ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿಗೆ (MS Dhoni) ಸುಪ್ರೀಂ ಕೋರ್ಟ್ (Supreme Court) ನೋಟಿಸ್ ನೀಡಿದೆ. ಆಮ್ರಪಾಲಿ ಗ್ರೂಪ್‌ನ (Amrapali Group) ವಿವಾದವು ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿತು. ಈ ವೇಳೆ ಧೋನಿಗೆ ಸಂಬಂಧಿಸಿದ ಪ್ರಕರಣವೂ ಬೆಳಕಿಗೆ ಬಂದಿದೆ. ಇ ಸಂಬಂಧ ಧೋನಿಗೆ ಈ ನೋಟಿಸ್ ನೀಡಲಾಗಿದೆ. ಇನ್ನು, ಆಮ್ರಪಾಲಿ ಗ್ರೂಪ್ ತನ್ನ ಶುಲ್ಕವನ್ನು ಪಾವತಿಸಿಲ್ಲ ಎಂದು ಧೋನಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದರಿಂದಾಗಿ ಆಮ್ರಪಾಲಿ ಗ್ರೂಪ್ ಪ್ರಕರಣದಲ್ಲಿ ಆರಂಭಿಸಲಾಗಿದ್ದ ಮಧ್ಯಸ್ಥಿಕೆ ಪ್ರಕ್ರಿಯೆಗೂ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಧೋನಿ ಒಮ್ಮೆ ಆಮ್ರಪಾಲಿ ಗ್ರೂಪ್‌ನ ಬ್ರಾಂಡ್ ಅಂಬಾಸಿಡರ್ ಆಗಿದ್ದರು.
ಮಹೇಂದ್ರ ಸಿಂಗ್ ಧೋನಿಗೆ ನೋಟಿಸ್:
ಹೌದು, ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅವರಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಧೋನಿಗೆ ಇದೀಗ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದೆ. ಆಮ್ರಪಾಲಿ ಗ್ರೂಪ್ ನ ಬ್ರಾಂಡ್ ಅಂಬಾಸಿಟರ್ ಆಗಿದ್ದ ಧೋನಿ ನಂತರ 2016ರಲ್ಲಿ ಆಮ್ರಪಾಲಿ ಗ್ರೂಪ್‌ನಿಂದ ಹೊರಬಂದರು. ಅಲ್ಲದೇ ಈ ಗ್ರೂಪ್ ನೀಡಬೇಕಿದ್ದ, ಬರೋಬ್ಬರಿ 150 ಕೋಟಿ ರೂ.ಗಳನ್ನು ಕೊಡಿಸುವಂತೆ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆಮ್ರಪಾಲಿ ಗ್ರೂಪ್ ಮತ್ತು ಧೋನಿಗೆ ಸಂಬಂಧಿಸಿದ ಪ್ರಕರಣ ಈ ಹಿಂದೆ ದೆಹಲಿ ಹೈಕೋರ್ಟ್‌ನಲ್ಲಿತ್ತು.
ಇನ್ನು, ಆಮ್ರಪಾಲಿ ಗ್ರೂಪ್‌ನಿಂದ ಮನೆಗಳನ್ನು ಖರೀದಿಸಿದ ಧೋನಿ ಸೇರಿದಂತೆ 1800 ಜನರಿಗೆ ಸುಪ್ರೀಂ ಕೋರ್ಟ್ ಇದೀಗ ನೋಟಿಸ್ ನೀಡಿದೆ. ನೋಟಿಸ್ ಪಡೆದವರೆಲ್ಲರೂ 15 ದಿನದೊಳಗೆ ಹಣ ಜಮಾ ಮಾಡುವಂತೆ ಸೂಚಿಸಲಾಗಿದೆ. ಇದರ ನಡುವೆ ಏನಾದರೂ ಆಮ್ರಪಾಲಿ ಗ್ರೂಪ್ ನವರು ಧೋನಿ ಅವರಿಗೆ ಹಣ ನೀಡಿದ್ದಲ್ಲಿ ಗ್ರಾಹರಕರಾದ ನಮಗೆ ಹಣ ನೀಡುವುದು ತಡ ಮಾಡುತ್ತದೆ ಎಂದು ನೊಂದ ಗ್ರಾಹರು ಸುಪ್ರೀಂ ಮೋರೆ ಹೋಗಿದ್ದಾರೆ.
ಇದನ್ನೂ ಓದಿ: MS Dhoni: ಕಡಕ್‌ನಾತ್ ಕೋಳಿ ಮಾರಾಟಕ್ಕೆ ರೆಡಿಯಾದ ಧೋನಿ, ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!
ಧೋನಿ ಮತ್ತು ಆಮ್ರಪಾಲಿ ಗ್ರೂಪ್‌ಗೆ ಸುಪ್ರೀಂ ನೋಟಿಸ್:
ಈ ಎಲ್ಲಾ ಕಾರಣದಿಂದದಾಗಿ ಸುಪ್ರೀಂ ಕೋರ್ಟ್ ಎಂಎಸ್ ಧೋನಿ ಮತ್ತು ಆಮ್ರಪಾಲಿ ಗ್ರೂಪ್‌ಗೆ ನೋಟಿಸ್ ಕಳುಹಿಸಿದ್ದು, ಮಧ್ಯಸ್ಥಿಕೆಗಾಗಿ ರಚಿಸಲಾಗಿರುವ ಸಮಿತಿಯ ಕಲಾಪಕ್ಕೆ ಸುಪ್ರೀಂ ಕೋರ್ಟ್ ಯಾವುದೇ ರೀತಿಯ ನಿಷೇಧ ಹೇರಿಲ್ಲ. ಇದರ ಜೊತೆ ಆಮ್ರಪಾಲಿ ಗ್ರೂಪ್ ಗ್ರಾಹಕರಿಂದ ಹಣ ಪಡೆದು ಫ್ಲ್ಯಾಟ್ ನೀಡಿಲ್ಲ ಎಂಬ ಆರೋಪ ಕೇಳಿ ಬಂದಿದ್ದು, ವಿಷಯ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ಅವಧಿಯಲ್ಲಿ ಎಂಎಸ್ ಧೋನಿ ಆಮ್ರಪಾಲಿ ಗ್ರೂಪ್‌ನ ಬ್ರಾಂಡ್ ಅಂಬಾಸಿಡರ್ ಆಗಿದ್ದರು. ಧೋನಿ ಆಮ್ರಪಾಲಿ ಗ್ರೂಪ್‌ಗಾಗಿ ಜಾಹೀರಾತುಗಳನ್ನು ಸಹ ಚಿತ್ರೀಕರಿಸಿದ್ದಾರೆ.
2016 ರಲ್ಲಿ, ಆಮ್ರಪಾಲಿ ಗ್ರೂಪ್‌ನ ಕೆಲವು ಯೋಜನೆಗಳಿಗೆ ಸಂಬಂಧಿಸಿದಂತೆ ಪ್ರತಿಭಟನೆಗಳು ನಡೆದಾಗ, ಸಾಮಾಜಿಕ ಮಾಧ್ಯಮದಲ್ಲಿ ಧೋನಿ ವಿರುದ್ಧ ಪ್ರಚಾರವನ್ನು ಪ್ರಾರಂಭಿಸಲಾಯಿತು. ಈ ವಿವಾದದ ನಂತರ, ಧೋನಿ ಆಮ್ರಪಾಲಿ ಗ್ರೂಪ್‌ನ ಬ್ರಾಂಡ್ ಅಂಬಾಸಿಡರ್ ಹುದ್ದೆಯಿಂದ ತಮ್ಮ ಹೆಸರನ್ನು ಹಿಂತೆಗೆದುಕೊಂಡರು. ವಿಷಯ ನ್ಯಾಯಾಲಯದ ಮೆಟ್ಟಿಲೇರಿದಾಗ ಧೋನಿ ಅರ್ಜಿ ಸಲ್ಲಿಸಿ ಆಮ್ರಪಾಲಿ ಗ್ರೂಪ್ ಬ್ರಾಂಡ್ ಅಂಬಾಸಿಡರ್ ಆಗಿ ತನಗೆ 150 ಕೋಟಿ ರೂಪಾಯಿ ನೀಡಿಲ್ಲ ಎಂದು ದೂರಿದ್ದರು.
ಇದನ್ನೂ ಓದಿ: Dhoni: ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಂನಲ್ಲಿ ಕಾಣಿಸಿಕೊಂಡ ಮಹಿ, ಕುತೂಹಲ ಹೆಚ್ಚಿಸಿದ ಧೋನಿ ನಡೆ
ಅನ್ನದಾತರ ಬೆನ್ನಿಗೆ ನಿಂತ ಧೋನಿ:
ಆಧುನಿಕ ಶೈಲಿಯಲ್ಲಿ ರೈತರಿಗೆ ಸಹಾಯ ಮಾಡಲು ಮುಂದಾಗಿರುವ ಮಹೇಂದ್ರ ಸಿಂಗ್ ಧೋನಿ ಮಹತ್ವದ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಮಾಡಿದ್ದಾರೆ. ಇಂಡಿಯನ್ ಗರುಡ ಡ್ರೋನ್ ಕಂಪನಿಯಲ್ಲಿ ಶೇರ್ ಖರೀದಿಸಿರುವ ಮಾಹಿ, ರೈತರಿಗೆ ನೆರವಾಗಲು ನಿರ್ಧಾರ ಕೈಗೊಂಡಿದ್ದಾರೆ. ಈ ಶೇರ್ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿದ್ದಾರೆ. ಗರುಡ ಕಂಪನಿಯ ಡ್ರೋನ್ಗಳು ಅನ್ನದಾತರಿಗೆ ಸಹಕಾರಿಯಗಿದೆ. ಇದರ ಸಹಾಯದಿಂದ ಕೀಟ ನಾಶಕ, ಕಳೆ ನಾಶಕ, ನೀರು, ರಸಗೊಬ್ಬರವನ್ನು ಸುಲಭವಾಗಿ ಬೆಳೆಗಳಿಗೆ ಸಿಂಪಡಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ