News18 India World Cup 2019

ವಿಶ್ವದ ನಂಬರ್​ 1 ಫುಟ್​ಬಾಲ್​ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊಗೆ ಅರೆಸ್ಟ್​ ವಾರೆಂಟ್..!

2009 ರಲ್ಲಿ ಹೊಟೇಲ್​ ರೂಮ್​ ಒಂದರಲ್ಲಿ ಕ್ರಿಸ್ಟಿಯಾನೊ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ.

zahir | news18
Updated:January 12, 2019, 7:59 PM IST
ವಿಶ್ವದ ನಂಬರ್​ 1 ಫುಟ್​ಬಾಲ್​ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊಗೆ ಅರೆಸ್ಟ್​ ವಾರೆಂಟ್..!
ಕ್ರಿಸ್ಟಿಯಾನೊ ರೊನಾಲ್ಡೊ
zahir | news18
Updated: January 12, 2019, 7:59 PM IST
ವಿಶ್ವದ ನಂಬರ್​ 1 ಫುಟ್​ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ವಿರುದ್ಧ ಅರೆಸ್ಟ್​ ವಾರೆಂಟ್​ ಜಾರಿಯಾಗಿದೆ. 2009 ರಲ್ಲಿ ನಡೆದ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಈ ​ ವಾರೆಂಟ್​ ಜಾರಿ ಮಾಡಲಾಗಿದೆ.

ಜಗತ್ತಿನ ಅತ್ಯಂತ ದುಬಾರಿ ಆಟಗಾರನಾಗಿ ಗುರುತಿಸಿಕೊಂಡಿರುವ ರೊನಾಲ್ಡೊ ವಿರುದ್ಧ ಈ ಹಿಂದೆ ಮೀ ಟೂ ಆರೋಪ ಕೇಳಿ ಬಂದಿತ್ತು. ಅಮೆರಿಕದ ರೂಪದರ್ಶಿ ಕ್ಯಾಥರಿನ್ ಮಯೊರ್ಗಾ ಎಂಬ ಮಹಿಳೆಯು ಈ ಆರೋಪ ಮಾಡಿದ್ದರು. ವಿಶ್ವದಾದ್ಯಂತ ಭಾರೀ ಚರ್ಚೆಗೆ ಕಾರಣವಗಿದ್ದ 2018ರ ಮೀ ಟೂ ಅಭಿಯಾನದ ಮೂಲಕ 34ರ ಹರೆಯದ ಕ್ಯಾಥರಿನ್ ಸ್ಟಾರ್ ಆಟಗಾರನ ವಿರುದ್ಧ ಅತ್ಯಾಚಾರದ ಕೇಸು ದಾಖಲಿಸಿದ್ದರು.

2009 ರಲ್ಲಿ ಹೊಟೇಲ್​ ರೂಮ್​ ಒಂದರಲ್ಲಿ ಕ್ರಿಸ್ಟಿಯಾನೊ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ. ಅಲ್ಲದೆ ಈ ಸುದ್ದಿಯನ್ನು ಬಹಿರಂಗಪಡಿಸದಂತೆ 2.7 ಕೋಟಿ ಹಣದ ಆಮಿಷ ಒಡ್ಡಿದ್ದರು ಎಂದು ಕ್ಯಾಥರಿನ್ ಕಳೆದ ಅಕ್ಟೋಬರ್​ನಲ್ಲಿ ಗಂಭೀರ ಆರೋಪ ಮಾಡಿದ್ದರು.

ಈ ವಿಷಯಕ್ಕೆ ಸಂಬಂಧಿಸಿದಂತೆ ಕೇಸು ದಾಖಲಿಸಿದ ಲಾಸ್ ವೇಗಾಸ್ ಪೊಲೀಸರು, ಕ್ರಿಸ್ಟಿಯಾನೊಗೆ ಡಿಎನ್​ಎ ಸ್ಯಾಂಪಲ್ ನೀಡುವಂತೆ ತಿಳಿಸಿದ್ದರು. ಆದರೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದ ರೊನಾಲ್ಡೊ ಪೊಲೀಸರಿಗೆ ಯಾವುದೇ ಮಾಹಿತಿಯನ್ನು ನೀಡಿರಲಿಲ್ಲ. ದೂರಿಗೆ ಸಂಬಂಧಿಸಿದಂತೆ ಸಹಕರಿಸದ ಕಾರಣ ರೊನಾಲ್ಡೊ ವಿರುದ್ಧ ಲಾಸ್​ ವೇಗಾಸ್ ಪೊಲೀಸರು ವಾರೆಂಟ್​ ಜಾರಿ ಮಾಡಿದ್ದಾರೆ.

ಇದನ್ನೂ ಓದಿ; ಕೇವಲ 1400 ರೂ. ಉಳಿತಾಯ ಮಾಡಿ, ಕೆಲಸಕ್ಕೆ ಸೇರುವ ಮುನ್ನ 1 ಕೋಟಿ ರೂ. ನಿಮ್ಮದಾಗಿಸಿ..!

ಸದ್ಯ ಜ್ಯುವೆಂಟಸ್‌ ಕ್ಲಬ್​ ಪರ ಆಡುತ್ತಿರುವ ಆಕ್ರಮಣಕಾರಿ ಫುಟ್​ಬಾಲರ್​ಕ್ರಿಸ್ಟಿಯಾನೊ ರೊನಾಲ್ಡೊ ಇತ್ತೀಚೆಗಷ್ಟೇ ವರ್ಷದ ಶ್ರೇಷ್ಠ ಫ‌ುಟ್‌ಬಾಲಿಗ ಗ್ಲೋಬ್‌ ಸಾಕರ್‌ ಪ್ರಶಸ್ತಿ ಯನ್ನು ತಮ್ಮದಾಗಿಸಿಕೊಂಡಿದ್ದರು. ವಿಶ್ವವಿಖ್ಯಾತ ಆಟಗಾರ ಅರ್ಜೆಂಟೀನಾದ ಲಿಯೊನೆಲ್‌ ಮೆಸ್ಸಿಯನ್ನು ಹಿಂದಿಕ್ಕಿ ಕ್ರಿಸ್ಟಿಯಾನೊ ಪ್ರಶಸ್ತಿ ಗೆಲ್ಲುವ ಮೂಲಕ ಹೊಸ ಫುಟ್​ಬಾಲ್​ ವರ್ಷವನ್ನು ಭರ್ಜರಿಯಾಗಿ ಆರಂಭಿಸಿದ್ದರು.
Loading...

ಇದನ್ನೂ ಓದಿಕ್ರಿಸ್ಟಿಯಾನೊ ರೊನಾಲ್ಡೊ : ಆಕ್ರಮಣಕಾರಿ ಆಟಗಾರನ ಮಾನವೀಯತೆ

ಈ ಹಿಂದೆ ಅತ್ಯಾಚಾರದ ಆರೋಪವನ್ನು ಅಲ್ಲೆಗೆಳೆದಿದ್ದ ಕ್ರಿಸ್ಟಿಯಾನೊ ಅವರ ಮುಂದಿನ ನಡೆಯೇನು ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ. ಹಾಗೆಯೇ ಇಟಲಿಯಲ್ಲಿ ನಡೆಯಲಿರುವ ಸೂಪರ್​ಕೊಪ ಫುಟ್​ಬಾಲ್​ ಫೈನಲ್​ನಲ್ಲಿ ಜ್ಯುವೆಂಟಸ್​ ಫೈನಲ್​ ಪ್ರವೇಶಿಸಿದ್ದು, ರೊನಾಲ್ಡೊ ಪಂದ್ಯಕ್ಕೆ ಲಭ್ಯರಾಗಲಿದ್ದಾರಾ ಎಂಬುದು ಕೂಡ ಇನ್ನು ಸ್ಪಷ್ಟವಾಗಿಲ್ಲ.

ಇದನ್ನೂ ಓದಿ: ಒಂದು ಬ್ರೆಡ್​ ಬೆಲೆ 1 ಲಕ್ಷ ರೂ: ಇಲ್ಲಿ ಬಡವರೂ ಕೂಡ ಕೋಟ್ಯಾಧಿಪತಿಗಳು..!

 

First published:January 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...