ಐಪಿಎಲ್​​ ಇತಿಹಾಸದಲ್ಲೇ ಕನಿಷ್ಠ ಸ್ಕೋರ್​ಗೆ ಆಲೌಟ್: ಆರ್​​ಸಿಬಿಗೆ ಮೊದಲ ಸ್ಥಾನ

2017ರ ಐಪಿಎಲ್ ಸೀಸನ್​​ನಲ್ಲಿ ಆರ್​ಸಿಬಿ ಕೇವಲ 49 ರನ್​ಗೆ ಆಲೌಟ್ ಆಗುವ ಮೂಲಕ ಐಪಿಎಲ್ ಇತಿಹಾಸದಲ್ಲೇ ಕನಿಷ್ಠ ಸ್ಕೋರ್​​ಗೆ ಆಲೌಟ್ ಆದ ತಂಡ ಕುಖ್ಯಾತಿಗೆ ಪಾತ್ರವಾಗಿದೆ.

Vinay Bhat | news18
Updated:February 12, 2019, 4:27 PM IST
ಐಪಿಎಲ್​​ ಇತಿಹಾಸದಲ್ಲೇ ಕನಿಷ್ಠ ಸ್ಕೋರ್​ಗೆ ಆಲೌಟ್: ಆರ್​​ಸಿಬಿಗೆ ಮೊದಲ ಸ್ಥಾನ
ವಿರಾಟ್ ಕೊಹ್ಲಿ
Vinay Bhat | news18
Updated: February 12, 2019, 4:27 PM IST
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್​​ನಲ್ಲಿ ಅತ್ಯಧಿಕ ಅಭಿಮಾನಿಗಳನ್ನು ಹೊಂದಿರುವ ತಂಡಗಳ ಪೈಕಿ ಆರ್​ಸಿಬಿ ಪ್ರಮುಖವಾಗಿರುವುದು. ಎಲ್ಲ ದೇಶದ ಅಭಿಮಾನಿಗಳು ರಾಯಲ್ ಚಾಲೆಂಜರ್ಸ್​​ ತಂಡಕ್ಕೆ ಬೆಂಬಲಿಸುತ್ತಾರೆ. ಹೀಗೆ ಟಾಪ್ ಸ್ಟಾರ್ ಆಟಗಾರರನ್ನು ಹೊಂದಿರುವ ಆರ್​ಸಿಬಿ ತಂಡ ಐಪಿಎಲ್ ಇತಿಹಾಸದಲ್ಲೇ ಕರಿಷ್ಠ ಸ್ಕೋರ್​​ಗೆ ರನೌಟ್​​​ ಆದ ತಂಡ ಎಂದರೆ ನಂಬಲೇ ಬೇಕು.

2017ರ ಐಪಿಎಲ್ ಸೀಸನ್​​ನಲ್ಲಿ ಆರ್​ಸಿಬಿ ಕೇವಲ 49 ರನ್​ಗೆ ಆಲೌಟ್ ಆಗುವ ಮೂಲಕ ಐಪಿಎಲ್ ಇತಿಹಾಸದಲ್ಲೇ ಕನಿಷ್ಠ ಸ್ಕೋರ್​​ಗೆ ಆಲೌಟ್ ಆದ ತಂಡ ಕುಖ್ಯಾತಿಗೆ ಪಾತ್ರವಾಗಿದೆ.

ಕೋಲ್ಕತ್ತಾ ನೈಟ್ ರೈಡರ್ಸ್​​ ವಿರುದ್ಧದ ಈ ಪಂದ್ಯದಲ್ಲಿ, ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡ ಆರ್​ಸಿವಿಗೆ ಗೆಲ್ಲಲು 132 ರನ್​​​ಗಳ ಟಾರ್ಗೆಟ್ ನೀಡಿತು. ಈ ಸುಲಭ ಗುರಿ ಬೆನ್ನತ್ತಿದ ಆರ್​ಸಿಬಿ ಸತತವಾಗಿ ವಿಕೆಟ್ ಕಳೆದುಕೊಂಡು ಕೇವಲ 49 ರನ್​ಗೆ ಸರ್ವಪತನ ಕಂಡಿತು. ಕೇದರ್ ಜಾಧವ್​​ ಆರ್​ಸಿಬಿ ಪರ 9 ರನ್​ ಗಳಿಸಿದ್ದೆ ಹೆಚ್ಚು. ಕೆಕೆಆರ್ ಪರ ಗ್ರ್ಯಾಂಡ್​​​ಹೋಮ್​​ ಕೇವಲ 4 ರನ್​ಗೆ 3 ವಿಕೆಟ್ ಕಿತ್ತರು.

ಇದನ್ನೂ ಓದಿ: ನಮ್ಮೊಂದಿಗೆ ಕ್ರಿಕೆಟ್ ಆಡಿ ಎಂದು ಭಾರತವೇ ಅಂಗಲಾಚುವಂತೆ ಮಾಡುತ್ತೇವೆ; ಪಾಕಿಸ್ತಾನ ಕ್ರಿಕೆಟ್ ಮಂಡಳಿ

ಇನ್ನು ಎರಡನೇ ಸ್ಥಾನದಲ್ಲಿ ಕನಿಷ್ಠ ಸ್ಕೋರ್​​ ಕಲೆಹಾಕಿದ ತಂಡದ ಪೈಕಿ ರಾಜಸ್ಥಾನ ರಾಯಲ್ಸ್​ ತಂಡವಿದ್ದು 58 ರನ್​​ಗೆ ಆಲೌಟ್ ಆಗಿದೆ. 2009ರಲ್ಲಿ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಆರ್​ಆರ್​ ಈ ಕಳಪೆ ಪ್ರದರ್ಶನ ತೋರಿದೆ. ಅಂತೆಯೆ 2017ರಲ್ಲಿ 66 ರನ್​ಗೆ ಆಲೌಟ್ ಆಗುವ ಮೂಲಕ ಡೆಲ್ಲಿ ಡೇರ್ ಡೆವಿಲ್ಸ್​ ತಂಡ ಕನಿಷ್ಠ ರನ್ ಬಾರಿಸಿದ ಸಾಲಿನಲ್ಲಿ ಮೂರನೇ ಸ್ಥಾನದಲ್ಲಿದೆ.

First published:February 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ