ಟಿ-20 ಕ್ರಿಕೆಟ್​​ನಲ್ಲಿ ಹೊಸ ದಾಖಲೆ ಬರೆದ ಮಂದಾನ: ಆದರೂ ಸೋಲುಂಡ ವನಿತೆಯರು

ಕೇವಲ 34 ಎಸೆತಗಳಲ್ಲಿ 7 ಬೌಂಡರಿ ಹಾಗೂ 3 ಸಿಕ್ಸ್​​ನೊಂದಿಗೆ 58 ರನ್ ಸಿಡಿಸಿದ ಮಂದಾನ, ಮಹಿಳೆಯರ ಟಿ-20 ಕ್ರಿಕೆಟ್​ನಲ್ಲಿ ಭಾರತದ ಪರ ಅತಿ ವೇಗವಾಗಿ ಅರ್ಧಶತಕ ಸಿಡಿಸಿದ ದಾಖಲೆ ಮಾಡಿದ್ದಾರೆ.

Vinay Bhat | news18
Updated:February 6, 2019, 7:55 PM IST
ಟಿ-20 ಕ್ರಿಕೆಟ್​​ನಲ್ಲಿ ಹೊಸ ದಾಖಲೆ ಬರೆದ ಮಂದಾನ: ಆದರೂ ಸೋಲುಂಡ ವನಿತೆಯರು
ಸ್ಮೃತಿ ಮಂದಾನ
Vinay Bhat | news18
Updated: February 6, 2019, 7:55 PM IST
ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ-20 ಪಂದ್ಯಲ್ಲಿ ಸೋಲುಂಡರೆ, ಇತ್ತ ಭಾರತದ ವನಿತೆಯರು ಕೂಡ ನ್ಯೂಜಿಲೆಂಡ್ ಮಹಿಳೆಯರ ವಿರುದ್ಧ 23 ರನ್​​ ಗಳಿಂದ ಸೋತಿದ್ದಾರೆ. ಈ ಮಧ್ಯೆ ಸ್ಪೋಟಕ ಬ್ಯಾಟ್ಸ್​ಮನ್​ ಸ್ಮೃತಿ ಮಂದಾನ ನೂತನ ದಾಖಲೆಯೊಂದನ್ನು ಬರೆದಿದ್ದಾರೆ.

ಕೇವಲ 34 ಎಸೆತಗಳಲ್ಲಿ 7 ಬೌಂಡರಿ ಹಾಗೂ 3 ಸಿಕ್ಸ್​​ನೊಂದಿಗೆ 58 ರನ್ ಸಿಡಿಸಿದ ಮಂದಾನ, ಮಹಿಳೆಯರ ಟಿ-20 ಕ್ರಿಕೆಟ್​ನಲ್ಲಿ ಭಾರತದ ಪರ ಅತಿ ವೇಗವಾಗಿ ಅರ್ಧಶತಕ ಸಿಡಿಸಿದ ದಾಖಲೆ ಮಾಡಿದ್ದಾರೆ. ಆದರು ಭಾರತದ ವನಿತೆಯರು ಗೆಲುವು ಕಾಣುವಲ್ಲಿ ವಿಫಲರಾದರು.

ಮೊದಲ ಬ್ಯಾಟ್ ಮಾಡಿದ ನ್ಯೂಜಿಲೆಂಡ್ ವನಿತೆಯರು ನಿಗದಿತ 20 ಓವರ್​ಗೆ 159 ರನ್ ಕಲೆಹಾಕಿತು. ಸೋಫಿಯ ದೆವೈನ್ 62 ಹಾಗೂ ಕೊನೆಯಲ್ಲಿ ಆರ್ಭಟಿಸಿದ ಕೆಟೆ ಮಾರ್ಟಿನ್​ಅಜೇಯ 27 ರನ್​ಗಳ ನೆವಿನಿಂದ ತಂಡದ ಮೊತ್ತ 150ರ ಗಡಿ ದಾಟಲು ನೆರವಾಯಿತು.

ಇದನ್ನೂ ಓದಿ: 8 ಬ್ಯಾಟ್ಸ್​ಮನ್​​ಗಳಿದ್ದರು ಭಾರತದ ಮೊತ್ತ 150ರ ಗಡಿ ದಾಟಲಿಲ್ಲ: ಇಲ್ಲಿದೆ ಪಂದ್ಯದ ಹೈಲೈಟ್ಸ್​

160 ರನ್​​ಗಳ ಗುರಿ ಬೆನ್ನಟ್ಟಿದ ಭಾರತದ ವನಿತೆಯರು ಮೊದಲ ಓವರ್​ನಲ್ಲೇ ಪ್ರಿಯ ಪುನಿಯಾ(4) ವಿಕೆಟ್ ಕಳೆದುಕೊಂಡಿತು. ಆದರೆ, 2ನೇ ವಿಕೆಟ್​ಗೆ ಜೊತೆಯಾದ ಸ್ಮೃತಿ ಮಂದಾನ ಹಾಗೂ ರೋಡ್ರಿಗಸ್ ಭರ್ಜರಿ ಜೊತೆಯಾಟವಾಡಿದರು. 98 ರನ್​ಗಳ ಕಾಣಿಕೆ ನೀಡಿದ ಇವರಿಬ್ಬರು ತಂಡದ ಗೆಲುವನ್ನು ಸನಿಹ ಮಾಡಿ ನಿರ್ಗಮಿಸಿದರು. ಮಂದಾನ 58 ಹಾಗೂ ರೋಡ್ರಿಗಸ್ 39 ರನ್​ಗೆ ಔಟ್ ಆದರು.

ಇದನ್ನೂ ಓದಿ: ಕುತೂಹಲದತ್ತ ರಣಜಿ ಫೈನಲ್: ಸೌರಾಷ್ಟ್ರ 4ನೇ ದಿನದಾಟದಂತ್ಯಕ್ಕೆ 58/5, ಗೆಲುವಿಗೆ ಬೇಕು 148 ರನ್​​​

ಆದರೆ, ಬಳಿಕ ದಿಢೀರ್ ಕುಸಿತ ಕಂಡ ಭಾರತ ಕೇವಲ 34 ರನ್​ಗಳಿಗೆ ಆಲೌಟ್ ಆಯಿತು. 19.1 ಓವರ್​ನಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಭಾರತದ ವನಿತೆಯರು 136 ರನ್​ಗೆ ಸೋಲೊಪ್ಪೊಕೊಂಡರು. ಈ ಮೂಲಕ ಕಿವೀಸ್ 23 ರನ್​ಗಳ ಜಯ ಸಾಧಿಸಿದರು. ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಭಾರತಕ್ಕೆ 0-1ರ ಹಿನ್ನಡೆಯಾಗಿದೆ.
Loading...

First published:February 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...