Legends League Cricket: ದಾದಾ ನಾಯಕತ್ವದಲ್ಲಿ ಟೀಂ ಇಂಡಿಯಾ, ವಿಶೇಷ ಪಂದ್ಯಕ್ಕೆ ಭಾರತ ಮಹಾರಾಜರ ತಂಡ ಪ್ರಕಟ

ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಎರಡನೇ ಸೀಸನ್ ಸೆಪ್ಟೆಂಬರ್‌ನಲ್ಲಿ ಒಮಾನ್‌ನಲ್ಲಿ ನಡೆಯಲಿದೆ. ಆದರೆ ಅದಕ್ಕೂ ಮುನ್ನ ಭಾರತ ಮಹಾರಾಜರು ಮತ್ತು ವರ್ಲ್ಡ್ ಜೈಂಟ್ಸ್ ನಡುವೆ ಪಂದ್ಯ ನಡೆಯಲಿದೆ.

LLC 2022

LLC 2022

  • Share this:
ಕಳೆದ ವರ್ಷದ ಲೆಜೆಂಡ್ಸ್ ಲೀಗ್ ಕ್ರಿಕೆಟ್ (Legends League Cricket) T20 ಪಂದ್ಯಾವಳಿಯು ಉತ್ತಮ ಯಶಸ್ಸು ಕಂಡಿತ್ತು. ಹೀಗಾಗಿ ಈ ಬಾರಿಯೂ ಈ ಟೂರ್ನಿಯು ನಡೆಯಲಿದೆ. ಆದರೆ ಇದಕ್ಕೂ ಮೊದಲು ಮತ್ತೊಂದು ವಿಶೇಷ ಪಂದ್ಯ ನಡೆಯಲಿದೆ. ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಎರಡನೇ ಸೀಸನ್ ಸೆಪ್ಟೆಂಬರ್‌ನಲ್ಲಿ ಒಮಾನ್‌ನಲ್ಲಿ ನಡೆಯಲಿದೆ. ಆದರೆ ಅದಕ್ಕೂ ಮುನ್ನ ಇಂಡಿಯಾ ಮಹಾರಾಜಾಸ್ ಮತ್ತು ವರ್ಲ್ಡ್ ಜೈಂಟ್ಸ್ ನಡುವೆ ಭರ್ಜರಿ ಪಂದ್ಯ ನಡೆಯಲಿದೆ. ಆಜಾದಿ ಕಾ ಅಮೃತ್ ಮಹೋತ್ಸವ (ಭಾರತದ 75 ನೇ ಸ್ವಾತಂತ್ರ್ಯ ದಿನಾಚರಣೆಯ) ಕಾರ್ಯಕ್ರಮದ ಭಾಗವಾಗಿ ಇಂಡಿಯಾ ಮಹಾರಾಜಸ್ (Indian Maharajas) ಮತ್ತು ವರ್ಲ್ಡ್ ಜೈಂಟ್ಸ್ (World Giants) ನಡುವಿನ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಸೆಪ್ಟೆಂಬರ್ 16 ರಂದು ಕೋಲ್ಕತ್ತಾದ ಪ್ರಸಿದ್ಧ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಸುಮಾರು 10 ದೇಶಗಳ ಆಟಗಾರರು ಭಾಗವಹಿಸಲಿದ್ದಾರೆ.

ಮತ್ತೊಮ್ಮೆ ಭಾರತ ತಂಡದ ನಾಯಕರಾದ ದಾದಾ:

ಸೌರವ್ ಗಂಗೂಲಿ ಭಾರತ್ ಮಹಾರಾಜಸ್ ತಂಡದ ನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಗಂಗೂಲಿ ಪ್ರಸ್ತುತ ಬಿಸಿಸಿಐ ಅಧ್ಯಕ್ಷರಾಗಿದ್ದಾರೆ ಎಂದು ತಿಳಿದಿದೆ. ಗಂಗೂಲಿ ಈಗಾಗಲೇ ಈ ಪಂದ್ಯಕ್ಕಾಗಿ ತಾಲೀಮು ಆರಂಭಿಸಿದ್ದಾರೆ. ಇಂಗ್ಲೆಂಡ್‌ನ ಮಾಜಿ ನಾಯಕ ಇಯಾನ್ ಮಾರ್ಗನ್ ವರ್ಲ್ಡ್ ಜೈಂಟ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಗಂಗೂಲಿ ತಂಡದಲ್ಲಿ ವೀರೇಂದ್ರ ಸೆಹ್ವಾಗ್, ಮೊಹಮ್ಮದ್ ಕೈಫ್, ಯೂಸುಫ್ ಪಠಾಣ್ ಮತ್ತು ಇರ್ಫಾನ್ ಪಠಾಣ್ ಸೇರಿದಂತೆ 17 ಆಟಗಾರರಿದ್ದಾರೆ. 17 ಮಾಜಿ ಕ್ರಿಕೆಟಿಗರಾದ ವೆಸ್ಟ್ ಇಂಡೀಸ್ ದಿಗ್ಗಜ ಲೆಂಡ್ಲ್ ಸಿಮನ್ಸ್, ಪ್ರೋಟೀಸ್ ಮಾಜಿ ಆಟಗಾರ ಹರ್ಷಲ್ ಗಿಬ್ಸ್ ಮತ್ತು ಶ್ರೀಲಂಕಾದ ದಿಗ್ಗಜ ಸನತ್ ಜಯಸೂರ್ಯ ವರ್ಲ್ಡ್ ಜೈಂಟ್ಸ್ ಸ್ಥಾನ ಪಡೆದಿದ್ದಾರೆ.

10 ದೇಶದ ಆಟಗಾರರು:

75 ನೇ ವಾರ್ಷಿಕೋತ್ಸವದ ಪ್ರಯುಕ್ತ ನಡೆಯಲಿರುವ ಈ ಪಂದ್ಯ ಇಂಡಿಯಾ ಮಹಾರಾಜಸ್ ತಂಡ ಮತ್ತು ವರ್ಲ್ಡ್ ಜೈಂಟ್ಸ್ ತಂಡದ ನಡುವೆ ನಡೆಯಲಿದೆ. ಈ ಪಂದ್ಯದಲ್ಲಿ 10 ದೇಶಗಳ ಆಟಗಾರರು ಭಾಗವಹಿಸುತ್ತಿರುವುದು ವಿಶೇಷವಾಗಿದೆ. ಈ ಪಂದ್ಯದ ಬಳಿಕ ಮರುದಿನದಿಂದ ಲೆಜೆಂಡ್ಸ್ ಲೀಗ್ ಆರಂಭವಾಗಲಿದ್ದು, ಇದರಲ್ಲಿ 4 ತಂಡಗಳು ಆಡಲಿವೆ. ಇನ್ನು ಎರಡನೇ ಸೀಸನ್ ನಲ್ಲಿ 15 ಪಂದ್ಯಗಳು ನಡೆಯಲಿವೆ.

ಇದನ್ನೂ ಓದಿ: Mithali Raj: ಮಿಥಾಲಿ ರಾಜ್ ಮದುವೆಯಾಗದೇ ಇರುವುದಕ್ಕೆ ಇದೇ ಕಾರಣಾನಾ? ಇಲ್ಲಿದೆ ಕುತೂಹಲಕಾರಿ ಸಂಗತಿ

ಉಭಯ ತಂಡಗಳ ಆಟಗಾರರು:

ಭಾರತ್ ಮಹಾರಾಜಸ್ ತಂಡ: ಸೌರವ್ ಗಂಗೂಲಿ (ನಾಯಕ), ವೀರೇಂದ್ರ ಸೆಹ್ವಾಗ್, ಮೊಹಮ್ಮದ್ ಕೈಫ್, ಎ. ಬದ್ರಿನಾಥ್, ಪ್ರಗ್ಯಾನ್ ಓಜಾ, ಪಾರ್ಥಿವ್ ಪಟೇಲ್, ಯೂಸುಫ್ ಪಠಾಣ್, ಹರ್ಭಜನ್ ಸಿಂಗ್, ನಮನ್ ಓಜಾ, ಅಶೋಕ್ ದಿಂಡಾ, ಆರ್‌ಪಿ ಸಿಂಗ್, ಅಜಯ್ ಜಡೇಜಾ, ಜೋಗಿಂದರ್ ಶರ್ಮಾ, ರಿತೀಂದರ್ ಸಿಂಗ್ ಸೋಧಿ ಮತ್ತು ಇರ್ಫಾನ್ ಪಠಾಣ್.

ಇದನ್ನೂ ಓದಿ: Urvashi Rautela: ನೆಟ್ಟಗೆ ಬ್ಯಾಟ್ ಬಾಲ್ ಜೊತೆ ಆಟವಾಡು, ಖ್ಯಾತ ಕ್ರಿಕೆಟಿಗನಿಗೆ ಬಾಲಿವುಡ್ ನಟಿ ಶಾಕಿಂಗ್​ ಕಾಮೆಂಟ್​

ವರ್ಲ್ಡ್ ಜೈಂಟ್ಸ್ ತಂಡ: ಇಯಾನ್ ಮಾರ್ಗನ್ (ನಾಯಕ), ಹರ್ಷಲ್ ಗಿಬ್ಸ್, ಸನತ್ ಜಯಸೂರ್ಯ, ಮ್ಯಾಟ್ ಪ್ರಯರ್, ಲೆಂಡ್ಲ್ ಸಿಮನ್ಸ್, ಜಾಕ್ವೆಸ್ ಕಾಲಿಸ್, ನಾಥನ್ ಮೆಕಲಮ್, ಜಾಂಟಿ ರೋಡ್ಸ್, ಮಶ್ರಫೆ ಮೊರ್ತಜಾ, ಅಸ್ಗರ್ ಅಫ್ಘಾನ್, ಮುತ್ತಯ್ಯ ಮುರಳೀಧರನ್, ಡೇಲ್ ಸ್ಟೇಯ್ನ್, ಹ್ಯಾಮಿಲ್ಟನ್ ಒ ಬ್ರೆಟ್ಟಾಬ್ಜಾ, ದಿನೇಶ್ ರಾಮ್ದಿನ್, ಮಿಚೆಲ್ ಜಾನ್ಸನ್.
Published by:shrikrishna bhat
First published: