ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಲಕ್ನೋ ಸೂಪರ್ ಜೈಂಟ್ಸ್ (LSG vs MI 2023) ಎದುರು ಕಠಿಣ ಗುರಿ ನೀಡಿತು. ಟಾಸ್ ಗೆದ್ದ ಮುಂಬೈ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತು. ಈ ಮೊತ್ತ ಬೆನ್ನಟ್ಟಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು ನಿಗದಿತ 16.3 ಓವರ್ಗೆ 10 ವಿಕೆಟ್ ನಷ್ಟಕ್ಕೆ 101 ರನ್ ಗಳಿಸುವ ಮೂಲಕ 81 ರನ್ ಗಳಿಂದ ಸೋಲನ್ನಪ್ಪಿತು. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡವು ಮೇ26ರಂದು ಗುಜರಾತ್ ವಿರುದ್ಧ ಫೈನಲ್ಗಾಗಿ ಕ್ವಾಲಿಫೈಯರ್ 2ರಲ್ಲಿ ಪಂದ್ಯದಲ್ಲಿ ಸೆಣಸಾಡಲಿದೆ.
ಬ್ಯಾಟಿಂಗ್ನಲ್ಲಿ ಎಡವಿದ ಲಕ್ನೋ:
ಇನ್ನು, ಮುಂಬೈ ಇಂಡಿಯನ್ಸ್ ಬೌಲಿಂಗ್ ದಾಳಿಗೆ ನಲುಗಿದ ಲಕ್ನೋ ತಂಡವು ಮಹತ್ವದ ಪಂದ್ಯದಲ್ಲಿ ಎಡವಿತು. ಲಕ್ನೋ ಸೂಪರ್ ಜೈಂಟ್ಸ್ ಪರ ಕೈಲಿ ಮೈಯರ್ಸ್ 18 ರನ್, ಆಯುಷ್ ಬಡೋನಿ 1 ರನ್, ದೀಪಕ್ ಹೂಡಾ 15 ರನ್, ಪ್ರೇರಕ್ ಮಂಕಡ್ 3 ರನ್, ಮಾರ್ಕಸ್ ಸ್ಟೊಯಿನಿಸ್ 40 ರನ್, ನಿಕೋಲಸ್ ಪೂರನ್ ಶೂನ್ಯ, ಕೃನಾಲ್ ಪಾಂಡ್ಯ 8 ರನ್, ಕೃಷ್ಣಪ್ಪ ಗೌತಮ್ 2 ರನ್, ರವಿ ಬಿಷ್ಣೋಯ್ 3 ರನ್ ಗಳಿಸಿದರು. ಇತ್ತ ಮುಂಬೈ ಪರ ಭರ್ಜರಿ ಬೌಲಿಂಗ್ ದಾಳಿ ಮಾಡುವ ಮೂಲಕ ಆಕಾಶ್ ಮಡ್ವಾಳ್ 3.3 ಓವರ್ಗೆ ಕೇವಲ 5 ರನ್ ನೀಡಿ 5 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಕ್ರಿಸ್ ಜೋರ್ಡ್ನ್ 1 ವಿಕೆಟ್, ಪಿಯೂಶ್ ಚಾವ್ಲಾ 1 ವಿಕೆಟ್
ಗುಜರಾತ್ - ಮುಂಬೈ ಫೈಟ್:
ಇನ್ನು, ಮೇ 26ರಂದು ನಡೆಯಲಿರುವ ಕ್ವಾಲಿಫೈಯರ್ 2ರಲ್ಲಿ ಪಂದ್ಯದಲ್ಲಿ ಫೈನಲ್ಗಾಗಿ ಗುಜರಾತ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಾಡಲಿದೆ. ಈ ಪಂದ್ಯವು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತೀಯ ಕಾಲಮಾನ ಸಂಜೆ 7:30ಕ್ಕೆ ಆರಂಭವಾಗಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಮೇ 28ರಂದು ನಡೆಯಲಿರುವ ಐಪಿಎಲ್ 2023 16ನೇ ಸೀಸನ್ನ ಫೈನಲ್ ಕದನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣಸಾಡಲಿದೆ.
ಇದನ್ನೂ ಓದಿ: IPL 2023: ಚೆನ್ನೈ ಪರ ಜಡ್ಡು ಲಾಸ್ಟ್ ಸೀಸನ್! ನೆಕ್ಟ್ಸ್ ಆರ್ಸಿಬಿಯಿಂದ ಕಣಕ್ಕಿಳಿಯುತ್ತಾರಾ ಜಡೇಜಾ?
ಮುಂಬೈ ಬ್ಯಾಟಿಂಗ್ಗೆ ನವೀನ್ ಉಲ್ ಹಕ್ ಶಾಕ್:
ಟಾಸ್ ಗೆದ್ದ ಮುಂಬೈ ತಂಡಕ್ಕೆ ಆರಂಭಿಕರು ಭರ್ಜರಿ ಆರಂಭ ನೀಡಿದರು. ಇಶಾನ್ ಮತ್ತು ರೋಹಿತ್ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು. ಈ ಜೋಡಿ ಕೇವಲ ಮೂರು ಓವರ್‌ಗಳಲ್ಲಿ 30 ರನ್ ಸೇರಿಸಿತು. ಆದರೆ, ನವೀನ್ ಉಲ್ ಹಕ್ ಈ ಅಪಾಯಕಾರಿ ಜೋಡಿಯನ್ನು ಬ್ರೇಕ್ ಮಾಡಿದರು. 11 ರನ್ ಗಳಿಸಿದ್ದ ರೋಹಿತ್ ಶರ್ಮಾ ಅವರನ್ನು ನವೀನ್ ಔಟ್ ಮಾಡಿದರು. ಇದರೊಂದಿಗೆ 30 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ಇದಾದ ಬೆನ್ನಲ್ಲೇ ಇಶಾನ್ ಕಿಶನ್ ಕೂಡ ಔಟಾದರು.
ಯಶ್ ಠಾಕೂರ್ ಬೌಲಿಂಗ್ ನಲ್ಲಿ 15 ರನ್ ಗಳಿಸಿದ್ದ ಇಶಾನ್ ಕೀಪರ್ ಪೂರನ್ ಗೆ ಕ್ಯಾಚ್ ನೀಡಿ ಔಟಾದರು. ಇದರೊಂದಿಗೆ ಮುಂಬೈ 38 ರನ್ ಗಳಿಸುವಷ್ಟರಲ್ಲಿ ಎರಡನೇ ವಿಕೆಟ್ ಕಳೆದುಕೊಂಡಿತು. ಕ್ಯಾಮರೂನ್ ಗ್ರೀನ್ ಮತ್ತು ಸೂರ್ಯಕುಮಾರ್ ಯಾದವ್ ಬಳಿಕ ಉತ್ತಮ ಜೊತೆಯಾಟವಾಡಿದರು. ಈ ಜೋಡಿ ಮೂರನೇ ವಿಕೆಟ್‌ಗೆ 50 ರನ್ ಸೇರಿಸಿದರು. ಆದರೆ ನವೀನ್ ಉಲ್ ಹಕ್ ಈ ಅಪಾಯಕಾರಿ ಜೋಡಿಯನ್ನು ಬೇರ್ಪಡಿಸಿದರು. 20 ಎಸೆತಗಳಲ್ಲಿ 33 ರನ್ ಗಳಿಸಿದ್ದ ಸೂರ್ಯ ಅವರನ್ನು ನವೀನ್ ಔಟ್ ಮಾಡಿದರು.
ತಕ್ಷಣವೇ ಗ್ರೀನ್ ರನ್ನು ಅದ್ಭುತ ಚೆಂಡಿನಿಂದ ಪೆವಿಲಿಯನ್ ಗೆ ಕಳುಹಿಸಿದರು. ಕ್ಯಾಮರೂನ್ ಗ್ರೀನ್ 23 ಎಸೆತಗಳಲ್ಲಿ 41 ರನ್ ಗಳಿಸಿದರು. ಮುಂಬೈ 105 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿತು. ಆ ಬಳಿಕ ಮುಂಬೈ ವೇಗಕ್ಕೆ ಬ್ರೇಕ್ ಬಿದ್ದಿತು. ಆ ಬಳಿಕ ತಿಲಕ್ ವರ್ಮಾ ಕೂಡ 26 ರನ್ ಗಳಿಸಿದ್ದ ನವೀನ್ ಉಲ್ ಹಕ್ ಔಟಾದರು. ಕೊನೆಗೆ ನೆಹಾಲ್ ವಥೇರಾ (12 ಎಸೆತಗಳಲ್ಲಿ 23 ರನ್) ಕೊಂಚ ವೇಗಾವಾಗಿ ಆಡುವ ಮೂಲಕ ತಂಡದ ಸ್ಕೋರ್ ಉತ್ತಮಗೊಳಿಸುವಲ್ಲಿ ಯಶಸ್ವಿಯಾದರು. ನವೀನ್-ಉಲ್-ಹಕ್ ಮುಂಬೈ ವಿರುದ್ಧ 4 ಪ್ರಮುಖ ವಿಕೆಟ್‌ಗಳನ್ನು ಕಬಳಿಸಿ ಮುಂಬೈನ ವೇಗಕ್ಕೆ ಬ್ರೇಕ್ ಹಾಕಿದರು. ಯಶ್ ಠಾಕೂರ್ 3 ವಿಕೆಟ್ ಕಬಳಿಸಿ ತಮ್ಮ ಶಕ್ತಿ ಪ್ರದರ್ಶಿಸಿದರು. ಮೊಹ್ಸಿನ್ ಖಾನ್ ಒಂದು ವಿಕೆಟ್ ಪಡೆದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ