• Home
 • »
 • News
 • »
 • sports
 • »
 • ಸಾಕರ್​ ಮಾಂತ್ರಿಕನಿಗೆ ಇಂದು ಹುಟ್ಟುಹಬ್ಬದ ಸಂಭ್ರಮ: 31ನೇ ವಸಂತಕ್ಕೆ ಕಾಲಿಟ್ಟ ಲಿಯೋನೆಲ್​ ಮೆಸ್ಸಿ

ಸಾಕರ್​ ಮಾಂತ್ರಿಕನಿಗೆ ಇಂದು ಹುಟ್ಟುಹಬ್ಬದ ಸಂಭ್ರಮ: 31ನೇ ವಸಂತಕ್ಕೆ ಕಾಲಿಟ್ಟ ಲಿಯೋನೆಲ್​ ಮೆಸ್ಸಿ

 • News18
 • Last Updated :
 • Share this:

  ನ್ಯೂಸ್ 18 ಕನ್ನಡ

  ಮಾಸ್ಕೋ (ಜೂ. 24): ಲಿಯೋನೆಲ್​ ಮೆಸ್ಸಿ ವಿಶ್ವ ಫುಟ್ಬಾಲ್ ಲೋಕದ ಧೃವತಾರೆ. ವಿಶ್ವದಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಸೆಳೆದಿಟ್ಟುಕೊಂಡಿರುವ ಸಾಕರ್ ಮಾಂತ್ರಿಕನಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಸದ್ಯ ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್​​ನಲ್ಲಿ ಬ್ಯುಸಿಯಾಗಿರುವ ಮೆಸ್ಸಿ ಅವರಿಗೆ ಎಲ್ಲಡೆಯಿಂದ ಶುಭಾಷಯಗಳ ಮಹಾಪೂರವೇ ಹರಿದು ಬಂದಿದೆ.

  ಲಿಯೋನೆಲ್​ ಮೆಸ್ಸಿ ಅರ್ಜೆಂಟೀನಾ ಪರ ಆಡಲು ಶುರುಮಾಡಿದಾಗಿನಿಂದ ತಂಡದ ಅಭಿಮಾನಿಗಳ ಸಂಖ್ಯೆಯು ದ್ವಿಗುಣಗೊಂಡಿದೆ. ಫಿಫಾ ವಿಶ್ವಕಪ್​​ನ ರೂಲರ್​​​ ಎಂದೇ ಕರೆಸಿಕೊಳ್ಳುವ ಮೆಸ್ಸಿ ಆಟ ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿರುತ್ತಾರೆ. ಎದುರಾಳಿಯನ್ನು ವಂಚಿಸಿ ಇವರು ದಾಖಲಿಸುವ ಗೋಲು ನೋಡಲು, ಜಾತಕ ಪಕ್ಷಿಯಂತೆ ಕಾದಿರುತ್ತಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಮೆಸ್ಸಿ ಅವರ ದಾಖಲೆಗಳು ಒಂದೆರಡಲ್ಲ. ನೂರಾರು ದಾಖಲೆಗಳನ್ನು ತನ್ನ ಖಾತೆ​ಗೆ ಜಮೆ ಮಾಡಿಕೊಂಡಿರುವ ಮೆಸ್ಸಿ ಅವರು ಯಾವುದೇ ತಂಡದಲ್ಲಿರಲಿ ಆ ಪಂದ್ಯ ಅರ್ಧ ಗೆದ್ದ ಹಾಗೆಯೇ ಎಂದು ಅಭಿಮಾನಿಗಳು ನಂಬಿದ್ದಾರೆ. ಇದಕ್ಕೆ ಸಾಕ್ಷಿ ಮೆಸ್ಸಿ ಹೆಸರಲ್ಲಿ ದಾಖಲಾಗಿರುವ 500ಕ್ಕೂ ಹೆಚ್ಚು ಗೋಲುಗಳು.

  ಹೀಗೆ ನೂರಾರು ದಾಖಲೆಗಳನ್ನು ತನ್ನ ಹೆಸರಿಗೆ ಬರೆದುಕೊಂಡಿರುವ ಮೆಸ್ಸಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 31ನೇ ವಸಂತಕ್ಕೆ ಕಾಲಿಟ್ಟರುವ ಸಾಕರ್ ಮಾಂತ್ರಿಕನಿಗೆ ವಿಶ್ವದ ಮೂಲೆ ಮೂಲೆಯಿಂದ ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಫುಟ್ಬಾಲ್​ ಲೋಕದ ದಿಗ್ಗಜರೆಲ್ಲಾ ಈ ಹುಟ್ಟುಹಬ್ಬ ನಿಮಗೆ ಮತ್ತಷ್ಟು ಸಂತೋಷ ತಂದುಕೊಡಲಿ, ಇನ್ನಷ್ಟು ಗೋಲು ದಾಖಲಿಸಿ ಎಂದು ಹಾರೈಸಿದ್ದಾರೆ.

      

  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು