23 ಎಸೆತ..ಯಾವುದೇ ರನ್ನಿಲ್ಲ..ಸರ್ವ ವಿಕೆಟ್ ಪತನ. ಇದು ಯಾವುದೋ ಗಲ್ಲಿ ಕ್ರಿಕೆಟ್ನ ಕಾಮೆಂಟರಿಯಲ್ಲ. ಬದಲಾಗಿ ಪ್ರಸ್ತುತ ನಡೆಯುತ್ತರುವ ರಣಜಿ ಟೂರ್ನಿಯ ಭಾರತದ ತಂಡವೊಂದರ ಸ್ಕೋರ್ ಕಾರ್ಡ್. ಎಲೈಟ್ ಎ ಗ್ರೂಪಿನ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಮಧ್ಯಪ್ರದೇಶ ತಂಡ ಆಂಧ್ರಪದೇಶವನ್ನು ಎದುರಿಸಿತ್ತು.
ಮೊದಲ ಇನಿಂಗ್ಸ್ನಲ್ಲಿ ಆಂಧ್ರ ಬ್ಯಾಟ್ಸ್ಮನ್ಗಳನ್ನು 132 ರನ್ಗೆ ಕಟ್ಟಿಹಾಕಲು ಮಧ್ಯಪ್ರದೇಶ ತಂಡ ಬೌಲರ್ಗಳು ಯಶಸ್ವಿಯಾಗಿದ್ದರು. ಆದರೆ ನಂತರ ಬ್ಯಾಟಿಂಗ್ ಇಳಿದ ಮಧ್ಯಪ್ರದೇಶದ ಸ್ಥಿತಿ ಕೂಡ ಭಿನ್ನವಾಗಿರಲಿಲ್ಲ. ಕೇವಲ 91 ರನ್ಗಳಿಸಿ ಮೊದಲ ಇನಿಂಗ್ಸ್ ಕೊನೆಗೊಳಿಸಿತು. ಮೊದಲ ಇನಿಂಗ್ಸ್ನ ತಪ್ಪನ್ನು ತಿದ್ದಿಕೊಂಡ ಆಂಧ್ರ ಪ್ರದೇಶದ ಬ್ಯಾಟಿಂಗ್ ಪಡೆ ದ್ವಿತೀಯ ಇನಿಂಗ್ಸ್ನಲ್ಲಿ ಭರ್ಜರಿ 301 ಬಾರಿಸಿತ್ತು.
ಮೊದಲ ಇನಿಂಗ್ಸ್ ಹಿನ್ನೆಡೆಯೊಂದಿಗೆ 342 ರನ್ಗಳ ಬೃಹತ್ ಗುರಿ ಪಡೆದ ಮಧ್ಯಪ್ರದೇಶ ತಂಡವು 19 ರನ್ಗಳಿಸುವಷ್ಟರಲ್ಲೇ ತನ್ನ ಪ್ರಮುಖ 3 ವಿಕೆಟ್ಗಳನ್ನು ಕಳೆದುಕೊಂಡಿತು. ಆದರೆ ನಾಲ್ಕನೇ ವಿಕೆಟ್ಗೆ ಚೇತರಿಕೆಯ ಭರವಸೆ ನೀಡಿದ್ದ ಬ್ಯಾಟ್ಸ್ಮನ್ಸ್ಗಳು 35 ರನ್ಗಳ ತನಕ 3 ವಿಕೆಟ್ನಲ್ಲೇ ಕ್ರೀಸ್ ಕಚ್ಚಿ ನಿಂತಿದ್ದರು.
ಇದನ್ನೂ ಓದಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇರ ನೇಮಕಾತಿ: ವಾರ್ಷಿಕ ವೇತನ 52 ಲಕ್ಷ ರೂ.
ಆದರೆ ನಂತರ ನಡೆದ ನಾಟಕೀಯ ಬೆಳವಣಿಗೆಯಲ್ಲಿ 23 ಎಸೆತಗಳನ್ನು ಎದುರಿಸಿದ ಮಧ್ಯಪ್ರದೇಶದ ತಂಡ ಆಟಗಾರರು ಯಾವುದೇ ರನ್ ಗಳಿಸದೇ ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಕಡೆ ಹೆಜ್ಜೆಹಾಕಿ ಅಚ್ಚರಿ ಮೂಡಿಸಿದ್ದರು.
ಇದನ್ನೂ ಓದಿ: VIDEO: ವಯಸ್ಕರಿಗೆ ಮಾತ್ರ: ಬೆಚ್ಚಿಬೀಳಿಸುತ್ತೆ ಅಪಘಾತದ ಭೀಕರ ದೃಶ್ಯ..!
ಆಂಧ್ರ ಪ್ರದೇಶ ಪರ ಕೆ.ವಿ ಶಶಿಕಾಂತ್ ಮಾರಕ ದಾಳಿ ನಡೆಸಿ 6 ವಿಕೆಟ್ ಕಬಳಿಸಿದರೆ, ವಿಜಯ್ ಕುಮಾರ್ 3 ವಿಕೆಟ್ ಉರುಳಿಸಿದರು. ಒಬ್ಬರು ಗಾಯಾಳು ಆಗಿದ್ದರಿಂದ ಬ್ಯಾಟಿಂಗ್ಗೆ ಇಳಿದಿರಲಿಲ್ಲ. ರಣಜಿ ಕ್ರಿಕೆಟ್ನಲ್ಲಿ ಅಪರೂಪ ಎನ್ನುವಂತಿದ್ದ ಈ ಪಂದ್ಯವನ್ನು ಆಂಧ್ರ ತಂಡ 307 ರನ್ಗಳ ಅಂತರದಿಂದ ಗೆದ್ದುಕೊಂಡರು.
23 balls
0 runs
6 wickets
From 35 for 3, Madhya Pradesh have collapsed to 35 all out in the fourth innings against Andhra 😲https://t.co/YU5q4lSbkj#RanjiTrophy pic.twitter.com/isTktJC5Op
— ESPNcricinfo (@ESPNcricinfo) January 9, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ