೋನ್ ಮೌಟಿನ್ಹೋ

  • Share this:
ಹೆರ್ನಿಂಗ್‌ನಲ್ಲಿ ನಡೆದ ಮುಸ್ತಾಂಗ್ FEI ವಾಲ್ಟಿಂಗ್ ವರ್ಲ್ಡ್ ಚಾಂಪಿಯನ್‌ಶಿಪ್ 2022 ರ ಸೋಮವಾರ ನಡೆದ ಫೈನಲ್‌ ಪಂದ್ಯದಲ್ಲಿ ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಮನೋನ್ ಮೌಟಿನ್ಹೋ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು. ಅದ್ಭುತವಾದ ಪ್ರದರ್ಶನದ ನೀಡಿದ ಮನೋನ್ ಮೌಟಿನ್ಹೋ (Manon Moutinho)  ಕುದುರೆ ಮೇಲೆ ಎಲ್ಲರೂ ಅಚ್ಚರಿಗೊಳ್ಳುವಂತೆ ಸವಾರಿ ಮಾಡಿದರು. ಇನ್ನು, ವೈಯಕ್ತಿಕ ವಿಭಾಗಗಳಲ್ಲಿ ಫ್ರಾನ್ಸ್‌ಗೆ 2 ಚಿನ್ನದ ಪದಕ ಗೆದ್ದಿದೆ.  ಉಳಿದಂತೆ ಜೂಲಿಯಾ ಸೋಫಿಯಾ ವಾಗ್ನೇರ್ (Julia Sophie Wagner)​ ಅವರು ಬೆಳ್ಳಿ ಪದಕ ಮತ್ತು ಶೇನ್ನಾ ಬೆಂಡಿಗ್​ ಸೇನ್​ (Sheena Bendixen) ಕಂಚಿನ ಪದಕವನ್ನು ಗೆದ್ದರು. ಟೋನ್ಯಾ ಹಾರ್ಡಿಂಗ್ ಅವರು 8.701 ಅಂಕಗಳನ್ನು ಗಳಿಸುವ ಮೂಲಕ ಐದನೇ ಸ್ಥಾನವನ್ನು ಗಳಿಸಿದರು.

ವಿಶ್ವ ಚಾಂಪಿಯನ್​ ಪಟ್ಟ ಅಲಂಕರಿಸಿದ ಮನೋನ್ ಮೌಟಿನ್ಹೋ:

ಇನ್ನು, ಕಿಂಬರ್ಲಿ ಪಾಮರ್ ಬಾಕ್ಸೆನ್ ಅಖಾಡಲ್ಲಿ ಮನೋನ್ ಮೌಟಿನ್ಹೋ ಅದ್ಭುತ ಪ್ರದರ್ಶನ ನೀಡುವ ಮೂಲಕ ಚಿನ್ನದ ಪದಕವನ್ನು ಗೆದ್ದು ಬೀಗಿದರು. ವಿಶ್ವದ ನಂಬರ್​ 1 ಆಟಗಾರ್ತಿಯಾದ ಮನೋನ್ ಮೌಟಿನ್ಹೋ ಅವರು 8.963 ಅಂಕಗಳೊಂದಿಗೆ ಮೊದಲ ಸ್ಥಾನ ಪಡೆಯುವ ಮೂಲಕ ವಿಶ್ವದ ನಂಬರ್​ 1 ಆಟಗಾರ್ತಿಯಾಗಿ ಹೊರಹೊಮ್ಮಿದರು.ಉಳಿದಂತೆ ಜೂಲಿಯಾ ಸೋಫಿಯಾ ವಾಗ್ನೇರ್ ಅವರು ನಂತರದಲ್ಲಿ 8.529 ಅಂಕಗಳಿಸುವ ಮೂಲಕ ತಮ್ಮ ದೇಶ್ಕಕೆ ಬೆಳ್ಳಿ ಪದಕವನ್ನು ಗೆಲ್ಲಲು ಯಶಸ್ವಿಯಾದರು. ಕಂಚಿನ ಪದಕಕ್ಕೆ 8.511 ಅಂಕಗಳಿಸಿದೆ ಶೀನಾ ಬೆಂಡಿಕ್ಸೆನ್ ಪಾತ್ರಾರಗುವ ಮೂಲಕ ಈ  ಬಾರಿಯ ಮುಸ್ತಾಂಗ್ FEI ವಾಲ್ಟಿಂಗ್ ವರ್ಲ್ಡ್ ಚಾಂಪಿಯನ್‌ಶಿಪ್ 2022ಕ್ಕೆ ಅಧಿಕೃತವಾಗಿ ತೆರೆಬಿದ್ದಂತಾಗಿದೆ.

ಇದನ್ನೂ ಓದಿ: Asia Cup 2022: ಭಾರತ ಮತ್ತು ಪಾಕಿಸ್ತಾನ ತಂಡಗಳು ಪ್ರಕಟ, ಹೇಗಿರಲಿದೆ ಹೈವೋಲ್ಟೇಜ್ ಕದನ?

ನಾನು ನಿಜವಾಗಿಯೂ ಸಂತೋಷವಾಗಿದ್ದೇನೆ:

ಇನ್ನು, ಚಿನ್ನದ ಪದಕ ಗೆದ್ದ ನಂತರ ವಿಶ್ವದ ನಂಬರ್​ ಒನ್ ಆಟಗಾರ್ತಿ ಮನೋನ್ ಮೌಟಿನ್ಹೋ ಮಾತನಾಡಿ, ‘‘ನನ್ನ ದೇಶದ ಪರವಾಗಿ ಈ ಚಿನ್ನದ ಪದಕ ಗೆದ್ದಿರುವುದಕ್ಕಾಗಿ ನಾನು ನಿಜವಾಗಿಯೂ ಸಂತೋಷವಾಗಿದ್ದೇನೆ, ಫ್ರೆಂಚ್ ಹುಡುಗಿಯರು ಸಹ ಇದನ್ನು ಮಾಡಬಹುದು ಎಂದು ತೋರಿಸುವುದು ಒಳ್ಳೆಯದು‘ ಎಂದು ಹೇಳಿದ್ದಾರೆ. ಅಲ್ಲದೇ ಇದು ಇವರ ಕೊನೆಯ ಸ್ಪರ್ಧೆಯಾಗಿದ್ದು, ಚಿನ್ನದ ಪದಕದ ಮೂಲಕ ವಿದಾಯ ಹೇಳಿದರು.

ವಿಶ್ವ ಚಾಂಪಿಯನ್​ ಪಟ್ಟ ಅಲಂಕರಿಸಿದ ಮನೋನ್ ಮೌಟಿನ್ಹೋ


ಫ್ರಾನ್ಸ್‌ನ ಯಶಸ್ಸಿನ ಓಟ:

ಫ್ರಾನ್ಸ್‌ನ ಯಶಸ್ಸಿನ ಓಟ ಮುಂದುವರೆದಿದ್ದು, ಕ್ವೆಂಟಿನ್ ಜಬೆಟ್ 8.837 ರಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಆದರೆ ಜರ್ಮನಿಯ ಜಾನಿಕ್ ಹೈಲ್ಯಾಂಡ್ ಅದ್ಭುತ ಪ್ರದರ್ಶನ ತೋರುವ ಮೂಲಕ ಪುರುಷರ ವಿಭಾಗದಲ್ಲಿ 8.833 ಅಂಕಗಳಿಸುವ ಮೂಲಕ ಚಿನ್ನದ ಪದಕವನ್ನು ತಮ್ಮಾದಾಗಿಸಿಕೊಂಡರು. ಇನ್ನು, ಈಗಾಗಲೇ ಮೂರು ಪದಕಗಳು ಫ್ರಾನ್ಸಿನ ಕೊರಳಲ್ಲಿ ಭದ್ರವಾಗಿದ್ದು, ಇನ್ನೂ ಎರಡು ಚಿನ್ನದ ಪದಕಗಳು ಗೆಲ್ಲಲು ಬಾಕಿ ಉಳಿದಿವೆ. ಆದರೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ಜರ್ಮನಿ ಮತ್ತು ಫ್ರಾನ್ಸ್ ಮುಖಾಮುಖಿಯಾಗಲಿದೆ.

ಇದನ್ನೂ ಓದಿ: CWG 2022: ಕಾಮನ್​ವೆಲ್ತ್​ಗೆ ಅದ್ಧೂರಿ ತೆರೆ, ಇಲ್ಲಿದೆ ಭಾರತದ ಪದಕಗಳ ಪಟ್ಟಿ

ಕಾಮನ್​ವೆಲ್ತ್ ನಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಭಾರತೀಯರು:

ಕಾಮನ್‌ವೆಲ್ತ್ ಕ್ರೀಡಾಕೂಟ 2022 ರಲ್ಲಿ ಭಾರತದ ಆಟಗಾರರು ಭರ್ಜರಿ ಪ್ರದರ್ಶನ ನೀಡಿದೆ. ಬರೋಬ್ಬರಿ 61 ಪದಕಗಳನ್ನು ಗೆಲ್ಲುವ ಮೂಲಕ ಈ ಬಾರಿ ಕಾಮನ್​ವೆಲ್ತ್ ನಲ್ಲಿ ಭಾರತವು 4ನೇ ಸ್ಥಾನವನ್ನು ಪಡೆದುಕೊಂಡದೆ. ಭಾರತವು ಒಟ್ಟು 22 ಚಿನ್ನ, 16 ಬೆಳ್ಳಿ ಮತ್ತು 23 ಕಂಚಿನ ಪದಕಗಳೊಂದಿಗೆ ಒಟ್ಟು 61 ಪದಕಗಳನ್ನು ಗೆದ್ದಿದೆ. ಇವುಗಳ ಸಂಪೂರ್ಣ ಪಟ್ಟಿ ಈ ಕೆಳಗೆ ನೀಡಲಾಗಿದೆ.
Published by:shrikrishna bhat
First published: