1 ವರ್ಷಗಳ ಬಳಿಕ ಮತ್ತೆ ತಂಡಕ್ಕೆ ಮರಳಿದ ಯಾರ್ಕರ್ ಸ್ಪೆಷಲಿಸ್ಟ್​​

news18
Updated:September 1, 2018, 9:49 PM IST
1 ವರ್ಷಗಳ ಬಳಿಕ ಮತ್ತೆ ತಂಡಕ್ಕೆ ಮರಳಿದ ಯಾರ್ಕರ್ ಸ್ಪೆಷಲಿಸ್ಟ್​​
news18
Updated: September 1, 2018, 9:49 PM IST
ನ್ಯೂಸ್ 18 ಕನ್ನಡ

ಈತ ಬೌಲಿಂಗ್ ಮಾಡಲು ಬಂದರೆ ಸಾಕು, ಬ್ಯಾಟ್ಸ್​ಮನ್​ಗಳು ಪೆವಿಲಿಯನ್ ಕಡೆ ಮುಖ ಮಾಡುತ್ತಿದ್ದರು. ಈತನ ಯಾರ್ಕರ್ ಬೌಲ್​ಗೆ ಶ್ರೇಷ್ಠ ಬ್ಯಾಟ್ಸ್​ಮನ್​ಗಳೇ ಬೌಲ್ಡ್​​ ಆಗಿ ವಿಕೆಟ್ ಒಪ್ಪಿಸಿದ್ದಾರೆ. ಆದರೆ ಕಳೆದ ಒಂದು ವರ್ಷದಿಂದ ಮಾತ್ರ ಇವರು ತಂಡದಿಂದ ಹೊರಬಿದ್ದಿದ್ದರು. ಅವರೇ ಶ್ರೀಲಂಕಾ ಕ್ರಿಕೆಟ್ ತಂಡದ ಯಾರ್ಕರ್ ಸ್ಪೆಷಲಿಸ್ಟ್​ ಲಸಿತ್ ಮಾಲಿಂಗ.

ಮಾಲಿಂಗ್ ಅವರು ಸದ್ಯ ಶ್ರೀಲಂಕಾ ತಂಡಕ್ಕೆ ವಾಪಾಸ್ ಆಗಿದ್ದಾರೆ. ಒಂದು ವರ್ಷದ ಬಳಿಕ ಇದೇ ತಿಂಗಳ 15ರಿಂದ ಪ್ರಾರಂಭವಾಗಲಿರುವ ಏಷ್ಯಾ ಕಪ್​ಗೆ ಶ್ರೀಲಂಕಾ ಕ್ರಿಕೆಟ್​​ ತಂಡದ ಆಯ್ಕೆ ಸಮಿತಿ ಮಾಲಿಂಗ ಅವರನ್ನು ವಾಪಸ್ ಕರಿಸಿದೆ. ನನ್ನನ್ನು ಏಕೆ ತಂಡಕ್ಕೆ ಆಯ್ಕೆ ಮಾಡಿತ್ತಿಲ್ಲ ಎಂದು ಮಾಲಿಂಗ ಅವರು ಈ ಹಿಂದೆ ಪ್ರಶ್ನೆ ಮಾಡಿದ್ದರು. ಅಲ್ಲದೆ ನನಗೀಗ ವಿಶ್ರಾಂತಿಯ ಅಗತ್ಯವಿಲ್ಲ. ಇನ್ನೂ ಕ್ರಿಕೆಟ್​​ನಲ್ಲಿ ಮುಂದುವರೆಯುವ ಆಸಕ್ತಿ ನನ್ನಲ್ಲಿದೆ ಎಂದಿದ್ದರು. ಇದನ್ನ ಮನಗಂಡು ಆಯ್ಕೆ ಸಮಿತಿ ಮಾಲಿಂಗ ಅವರನ್ನು ಮತ್ತೆ ಶ್ರೀಲಂಕಾ ತಂಡಕ್ಕೆ ಕರೆಸಿದಂತಿದೆ.

35 ವರ್ಷ ಪ್ರಾಯದ ಮಾಲಿಂಗ 2010ರಲ್ಲಿ ಕೊನೆಯ ಟೆಸ್ಟ್​ ಹಾಗೂ ಕಳೆದ ವರ್ಷದ ಸೆಪ್ಟೆಂಬರ್​ನಲ್ಲಿ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು. ಏಕದಿನ ಕ್ರಿಕೆಟ್​ನಲ್ಲಿ 204 ಪಂದ್ಯವನ್ನು ಆಡಿರುವ ಮಾಲಿಂಗ 301 ವಿಕೆಟ್ ಕಬಳಿಸಿದ್ದಾರೆ. 38 ರನ್ ನೀಡಿ 6 ವಿಕೆಟ್ ಕಿತ್ತಿರುವುದು ಇವರ ಶ್ರೇಷ್ಠ ಸಾಧನೆಯಾಗಿದೆ. ಸದ್ಯ ಪ್ರಚಂಡ ಯಾರ್ಕರ್ ಎಂದೇ ಗುತಿಸಿಕೊಂಡಿರುವ ಲಸಿತ್ ಮಾಲಿಂಗ ತಂಡಕ್ಕೆ ವಾಪಾಸ್ ಆಗಿದ್ದು, ತಮ್ಮ ಹಿಂದಿನ ಶೈಲಿಯಲ್ಲೇ ಬೆಂಕಿಯ ಚೆಂಡನ್ನು ಉಗುಳಲು ಸಕಲ ತಯಾರಿಯಲ್ಲಿದ್ದಾರೆ.
First published:September 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626