Lasith Malinga Retirement: T-20 ಸೇರಿದಂತೆ ಎಲ್ಲಾ ಆಯಾಮದ ಕ್ರಿಕೆಟ್​ಗೆ ವಿದಾಯ ಹೇಳಿದ ಯಾರ್ಕರ್​ ಸ್ಪೆಷಲಿಸ್ಟ್​ ಲಸಿತ್​ ಮಾಲಿಂಗ

Lasith Malinga Retires from International Cricket:

ಲಸಿತ್​ ಮಾಲಿಂಗ

ಲಸಿತ್​ ಮಾಲಿಂಗ

  • Share this:
    Lasith Malinga Announces Retirement: ಶ್ರೀಲಂಕಾ ಕ್ರಿಕೆಟ್​ ಲೆಜಂಡ್​, ಯಾರ್ಕರ್​ ಸ್ಪೆಷಲಿಸ್ಟ್​ ಲಸಿತ್​ ಮಾಲಿಂಗ (Lasith Malinga) ಎಲ್ಲಾ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ದಶಕಕ್ಕೂ ಹೆಚ್ಚು ವರ್ಷಗಳ ಕಾಲ ಕ್ರಿಕೆಟ್​ ಪ್ರೇಮಿಗಳನ್ನು ರಂಜಿಸಿದ್ದ ವೇಗದ ಬೌಲರ್​ ಲಸಿತ್​ ಮಾಲಿಂಗ ಟೆಸ್ಟ್​ ಮತ್ತು ಏಕದಿನ ಪಂದ್ಯವನ್ನು ಆಡದೇ ವರ್ಷಗಳೇ ಆಗಿತ್ತು. ಇಂದು ಟ್ವೆಂಟಿ 20 ಮಾದರಿಯಿಂದ ವಿದಾಯ ಘೋಷಿಸುವ ಮೂಲಕ, ಎಲ್ಲಾ ಮಾದರಿಯ ಕ್ರಿಕೆಟ್​ನಿಂದ ನಿರ್ಗಮಿಸಿದ್ದಾರೆ. 2019ರಲ್ಲಿಯೇ ಏಕದಿನ ಕ್ರಿಕೆಟ್​ಗೆ ಮಾಲಿಂಗ ವಿದಾಯ ಹೇಳಿದ್ದರು.

    ಈ ಬಗ್ಗೆ ಟ್ವಿಟ್ಟರ್​ನಲ್ಲಿ ಬರೆದುಕೊಂಡಿರುವ ಲಸಿತ್​ ಮಾಲಿಂಗ, ತಮ್ಮ ಟಿ ಟ್ವೆಂಟಿ ಶೂ ಅನ್ನು ತೆಗೆಯುತ್ತಿರುವುದಾಗಿ ತಿಳಿಸಿದ್ದಾರೆ. ಟಿ ಟ್ವೆಂಟಿ ಮತ್ತು ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಾನು ವಿದಾಯ ಹೇಳುತ್ತಿದ್ದೇನೆ. ನನ್ನ ಕ್ರಿಕೆಟ್​ ಜೀವನದ ಜರ್ನಿಯಲ್ಲಿ ಜತೆಗಿದ್ದ ಎಲ್ಲರಿಗೂ, ಸಹಕರಿಸಿದ ಎಲ್ಲರಿಗೂ ನನ್ನ ಹೃತ್ಪೂರ್ವಕ ನಮನಗಳು. ಮುಂದಿನ ದಿನಗಳಲ್ಲಿ ನನ್ನ ಅನುಭವವನ್ನು ಯುವ ಆಟಗಾರರಿಗೆ ಧಾರೆ ಎರೆಯುವ ಕಡೆ ಗಮನಕೊಡುತ್ತೇನೆ ಎಂದು ಬರೆದುಕೊಂಡಿದ್ದಾರೆ.





    ಮಾಲಿಂಗ ಐಪಿಎಲ್​ ಇತಿಹಾಸದಲ್ಲೇ ಅತಿ ಹೆಚ್ಚು ವಿಕೆಟ್​ ಪಡೆದ ವೇಗಿ. ತಮ್ಮ ಯೂಟ್ಯೂಬ್​ ಚಾನಲ್​ನಲ್ಲಿ ತಾವು ಪಡೆದ ಉತ್ತಮ ಟ್ವೆಂಟಿ 20 ವಿಕೆಟ್​ಗಳ ಸಮಗ್ರ ವಿಡಿಯೋ ಕೂಡ ಅಪ್​ಲೋಡ್​ ಮಾಡಿದ್ದಾರೆ. ಅಪ್​ಲೋಡ್​ ಮಾಡಿದ ವಿಡಿಯೋಗೆ ಮಾಲಿಂಗ ಕೊಟ್ಟ ಶೀರ್ಷಿಕೆ ಹೀಗಿದೆ. ನಾನು ಕ್ರಿಕೆಟ್​ನಿಂದ ನಿವೃತ್ತಿ ಹೊಂದಿರಬಹುದು, ಆದರೆ ಕ್ರಿಕೆಟ್​ ಮೇಲಿನ ನನ್ನ ಪ್ರೇಮ ಎಂದಿಗೂ ಮುಗಿಯುವುದಿಲ್ಲ ಎಂದು ಶೀರ್ಷಿಕೆ ನೀಡಿದ್ದಾರೆ.

    ಇದನ್ನೂ ಓದಿ: ವಿರಾಟ್​ ಕೊಹ್ಲಿಯೇ ನಿವೃತ್ತಿ ಘೋಷಿಸುವವರೆಗೆ ಅವರನ್ನೇ ನಾಯಕತ್ವದಲ್ಲಿ ಮುಂದುವರೆಸಬೇಕು; ರಿತೀಂದರ್​ ಸೋಧಿ

    ಟೆಸ್ಟ್​ ಕ್ರಿಕೆಟ್​ನಲ್ಲಿ ಲಸಿತ್​ ಮಾಲಿಂಗ ಒಟ್ಟೂ 30 ಪಂದ್ಗಳನ್ನು ಶ್ರೀಲಂಕಾ ಪರ ಆಡಿದ್ದು, 101 ವಿಕೆಟ್​ ಪಡೆದುಕೊಂಡಿದ್ದಾರೆ. 226 ಏಕದಿನ ಪಂದ್ಯಗಳನ್ನು ಆಡಿದ್ದು, 338 ವಿಕೆಟ್​ ಪಡೆದಿದ್ದಾರೆ. ಮಾಲಿಂಗ ಅವರ ನಿವೃತ್ತಿಯ ಬೆನ್ನಲ್ಲೇ, ಅವರು ಶ್ರೀಲಂಕಾ ತಂಡದ ಬೌಲಿಂಗ್​ ಕೋಚ್​ ಆಗುತ್ತಾರ ಎಂಬ ಪ್ರಶ್ನೆ ಕೇಳಿ ಬರುತ್ತಿದೆ. ಸದ್ಯಕ್ಕೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
    Published by:Sharath Sharma Kalagaru
    First published: