ಕಬಡ್ಡಿಗೆ ದಿಢೀರ್ ವಿದಾಯ ಹೇಳಿದ ಅನುಪ್ ಕುಮಾರ್

2010 ಮತ್ತು 20014ರ ಏಷ್ಯಾ ಕ್ರೀಡಾಕೂಟ ಹಾಗೂ 2016ರ ವಿಶ್ವಕಪ್ ಕಬಡ್ಡಿಯಲ್ಲಿ ಭಾರತ ಚಿನ್ನ ಪಡೆದುಕೊಳ್ಳುವಲ್ಲಿ 35 ವರ್ಷದ ಅನುಪ್ ಅವರ ಪಾತ್ರ ಮುಖ್ಯವಾಗಿತ್ತು.

Vinay Bhat | news18
Updated:December 20, 2018, 10:18 AM IST
ಕಬಡ್ಡಿಗೆ ದಿಢೀರ್ ವಿದಾಯ ಹೇಳಿದ ಅನುಪ್ ಕುಮಾರ್
ಅನುಪ್ ಕುಮಾರ್
  • News18
  • Last Updated: December 20, 2018, 10:18 AM IST
  • Share this:
ಪಂಚಕುಲಾ: 15 ವರ್ಷಗಳಿಂದ ಕಬಡ್ಡಿ ಕ್ರೀಡೆಯಲ್ಲಿ ಮಿಂಚಿ ಭಾರತದ ಹೆಸರನ್ನು ಉತ್ತುಂಗಕ್ಕೆ ಏರಿಸಿದ ಲಿಜೆಂಡ್ ಅನುಪ್ ಕುಮಾರ್ ಕಬಡ್ಡಿ ವೃತ್ತಿ ಜೀವನಕ್ಕೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ.

ಭಾರತದ ಕಬಡ್ಡಿ ತಂಡದಲ್ಲಿ ತಾರಾ ಆಟಗಾರನಾಗಿ, ಪ್ರೋ ಕಬಡ್ಡಿಯಲ್ಲಿ ಮುಂಬಾದ ಯಶಸ್ವಿ ನಾಯಕನಾಗಿ ಮೆರೆದ ಹರ್ಯಾಣ ಆಟಗಾರ ಅನುಪ್ ಅವರು, 2006ರಲ್ಲಿ ಶ್ರೀಲಂಕಾದಲ್ಲಿ ನಡೆದಿದ್ದ ದಕ್ಷಿಣ ಏಷ್ಯನ್ ಗೇಮ್ಸ್​ನಲ್ಲಿ ಭಾರತದವನ್ನು ಪ್ರತಿನಿಧಿಸುವ ಮೂಲಕ ಪದಾರ್ಪಣೆ ಮಾಡಿದ್ದರು. 2010 ಮತ್ತು 20014ರ ಏಷ್ಯಾ ಕ್ರೀಡಾಕೂಟ ಹಾಗೂ 2016ರ ವಿಶ್ವಕಪ್ ಕಬಡ್ಡಿಯಲ್ಲಿ ಭಾರತ ಚಿನ್ನ ಪಡೆದುಕೊಳ್ಳುವಲ್ಲಿ 35 ವರ್ಷದ ಅನುಪ್ ಅವರ ಪಾತ್ರ ಮುಖ್ಯವಾಗಿತ್ತು.

ಇದನ್ನೂ ಓದಿ(VIDEO): 4.2 ಕೋಟಿಗೆ ಆರ್​ಸಿಬಿ ಸೇರುತ್ತಿದ್ದಂತೆ ವಿಂಡೀಸ್​​​ ಬ್ಯಾಟ್ಸ್​ಮನ್​​​ ಮಾಡಿದ್ದೇನು ನೋಡಿ

'ಇಂದು ನನ್ನ ಮಗನ 10ನೇ ಜನ್ಮ ದಿನ. ನಾನು ಈ ದಿನವೇ ನಿವೃತ್ತಿ ಘೋಷಿಸಲಿದ್ದೇನೆ. ನಾನು ಕಬಡ್ಡಿಯನ್ನು ಮೊದಲಿಗೆ ಹವ್ಯಾಸವಾಗಿ ಆರಂಭಿಸಿದೆ. ಆದರೆ, ಇದು ನನಗೆ ಬದುಕನ್ನೇ ನೀಡಿತು. ಪ್ರೋ ಕಬಡ್ಡಿಯಲ್ಲಿ ಭಾಗಿಯಾಗಿದ್ದಕ್ಕೆ ತುಂಬಾನೆ ಸಂತಸವಿದೆ. ದೇಶವನ್ನು ಪ್ರತಿನಿಧಿಸಿ ಮುನ್ನಡೆಸಿದ ನನಗೆ ತೃಪ್ತಿಯಾಗಿದೆ. ಎಲ್ಲರಿಗೂ ಧನ್ಯವಾದ' ಎಂದು ತಿಳಿಸಿದ್ದಾರೆ.

First published: December 20, 2018, 10:18 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading