Khel Ratna: ನೀರಜ್ ಚೋಪ್ರಾ ಸೇರಿ 12 ಮಂದಿಗೆ ಖೇಲ್ ರತ್ನ; ಹಾಸನದ ಯುವಕನಿಗೆ ಅರ್ಜುನ ಪ್ರಶಸ್ತಿ; ಇಲ್ಲಿದೆ ಸಂಪೂರ್ಣ ಪಟ್ಟಿ

Major Dhyan Chand Khel Ratna Award: 12 ಮಂದಿಗೆ ಖೇಲ್ ರತ್ನ, 35 ಮಂದಿಗೆ ಅರ್ಜುನ, 10 ಮಂದಿಗೆ ದ್ರೋಣಾಚಾರ್ಯ ಪ್ರಶಸ್ತಿ ಪ್ರಕಟಿಸಲಾಗಿದೆ. ಉ.ಪ್ರ.ದಲ್ಲಿ ಐಎಎಸ್ ಅಧಿಕಾರಿಯಾಗಿರುವ ಕನ್ನಡಿಗ ಸುಹಾಸ್ ಅವರಿಗೆ ಅರ್ಜುನ ಪ್ರಶಸ್ತಿ ಸಿಕ್ಕಿದೆ.

ನೀರಜ್ ಚೋಪ್ರಾ.

ನೀರಜ್ ಚೋಪ್ರಾ.

 • News18
 • Last Updated :
 • Share this:
  ನವದೆಹಲಿ: ಟೋಕಿಯೋ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆದ್ದಿದ್ದ ಜಾವೆಲಿನ್ ಪಟು ನೀರಜ್ ಚೋಪ್ರಾ ಅವರಿಗೆ ಕೇಂದ್ರ ಸರ್ಕಾರದ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯ ಗೌರವ ಲಭಿಸಿದೆ. ನೀರಜ್ ಚೋಪ್ರಾ ಸೇರಿ ಒಟ್ಟು 12 ಮಂದಿಗೆ ಖೇಲ್ ರತ್ನ ಪ್ರಶಸ್ತಿ ಸಿಕ್ಕಿದೆ. ಇದರಲ್ಲಿ ಭಾರತದ ಅತ್ಯುತ್ತಮ ಕ್ರಿಕೆಟ್ ಆಟಗಾರ್ತಿ ಎನಿಸಿರುವ ಮಿಥಾಲಿ ರಾಜ್ ಅವರೂ ಇದ್ದಾರೆ. ಟೋಕಿಯೋ ಒಲಿಂಪಿಕ್ಸ್ ಹಾಗೂ ಪ್ಯಾರಾಲಿಂಪಿಕ್ಸ್​ನಲ್ಲಿ ಪದಕ ಗೆದ್ದವರೆಲ್ಲರಿಗೂ ಖೇಲ್ ರತ್ನ ಅಥವಾ ಅರ್ಜುನ ಪ್ರಶಸ್ತಿಯ ಗೌರವ ಪ್ರಾಪ್ತಿಯಾಗಿದೆ.

  ಕಂಚಿನ ಪದಕ ಪಡೆದ ಭಾರತ ಹಾಕಿ ತಂಡದ ಎಲ್ಲಾ ಸದಸ್ಯರಿಗೂ ಅರ್ಜುನ ಪ್ರಶಸ್ತಿ ಬಂದಿದೆ. ಹಾಕಿ ತಂಡದ ನಾಯಕ ಶ್ರೀಜೇಶ್ ಹಾಗೂ ಅತ್ಯುತ್ತಮ ಪ್ರದರ್ಶನ ನೀಡಿದ ಹಾಕಿ ಅಟಗಾರ ಮನ್​ಪ್ರೀತ್ ಸಿಂಗ್ ಅವರಿಗೆ ಖೇಲ್ ರತ್ನ ಪ್ರಶಸ್ತಿ ಬಂದಿದೆ.

  ಹಾಸನದ ಯುವಕ, ಉತ್ತರ ಪ್ರದೇಶದಲ್ಲಿ ಐಎಎಸ್ ಅಧಿಕಾರಿ ಆಗಿರುವ ಸುಹಾಸ್ ಲಾಳನಕೆರೆ ಯತಿರಾಜ್ ಅವರು ಅರ್ಜುನ ಅವಾರ್ಡ್ ಗಿಟ್ಟಿಸಿದ್ದಾರೆ. ಪ್ಯಾರಾ ಬ್ಯಾಡ್ಮಿಂಟನ್​ನಲ್ಲಿ ಸುಹಾಸ್ ಪದಕ ಜಯಿಸಿದ್ದರು. ಟೀಮ್ ಇಂಡಿಯಾ ಕ್ರಿಕೆಟಿಗ ಶಿಖರ್ ಧವನ್ ಅವರಿಗೂ ಅರ್ಜುನ ಅವಾರ್ಡ್ ಸಿಕ್ಕಿದೆ. ಒಟ್ಟು 35 ಮಂದಿಗೆ ಅರ್ಜುನ ಪ್ರಶಸ್ತಿ ಗೌರವ ಬಂದಿದೆ.

  ಖೇಲ್ ರತ್ನ ಪ್ರಶಸ್ತಿ ಈ ಹಿಂದೆ ರಾಜೀವ್ ಗಾಂಧಿ ಖೇಲ್ ರತ್ನ ಎಂದು ಕರೆಯಲಾಗುತ್ತಿತ್ತು. ಕೆಲ ತಿಂಗಳ ಹಿಂದಷ್ಟೇ ಕೇಂದ್ರ ಸರ್ಕಾರ ಈ ಪ್ರಶಸ್ತಿ ಹೆಸರನ್ನು ರಾಜೀವ್ ಗಾಂಧಿ ಬದಲು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಬದಲಾಯಿಸಿದೆ. ಮೇಜರ್ ಧ್ಯಾನ್ ಚಂದ್ ಅವರು ಭಾರತ ಕಂಡ ಅತ್ಯುತ್ತಮ ಹಾಕಿ ಆಟಗಾರರಾಗಿದ್ದವರು. ಇವರ ಹೆಸರಿನಲ್ಲಿ ಭಾರತದ ಅತ್ಯುಚ್ಛ ಕ್ರೀಡಾ ಪ್ರಶಸ್ತಿ ನೀಡಲಾಗುತ್ತಿದೆ.

  ಖೇಲ್ ರತ್ನ, ಅರ್ಜುನ ಪ್ರಶಸ್ತಿ ಜೊತೆಗೆ ಕೋಚ್​ಗಳಿಗೆ ನೀಡುವ ದ್ರೋಣಾಚಾರ್ಯ ಪ್ರಶಸ್ತಿಗಳು ಈ ಬಾರಿ 10 ಮಂದಿಗೆ ಸಿಕ್ಕಿವೆ. ಈ ಎಲ್ಲಾ ಪ್ರಶಸ್ತಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ;

  ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ 2021:

  1) ನೀರಜ್ ಚೋಪ್ರಾ: ಅಥ್ಲೆಟಿಕ್ಸ್
  2) ರವಿ ಕುಮಾರ್ ದಾಹಿಯಾ: ಕುಸ್ತಿ
  3) ಲವ್ಲಿನಾ ಬೋರ್ಗೋಹೇನ್: ಬಾಕ್ಸಿಂಗ್
  4) ಶ್ರೀಜೇಶ್ ಪಿ.ಆರ್.: ಹಾಕಿ
  5) ಆವನಿ ಲೇಖರ: ಪ್ಯಾರಾ ಶೂಟಿಂಗ್
  6) ಸುಮಿತ್ ಅಂತಿಲ್: ಪ್ಯಾರಾ ಅಥ್ಲೆಟಿಕ್ಸ್ (ಡಿಸ್ಕಸ್ ಥ್ರೋ)
  7) ಪ್ರಮೋದ್ ಭಗತ್: ಪ್ಯಾರಾ ಬ್ಯಾಡ್ಮಿಂಟನ್
  8) ಕೃಷ್ಣ ನಾಗರ್: ಪ್ಯಾರಾ ಬ್ಯಾಡ್ಮಿಂಟನ್
  9) ಮನೀಶ್ ನರ್ವಾಲ್: ಪ್ಯಾರಾ ಬ್ಯಾಡ್ಮಿಂಟನ್
  10) ಮಿಥಾಲಿ ರಾಜ್: ಕ್ರಿಕೆಟ್
  11) ಸುನೀಲ್ ಛೇಟ್ರಿ: ಫುಟ್ಬಾಲ್
  12) ಮನ್​ಪ್ರೀತ್ ಸಿಂಗ್: ಹಾಕಿ

  ಇದನ್ನೂ ಓದಿ: Stats- ಟಾಸ್ ಮುಖ್ಯವಾಯ್ತಾ? ಟಿ20 ವಿಶ್ವಕಪ್​ನಲ್ಲಿ ಮೊದಲು ಬ್ಯಾಟ್ ಮಾಡಿ ಗೆದ್ದವರು ಎಷ್ಟು?

  ಅರ್ಜುನ ಪ್ರಶಸ್ತಿ 2021
  1) ಅರ್ಪಿಂದರ್ ಸಿಂಗ್: ಅಥ್ಲೆಟಿಕ್ಸ್
  2) ಸಿಮ್ರಂಜಿತ್ ಕೌರ್: ಬಾಕ್ಸಿಂಗ್
  3) ಶಿಖರ್ ಧವನ್: ಕ್ರಿಕೆಟ್
  4) ಭವಾನಿ ದೇವಿ: ಫೆನ್ಸಿಂಗ್
  5) ಮೋನಿಕಾ: ಹಾಕಿ
  6) ವಂದನಾ ಕಟಾರಿಯಾ: ಹಾಕಿ
  7) ಸಂದೀಪ್ ನರ್ವಾಲ್: ಕಬಡ್ಡಿ
  8) ಹಿಮಾನಿ ಉತ್ತಮಮ್ ಪರಬ್: ಮಲ್ಲಕಂಬ್
  9) ಅಭಿಷೇಕ್ ವರ್ಮಾ: ಶೂಟಿಂಗ್
  10) ಅಂಕಿತಾ ರೈನಾ: ಟೆನಿಸ್
  11) ದೀಪಕ್ ಪೂನಿಯಾ: ಕುಸ್ತಿ
  12) ದಿಲ್​ಪ್ರೀತ್ ಸಿಂಗ್, ಹಾಕಿ
  13) ಹರ್ಮಾನ್ ಪ್ರೀತ್ ಸಿಂಗ್, ಹಾಕಿ
  14) ರುಪಿಂದರ್ ಪಾಲ್ ಸಿಂಗ್, ಹಾಕಿ
  15) ಸುರೇಂದರ್ ಕುಮಾರ್, ಹಾಕಿ
  16) ಅಮಿತ್ ರೋಹಿದಾಸ್, ಹಾಕಿ
  17) ಬಿರೇಂದ್ರ ಲಾಕ್ರಾ, ಹಾಕಿ
  18) ಸುಮಿತ್, ಹಾಕಿ
  19) ನೀಲಕಂಠ ಶರ್ಮಾ, ಹಾಕಿ
  20) ಹಾರ್ದಿಕ್ ಸಿಂಗ್, ಹಾಕಿ
  21) ವಿವೇಕ್ ಸಾಗರ್ ಪ್ರಸಾದ್, ಹಾಕಿ
  22) ಗುರ್ಜಂತ್ ಸಿಂಗ್, ಹಾಕಿ
  23) ಮಂದೀಪ್ ಸಿಂಗ್, ಹಾಕಿ
  24) ಶಂಶೇರ್ ಸಿಂಗ್, ಹಾಕಿ
  25) ಲಲಿತ್ ಕುಮಾರ್ ಉಪಾಧ್ಯಾಯ್, ಹಾಕಿ
  26) ವರುಣ್ ಕುಮಾರ್, ಹಾಕಿ
  27) ಸಿಮ್ರನ್​ಜೀತ್ ಸಿಂಗ್, ಹಾಕಿ
  28) ಯೋಗೇಶ್ ಕಥುನಿಯಾ, ಪ್ಯಾರಾ ಅಥ್ಲೆಟಿಕ್ಸ್
  29) ನಿಶದ್ ಕುಮಾರ್, ಪ್ಯಾರಾ ಅಥ್ಲೆಟಿಕ್ಸ್
  30) ಪ್ರವೀಣ್ ಕುಮಾರ್, ಪ್ಯಾರಾ ಅಥ್ಲೆಟಿಕ್ಸ್
  31) ಸುಹಾಸ್ ಯತಿರಾಜ್, ಪ್ಯಾರಾ ಬ್ಯಾಡ್ಮಿಂಟನ್
  32) ಸಿಂಗರಾಜ್ ಅಧಾನ, ಪ್ಯಾರಾ ಶೂಟಿಂಗ್
  33) ಭವಿನಾ ಪಟೇಲ್: ಪ್ಯಾರಾ ಟೇಬಲ್ ಟೆನಿಸ್
  34) ಹರ್ವಿಂದರ್ ಸಿಂಗ್: ಪ್ಯಾರಾ ಆರ್ಚರಿ
  35) ಶರದ್ ಕುಮಾರ್: ಪ್ಯಾರಾ ಅಥ್ಲೆಟಿಕ್ಸ್

  ದ್ರೋಣಾಚಾರ್ಯ ಪ್ರಶಸ್ತಿ 2021 (ತರಬೇತುದಾರರ ಜೀವಿತಾವಧಿ ಸಾಧನೆಗೆ)
  1) ಟಿಪಿ ಔಸೆಫ್, ಅಥ್ಲೆಟಿಕ್ಸ್
  2) ಸರ್ಕಾರ್ ತಲ್ವಾಲ್, ಕ್ರಿಕೆಟ್
  3) ಸರ್ಪಲ್ ಸಿಂಗ್, ಹಾಕಿ
  4) ಆಶನ್ ಕುಮಾರ್, ಕಬಡ್ಡಿ
  5) ತಪನ್ ಕುಮಾರ್ ಪಾಣಿಗ್ರಹಿ, ಈಜು

  ದ್ರೋಣಾಚಾರ್ಯ ಪ್ರಶಸ್ತಿ:
  1) ರಾಧಾಕೃಷ್ಣನ್ ನಾಯರ್ ಪಿ, ಅಥ್ಲೆಟಿಕ್ಸ್
  2) ಸಂಧ್ಯಾ ಗುರುಂಗ್, ಬಾಕ್ಸಿಂಗ್
  3) ಪ್ರೀತಮ್ ಸಿವಾಚ್, ಹಾಕಿ
  4) ಜೈ ಪ್ರಕಾಶ್ ನೌಟಿವಲ್, ಪ್ಯಾರಾ ಶೂಟಿಂಗ್
  5) ಸುಬ್ರಮಣಿಯನ್ ರಾಮನ್, ಟೇಬಲ್ ಟೆನಿಸ್

  ಧ್ಯಾನ್ ಚಂದ್ ಪ್ರಶಸ್ತಿ (ಜೀವಿತಾವಧಿ ಸಾಧನೆಗೆ)
  1) ಲೇಖಾ ಕೆ ಸಿ, ಬಾಕ್ಸಿಂಗ್
  2) ಅಭಿಜೀತ್ ಕುಂಟೆ, ಚೆಸ್
  3) ದವಿಂದರ್ ಸಿಂಗ್ ಗರ್ಚಾ, ಹಾಕಿ
  4) ವಿಕಾಸ್ ಕುಮಾರ್, ಕಬಡ್ಡಿ
  5) ಸಾಜ್ಜನ್ ಸಿಂಗ್, ಕುಸ್ತಿ
  Published by:Vijayasarthy SN
  First published: