ಇಂಡಿಯನ್ ಪ್ರೀಮಿಯರ್ ಲೀಗ್ 2023 (IPL 2023) ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ (LSG vs SRH) ತಂಡಗಳು ಇಂದು ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ (Ekana Sports City) ಮುಖಾಮುಖಿ ಆಗಿದ್ದವು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ತಂಡ ಲಕ್ನೋ ತಂಡಕ್ಕೆ 122 ರನ್ಗಳ ಸುಲಭ ಟಾರ್ಗೆಟ್ ನೀಡಿತು. ಈ ಮೊತ್ತ ಬೆನ್ನಟ್ಟಿದ ಲಕ್ನೋ ತಂಡ 16 ಓವರ್ಗೆ 5 ವಿಕೆಟ್ ನಷ್ಟಕ್ಕೆ 127 ರನ್ ಗಳಿಸುವ ಮೂಲಕ 5 ವಿಕೆಟ್ಗಳ ಜಯ ದಾಖಲಿಸಿತು. ಈ ಮೂಲಕ ಲಕ್ನೋ ತಂಡ ಮತ್ತೊಮ್ಮೆ ಲಯಕ್ಕೆ ಮರಳಿತು.
ಗೆಲುವಿನ ಲಯಕ್ಕೆ ಮರಳಿದ ಲಕ್ನೋ:
ಇನ್ನು, ಲಕ್ನೋ ಸೂಪರ್ ಜೈಂಟ್ಸ್ ತಂಡವು 16 ಓವರ್ಗೆ 5 ವಿಕೆಟ್ ನಷ್ಟಕ್ಕೆ 127 ರನ್ ಗಳಿಸುವ ಮೂಲಕ 5 ವಿಕೆಟ್ಗಳ ಜಯ ದಾಖಲಿಸಿತು. ಕೆಎಲ್ ರಾಹುಲ್ 31 ಎಸೆತದಲ್ಲಿ 4 ಫೋರ್ ಮೂಲಕ 35 ರನ್ , ಕೈಲಿ ಮೈಯರ್ಸ್ 13 ರನ್, ದೀಪಕ್ ಹೂಡಾ 7 ರನ್, ಮಾರ್ಕಸ್ ಸ್ಟೊಯಿನಿಸ್, ಕೃನಾಲ್ ಪಾಂಡ್ಯ 23 ಎಸೆತದಲ್ಲಿ 1 ಸಿಕ್ಸ್ ಮತ್ತು 7 ಫೊರ್ ಮೂಲಕ 34 ರನ್ ಗಳಿಸಿದರು. ಉಳಿದಂತೆ ರೋಮಾರೋ ಶೆಫರ್ಡ್ ಶೂನ್ಯ, ನಿಕೋಲಸ್ ಪೂರನ್ 11 ರನ್ ಮತ್ತು ಮಾರ್ಕ್ಸ್ ಸ್ಟೋನಿಸ್ 10 ರನ್ ಗಳಿಸಿದರು.
Back to 𝐖inning 𝐖ays 💙
A thumping win for our #SuperGiants 🙌🔥#LSGvSRH | #IPL2023 | #LucknowSuperGiants | #LSG | #GazabAndaz pic.twitter.com/VPhaiXAVBO
— Lucknow Super Giants (@LucknowIPL) April 7, 2023
ಇನ್ನು, ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಾಲೀಕರಾದ ಕಾವ್ಯ ಮಾರನ್ ಪ್ರತಿ ಬಾರಿಯಂತೆ ಇಂದೂ ಸಹ ಮೈದಾನದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಸನ್ ರೈಸರ್ಸ್ ಹೈದರಾಬಾದ್ ತಂಡ ಸೋಲುತ್ತಿದ್ದಂತೆ ಮಾಲಕೀಯಾದ ಕಾವ್ಯ ಮಾರನ್ ಬೇಸರದಲ್ಲಿ ಇರುವುದು ಕಂಡುಬಂದಿದೆ. ಅಲ್ಲದೇ ಅವರ ಫೊಟೋಗಳು ಸಖತ್ ವೈರಲ್ ಆಗುತ್ತಿದ್ದು, ಟ್ವಟಿರ್ನಲ್ಲಿ ಕಾವ್ಯ ಎನ್ನುವ ಟ್ಯಾಗ್ ಸಖತ್ ಟ್ರೆಂಡಿಂಗ್ ಆಗಿದೆ.
Kavya Maran over the moon after the 1st wicket. pic.twitter.com/po6tl63VAb
— Mufaddal Vohra (@mufaddal_vohra) April 7, 2023
ಇನ್ನು, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡವು ನಿಗದಿತ 20 ಓವರ್ನಲ್ಲಿ 8 ವಿಕೆಟ್ ನಷ್ಟಕ್ಕೆ 121 ರನ್ ಗಳಿಸಿದೆ. ಹೈದರಾಬಾದ್ ಪರ, ಮಯಾಂಕ್ ಅಗರ್ವಾಲ್ 8 ರನ್, ಅನ್ಮೋಲ್‌ಪ್ರೀತ್ ಸಿಂಗ್ 31 ರನ್, ರಾಹುಲ್ ತ್ರಿಪಾಠಿ 34 ರನ್, ಐಡೆನ್ ಮಾರ್ಕ್ರಾಮ್ ಶೂನ್ಯ, ಹ್ಯಾರಿ ಬ್ರೂಕ್ 3 ರನ್, ವಾಷಿಂಗ್ಟನ್ ಸುಂದರ್ 16 ರನ್, ಅಬ್ದುಲ್ ಸಮದ್ 21 ರನ್, ಭುವನೇಶ್ವರ್ ಕುಮಾರ್ ಶೂನ್ಯ, ಉಮ್ರಾನ್ ಮಲಿಕ್ 0 ರನ್ ಮತ್ತು ಆದಿಲ್ ರಶೀದ್ 4 ರನ್ ಗಳಿಸಿದರು.
ಕೃನಲ್ ಪಾಂಡ್ಯ ಭರ್ಜರಿ ಬೌಲಿಂಗ್:
ಟಾಸ್ ಸೋತು ಮೊದಲು ಬೌಲಿಂಗ್ ಮಾಡಿದ ಲಕ್ನೋ ಪರ ಕೃನಲ್ ಪಾಂಡ್ಯ 4 ಓವರ್ ಮಾಡಿ 18 ರನ್ ನೀಡಿ 3 ವಿಕೆಟ್ ಪಡೆದರು. ಉಳಿದಂತೆ ಅಮಿತ್ ಮಿಶ್ರಾ 4 ಓವರ್ ಮಾಡಿ 23 ರನ್ ನೀಡಿ 2 ವಿಕೆಟ್ ಪಡೆದರು. ಉಳಿಂದತೆ ಯಶ್ ಠಾಕೂರ್ ಮತ್ತು ರವಿ ಬಿಷ್ನೋಯ್ ತಲಾ 1 ವಿಕೆಟ್ ಪಡೆದು ಮಿಂಚಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ