M Chinnaswamy Stadiumನಲ್ಲಿ ಡೇ & ನೈಟ್​ ಟೆಸ್ಟ್​ ಮ್ಯಾಚ್​.. 2 ವರ್ಷದ ಬಳಿಕ ಬೆಂಗಳೂರಿನಲ್ಲಿ ಟೀಂ ಇಂಡಿಯಾ ಪಂದ್ಯ!

ಕಳೆದ ಎರಡು ವರ್ಷಗಳ ಬಳಿಕ ನಡೆಯಲಿರುವ ಮೊದಲ ಲೈವ್‌ ಪಂದ್ಯವನ್ನು ಸ್ಟೇಡಿಯಂನಲ್ಲಿ ನೋಡಲು ಹಲವು ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಹಿನ್ನೆಲೆ ಭಾರತ ಮತ್ತು ಶ್ರೀಲಂಕಾ ನಡುವಿನ ಹಗಲು/ರಾತ್ರಿ (Day and Night) ಟೆಸ್ಟ್ ಪಂದ್ಯದ ಪೂರ್ವಭಾವಿಯಾಗಿ ಬೆಂಗಳೂರಿನಲ್ಲಿ ಒಂದು ಸ್ಪಷ್ಟವಾದ ಉನ್ಮಾದವಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಭಾರತ(India)ದಲ್ಲಿ ಕ್ರಿಕೆಟ್‌ ಪ್ರಿಯ(Cricket Lovers)ರಿಗೇನೂ ಕಡಿಮೆ ಇಲ್ಲ. ಆದರೆ, ಕೊರೋನಾ (Corona) ಸಾಂಕ್ರಾಮಿಕದ ಕಾರಣ ದೇಶದಲ್ಲಿ ಕಳೆದ 2 ವರ್ಷದಿಂದ ಹೆಚ್ಚು ಪಂದ್ಯ(Match)ಗಳೇ ನಡೆದಿಲ್ಲ. ಅದರಲ್ಲೂ ಬಹುತೇಕ ಪಂದ್ಯಗಳು ಜನ ಜಂಗುಳಿಯಿಲ್ಲದೆ ನಡೆದಿದೆ. ಆದರೆ, ಈಗ ಕೋವಿಡ್ - 19 ನ ಮೂರನೇ ಅಲೆ ಕಡಿಮೆಯಾಗಿದ್ದು, ಸ್ಟೇಡಿಯಂ(Stadium)ಗಳಲ್ಲಿ ಕ್ರಿಕೆಟ್‌ ಅಭಿಮಾನಿಗಳನ್ನು ನೋಡಬಹುದಾಗಿದೆ. ಈ ಮಧ್ಯೆ, ಭಾರತ - ಶ್ರೀಲಂಕಾ (India vs Sri lanka) ನಡುವಿನ ಟೆಸ್ಟ್‌ ಸರಣಿ ಆರಂಭವಾಗಿದ್ದು, ಮಾರ್ಚ್‌ 12ರಿಂದ ರಾಜ್ಯ ರಾಜಧಾನಿ ಬೆಂಗಳೂರಿ(Bengaluru)ನಲ್ಲಿ ಎರಡನೇ ಟೆಸ್ಟ್ ಪಂದ್ಯ(2nd Test Match) ನಡೆಯಲಿದೆ. ಕಳೆದ ಎರಡು ವರ್ಷಗಳ ಬಳಿಕ ನಡೆಯಲಿರುವ ಮೊದಲ ಲೈವ್‌ ಪಂದ್ಯವನ್ನು ಸ್ಟೇಡಿಯಂನಲ್ಲಿ ನೋಡಲು ಹಲವು ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಹಿನ್ನೆಲೆ ಭಾರತ ಮತ್ತು ಶ್ರೀಲಂಕಾ ನಡುವಿನ ಹಗಲು/ರಾತ್ರಿ(Day and Night) ಟೆಸ್ಟ್ ಪಂದ್ಯದ ಪೂರ್ವಭಾವಿಯಾಗಿ ಬೆಂಗಳೂರಿನಲ್ಲಿ ಒಂದು ಸ್ಪಷ್ಟವಾದ ಉನ್ಮಾದವಿದೆ.

2 ವರ್ಷದ ಬಳಿಕ ನಡೆಯುತ್ತಿರುವ ಮೊದಲ ಪಂದ್ಯ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ವಿರಾಟ್ ಕೊಹ್ಲಿ ಸುದೀರ್ಘ ಸಮಯದ ನಂತರ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆ್ಯಕ್ಷನ್‌ಗೆ ಸಾಕ್ಷಿಯಾಗುತ್ತಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ನಿಜವಾಗಿಯೂ ಹರ್ಷೋದ್ಘಾರ ಮುಗಿಲು ಮುಟ್ಟಿದೆ.

ಮುಗಿಬಿದ್ದು ಟಿಕೆಟ್ ಖರೀದಿಸಿದ ಕ್ರಿಕೆಟ್ ಪ್ರೇಮಿಗಳು!

ಅನೇಕ ಕ್ರಿಕೆಟ್ ಅಭಿಮಾನಿಗಳು ಇತ್ತೀಚೆಗೆ ಚಿನ್ನಸ್ವಾಮಿ ಸ್ಟೇಡಿಯಂನ ಟಿಕೆಟ್ ಕೌಂಟರ್‌ಗಳಿಗೆ ತಮ್ಮ ಟೆಸ್ಟ್ ಪಂದ್ಯದ ಟಿಕೆಟ್‌ಗಳನ್ನು ಖರೀದಿಸಲು ಮುಗಿಬಿದ್ದರು. ಈ ಪೈಕಿ ಆದಿತ್ಯ ಪಾಟಂಕರ್ ಮತ್ತು ಅವರ ಸ್ನೇಹಿತರು ಸಹ ಟಿಕೆಟ್‌ ಪಡೆದ ಅದೃಷ್ಟವಂತರಾಗಿದ್ದಾರೆ. ಕೈಗಾರಿಕಾ ವಿನ್ಯಾಸದ ವಿದ್ಯಾರ್ಥಿಯಾಗಿರುವ ಪಾಟಂಕರ್ ಅವರು ಯಲಹಂಕದಲ್ಲಿ ತಮ್ಮ ಪಿಜಿಯನ್ನು ಬೆಳಗ್ಗೆ 5.30 ಕ್ಕೆ ಬಿಟ್ಟವರು, ಪಂದ್ಯ ನೋಡಲು ಟಿಕೆಟ್‌ಗಾಗಿ ಐದೂವರೆ ಗಂಟೆಗಳ ಕಾಲ ಸರತಿ ಸಾಲಿಗಾಗಿ ಕಾಯ್ದವರು, ಮಧ್ಯಾಹ್ನ 12 ಗಂಟೆಗೆ ಟಿಕೆಟ್ ಪಡೆದಿದ್ದಾರೆ.

ಬೆಳಗ್ಗೆ 5.30ಕ್ಕೆ ಕ್ಯೂನಲ್ಲಿ ನಿಂತಿದ್ದ ವಿದ್ಯಾರ್ಥಿ!

"ಟಿಕೆಟ್ ಖರೀದಿಸಲು ಕ್ರೀಡಾಂಗಣದಲ್ಲಿ ಸರತಿ ಸಾಲು ದೊಡ್ಡದಾಗಿತ್ತು. ನಾನು ಮತ್ತು ನನ್ನ ಸ್ನೇಹಿತರು ಮುಂಬೈನವರು, ಮತ್ತು ಮೊದಲ ಬಾರಿಗೆ ನಾವು ಬೆಂಗಳೂರಿನಲ್ಲಿ ಕೊಹ್ಲಿಗೆ ಹೊಂದಿರುವ ಕ್ರೇಜ್‌ಗೆ ಸಾಕ್ಷಿಯಾಗಿದ್ದೇವೆ. ಶ್ರೀಲಂಕಾ ವಿರುದ್ಧದ ಈ ಟೆಸ್ಟ್ ಸರಣಿಯಲ್ಲಿ ಕೆಲವು ಐತಿಹಾಸಿಕ ಕ್ಷಣಗಳು ತೆರೆದುಕೊಳ್ಳುತ್ತವೆ ಎಂದು ನಾವು ಭಾವಿಸುತ್ತೇವೆ” ಎಂದು 20 ವರ್ಷದ ಯುವಕ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ಹೇಳಿದ್ದಾರೆ.

ಇದನ್ನೂ ಓದಿ:ಕುಕ್ಕರ್​ ಬ್ಲಾಸ್​​ ಆಗಿ ಕಣ್ಣು ಕಳೆದುಕೊಂಡ ಫೇಮಸ್​ ಬಾಕ್ಸರ್​, ಅದಕ್ಕೆ ಹೇಳೋದು ಬಿ ಕೇರ್​ಫುಲ್​!

ಇನ್ನು, ಕೊನೆಯ ಟೆಸ್ಟ್ ಪಂದ್ಯವನ್ನು 2010 ರಲ್ಲಿ ವೀಕ್ಷಿಸಿದ್ದ ಬೆಂಗಳೂರಿನ ಬ್ಲಾಗರ್ ಪ್ರತೀಕ್ ಠಕ್ಕರ್ ಅವರು ಒಂದು ದಶಕಕ್ಕೂ ಹೆಚ್ಚು ಸಮಯದ ನಂತರ ಪಂದ್ಯವನ್ನು ಸ್ಟೇಡಿಯಂನಲ್ಲಿ ನೋಡಲು ಕಾತುರದಿಂದ ಕಾಯುತ್ತಿದ್ದಾರೆ. 2010 ರ ಆ ಪಂದ್ಯದಲ್ಲಿ ಚೇತೇಶ್ವರ ಪೂಜಾರ ಟೆಸ್ಟ್‌ ಪಂದ್ಯಗಳಿಗೆ ಪದಾರ್ಪಣೆ ಮಾಡಿದ್ದರೆ, ಸಚಿನ್ ತೆಂಡೂಲ್ಕರ್ ಅವರ ದ್ವಿಶತಕಕ್ಕೆ ಸಾಕ್ಷಿಯಾದ ಐಕಾನಿಕ್ ಪಂದ್ಯ ಎಂದು ಠಕ್ಕರ್ ವಿವರಿಸಿದ್ದಾರೆ.

ಇದನ್ನೂ ಓದಿ: IPL 2022 ವೇಳಾಪಟ್ಟಿ ಬಿಡುಗಡೆ: ಮಾರ್ಚ್ 26 ರಂದು CSK-KKR ಮೊದಲ ಪಂದ್ಯ

“10 ವರ್ಷಗಳ ನಂತರ ಬೆಂಗಳೂರಿನಲ್ಲಿ ಟೆಸ್ಟ್ ಪಂದ್ಯ ವೀಕ್ಷಿಸಲು ಸಜ್ಜಾಗುತ್ತಿದ್ದೇನೆ. ಶ್ರೀಲಂಕಾ ವಿರುದ್ಧ ಇಲ್ಲಿ ನಡೆಯುತ್ತಿರುವ ಕೊಹ್ಲಿ ಅವರ 101 ನೇ ಟೆಸ್ಟ್ ಪಂದ್ಯವನ್ನು ನೋಡಲು ನಾನು ಉತ್ಸುಕನಾಗಿದ್ದೇನೆ. ಇದು ಹಗಲು ರಾತ್ರಿ ಪಂದ್ಯವಾಗಿದ್ದು, ನಾನು ಮೂರು ದಿನಗಳ ಟಿಕೆಟ್‌ಗಳನ್ನು ಬುಕ್ ಮಾಡಿದ್ದೇನೆ. ಈ ಬಾರಿ ಪಿಂಕ್‌ ಬಾಲನ್ನು ಹಿಡಿಯುವ ಅವಕಾಶ ಸಿಗುವ ಭರವಸೆ ಇದೆ ಎಂದು ಠಕ್ಕರ್ ಹೇಳುತ್ತಾರೆ.
Published by:Vasudeva M
First published: