HOME » NEWS » Sports » MANISH PANDEY SHOWS HIS CLASS AS INDIA A CLINCH SERIES DESPITE WILL YOUNG TON

ಪಾಂಡೆ ಶತಕದ ಮಿಂಚು: ಕಿವೀಸ್ ವಿರುದ್ಧ ಸರಣಿ ವಶಪಡಿಸಿಕೊಂಡ ಭಾರತ ಎ

ಮನೀಶ್ ಪಾಂಡೆ ಜೊತೆಯಾದ ವಿಜಯ್ ಶಂಕರ್ ಅದ್ಭುತ ಆಟ ಪ್ರದರ್ಶಿಸಿದರು. ಶತಕದ ಜೊತೆಯಾಟವಾಡಿದ ಇವರಿಬ್ಬರು ತಂಡಕ್ಕೆ ಗೆಲುವನ್ನು ಸನಿಹ ಮಾಡಿದರು. ಕೊನೆ ಕ್ಷಣದಲ್ಲಿ ಎಡವಿದ ವಿಜಯ್ 59 ರನ್​ ಗಳಿಸಿರುವಾಗ ಔಟ್ ಆದರು

Vinay Bhat | news18
Updated:December 9, 2018, 3:30 PM IST
ಪಾಂಡೆ ಶತಕದ ಮಿಂಚು: ಕಿವೀಸ್ ವಿರುದ್ಧ ಸರಣಿ ವಶಪಡಿಸಿಕೊಂಡ ಭಾರತ ಎ
ಮನೀಶ್ ಪಾಂಡೆ
  • News18
  • Last Updated: December 9, 2018, 3:30 PM IST
  • Share this:
ನ್ಯೂಜಿಲೆಂಡ್ ಎ ವಿರುದ್ಧ ನಡೆದ ಎರಡನೇ ಅನಧಿಕೃತ ಏಕದಿನ ಪಂದ್ಯದಲ್ಲಿ ಭಾರತ ಎ ತಂಡ 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ನಾಯಕ ಮನೀಶ್ ಪಾಂಡೆ ಅವರ ಶತಕದ ನೆರವಿನಿಂದ ಭಾರತೀಯರು 3 ಪಂದ್ಯಗಳ ಏಕದಿನ ಸರಣಿಯಲ್ಲಿ ಎರಡು ಪಂದ್ಯ ಗೆದ್ದು ಸರಣಿ ಕೈವಶ ಮಾಡಿಕೊಂಡಿದೆ.

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ತಂಡ ಆರಂಭದಲ್ಲೇ ಮೊದಲ ವಿಕೆಟ್ ಕಳೆದುಕೊಂಡಿತಾದರು 2ನೇ ವಿಕೆಟ್​ಗೆ ಜೊತೆಯಾದ ಜಾರ್ಜ್​ ವರ್ಕರ್ ಹಾಗೂ ವಿಲ್ ಯಂಗ್ ಭರ್ಜರಿ ಜೊತೆಯಾಟ ಆಡಿದರು. ವರ್ಕರ್ 99 ಹಾಗೂ ಯಂಗ್ 102 ರನ್​​ಗಳಿಸಿ ಒಟ್ಟು 190 ರನ್​​ಗಳ ಜೊತೆಯಾಟದೊಂದಿಗೆ ದೊಡ್ಡ ಮೊತ್ತದ ಸೂಚನೆ ನೋಡಿತು. ಆದರೆ ಇವರಿಬ್ಬರು ಔಟ್ ಆದದ್ದೆ ತಡ ಕಿವೀಸ್ ದಿಢೀರ್ ಕುಸಿತ ಕಂಡಿತು. ಕೊನೆಯಲ್ಲಿ ಡ್ಯಾರಿ ಮಿಚೆಲ್(45) ಬಿರುಸಿನ ಬ್ಯಾಟಿಂಗ್ ನಡೆಸಿದ ಪರಿಣಾಮ ನಿಗದಿತ 50 ಓವರ್​ನಲ್ಲಿ ನ್ಯೂಜಿಲೆಂಡ್ ಎ ತಂಡ 9 ವಿಕೆಟ್ ನಷ್ಟಕ್ಕೆ 299 ರನ್ ಕಲೆಹಾಕಿತು. ಭಾರತ ಎ ಪರ ಖಲೀಲ್ ಅಹ್ಮದ್ ಹಾಗೂ ನವ್​ದೀಪ್ ಸೈನಿ ತಲಾ 2 ವಿಕೆಟ್ ಕಿತ್ತು ಮಿಂಚಿದರೆ, ಸಿದ್ಧಾರ್ಥ್​ ಕೌಲ್, ಅಕ್ಷರ್ ಪಟೇಲ್ ಹಾಗೂ ಕೃಷ್ಣಪ್ಪ ಗೌತಮ್ 1 ವಿಕೆಟ್ ಪಡೆದರು.

ಇದನ್ನೂ ಓದಿವಿಶ್ವಕಪ್ 2019: ಆಸ್ಟ್ರೇಲಿಯಾದಲ್ಲಿ ನಿರ್ಧಾರವಾಗಲಿದೆ ಭಾರತದ ಈ 3 ಆಟಗಾರರ ಭವಿಷ್ಯ

300 ರನ್​ಗಳ ಗುರಿ ಬೆನ್ನತ್ತಿದ ಭಾರತ ಮಯಾಂಕ್ ಅಗರ್ವಾಲ್(25) ಹಾಗೂ ಶುಬ್ಮನ್ ಗಿಲ್(25) ವಿಕೆಟ್ ಬೇಗನೆ ಕಳೆದುಕೊಂಡಿತು. ಆದರೆ 3ನೇ ವಿಕೆಟ್​ಗೆ ಒಂದಾದ ಶ್ರೇಯಸ್ ಅಯ್ಯರ್ ಹಾಗೂ ಮಯಾಂಕ್ ಅಗರ್ವಾಲ್ ಭರ್ಜರಿ ಜೊತೆಯಾಟ ಆಡಿದರು. ಈ ಜೋಡಿ ತಂಡಕ್ಕೆ 90 ರನ್​ಗಳ ಕಾಣಿಕೆ ನೀಡಿತು. ಅಂತೆಯೆ ಅಯ್ಯರ್ 59 ರನ್ ಗಳಿಸಿ ನಿರ್ಗಮಿಸಿದರು. ಬಳಿಕ ಪಾಂಡೆ ಜೊತೆಯಾದ ವಿಜಯ್ ಶಂಕರ್ ಅದ್ಭುತ ಆಟ ಪ್ರದರ್ಶಿಸಿದರು. ಶತಕದ ಜೊತೆಯಾಟವಾಡಿದ ಇವರಿಬ್ಬರು ತಂಡಕ್ಕೆ ಗೆಲುವನ್ನು ಸನಿಹ ಮಾಡಿದರು.

ಕೊನೆ ಕ್ಷಣದಲ್ಲಿ ಎಡವಿದ ವಿಜಯ್ 59 ರನ್​ ಗಳಿಸಿರುವಾಗ ಔಟ್ ಆದರು. ಅಂತಿಮವಾಗಿ ನಾಯಕ ಪಾಂಡೆ ಬ್ಯಾಟ್ ಬೀಸಿ ತಂಡಕ್ಕೆ ಗೆಲುವು ತಂದಿಟ್ಟರು. ಇನ್ನು 1 ಓವರ್ ಬಾಕಿ ಇರುವಂತೆಯೆ 5 ವಿಕೆಟ್ ಕಳೆದುಕೊಂಡು 300 ರನ್ ಗಳಿಸುವ ಮೂಲಕ 5 ವಿಕೆಟ್​ಗಳ ಜಯದೊಂದಿಗೆ ಭಾರತ ಎ ತಂಡ ಕಿವೀಸ್ ನಾಡಲ್ಲಿ ಏಕದಿನ ಸರಣಿಯನ್ನು ವಶಪಡಿಸಿಕೊಂಡಿದೆ. ಭಾರತ ಪರ ಅದ್ಭುತ ಆಟ ಪ್ರದರ್ಶಿಸಿದ ಮನೀಶ್ ಪಂಡೆ 109 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸ್​ನೊಂದಿಗೆ 111 ರನ್ ಸಿಡಿಸಿ ಅಜೇಯರಾಗಿ ಉಳಿದರು.

First published: December 9, 2018, 3:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading