ಲಂಕಾ ಪ್ರೀಮಿಯರ್ ಲೀಗ್ (LPL) ಮೂರನೇ ಆವೃತ್ತಿಯನ್ನು ಮಂಗಳವಾರದಿಂದ (ಡಿಸೆಂಬರ್ 6) ಆರಂಭವಾಗಲಿದೆ. ಈ ಟಿ20 ಟೂರ್ನಿಯಲ್ಲಿ ವಿಶ್ವದೆಲ್ಲೆಡೆಯ ಕ್ರಿಕೆಟ್ (Cricket) ಆಟಗಾರರು ಪಾಲ್ಗೊಳ್ಳಲಿದ್ದಾರೆ. ಲಂಕಾ ಲೀಗ್ನಲ್ಲಿ 18 ದಿನಗಳಲ್ಲಿ ಒಟ್ಟು 24 ಪಂದ್ಯಗಳು ನಡೆಯಲಿವೆ. ಈ ಲೀಗ್ನಲ್ಲಿ ಜಾಫ್ನಾ ಕಿಂಗ್ಸ್ (Jaffna Kings), ಗಾಲೆ ಗ್ಲಾಡಿಯೇಟರ್ಸ್, ಕೊಲಂಬೊ ಸ್ಟಾರ್ಸ್, ಕ್ಯಾಂಡಿ ಫಾಲ್ಕನ್ಸ್ ಮತ್ತು ದಂಬುಲ್ಲಾ ಜೈಂಟ್ಸ್ ಸೇರಿದಂತೆ ಒಟ್ಟು 5 ತಂಡಗಳು ಪಾಲ್ಗೊಳ್ಳಲಿವೆ.
ಟೂರ್ನಿ ಹೇಗೆ ನಡೆಯಲಿದೆ?:
ರೌಂಡ್ ರಾಬಿನ್ ಹಂತದಲ್ಲಿ ಒಟ್ಟು 20 ಪಂದ್ಯಗಳು ನಡೆಯಲಿವೆ. ಇದರ ನಂತರ, ಕ್ವಾಲಿಫೈಯರ್ 1, ಎಲಿಮಿನೇಟರ್ ಮತ್ತು ಕ್ವಾಲಿಫೈಯರ್ ಸೇರಿದಂತೆ ಫೈನಲ್ (ಡಿಸೆಂಬರ್ 23) ಆಡಲಾಗುತ್ತದೆ. ತಿಸಾರ ಪೆರೇರಾ ನಾಯಕತ್ವದ ಜಾಫ್ನಾ ಕಿಂಗ್ಸ್ ಮತ್ತು ಕುಸಾಲ್ ಮೆಂಡಿಸ್ ನೇತೃತ್ವದ ಗಾಲೆ ಗ್ಲಾಡಿಯೇಟರ್ಸ್ ತಂಡಗಳ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ಶ್ರೀಲಂಕಾದ ಮೂರು ಸ್ಥಳಗಳಲ್ಲಿ ಪಂದ್ಯಾವಳಿ ನಡೆಯಲಿದೆ. ಹಂಬಂಟೋಟದ ಮಹಿಂದ ರಾಜಪಕ್ಸೆ ಅಂತರಾಷ್ಟ್ರೀಯ ಕ್ರೀಡಾಂಗಣ, ಪಲ್ಲೆಕಲ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಮತ್ತು ಕೊಲಂಬಿಯಾದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಪಂದ್ಯಗಳು ನಡೆಯಲಿವೆ.
📸 Snapshots from the #LPL2022 opening ceremony 🎉#WinTogether #LPLT20 pic.twitter.com/d1mkMREhMo
— Sri Lanka Cricket 🇱🇰 (@OfficialSLC) December 6, 2022
ಲಂಕಾ ಪ್ರೀಮಿಯರ್ ಲೀಗ್ ಪಂದ್ಯಗಳ ಆನ್ಲೈನ್ ಲೈವ್ ಸ್ಟ್ರೀಮಿಂಗ್ ಎಲ್ಲಿ ವೀಕ್ಷಿಸಬೇಕು?
ನೀವು ಸೋನಿ ಲಿವ್ ಅಪ್ಲಿಕೇಶನ್ನಲ್ಲಿ ಲಂಕಾ ಪ್ರೀಮಿಯರ್ ಲೀಗ್ ಪಂದ್ಯಗಳ ಆನ್ಲೈನ್ ಲೈವ್ ಸ್ಟ್ರೀಮಿಂಗ್ ಅನ್ನು ವೀಕ್ಷಿಸಬಹುದು.
ಲಂಕಾ ಪ್ರೀಮಿಯರ್ ಲೀಗ್ನ ಮೊದಲ ದಿನದಂದು ಎಷ್ಟು ಪಂದ್ಯಗಳನ್ನು ಆಡಲಾಗುತ್ತದೆ?
ಲಂಕಾ ಪ್ರೀಮಿಯರ್ ಲೀಗ್ನ ಮೊದಲ ದಿನ ಎರಡು ಪಂದ್ಯಗಳು ನಡೆಯಲಿವೆ.
ಲಂಕಾ ಪ್ರೀಮಿಯರ್ ಲೀಗ್ನ ಮೊದಲ ಪಂದ್ಯ ಯಾವಾಗ ಮತ್ತು ಎಷ್ಟು ಗಂಟೆಗೆ ನಡೆಯಲಿದೆ?
ಲಂಕಾ ಪ್ರೀಮಿಯರ್ ಲೀಗ್ನ ಮೊದಲ ಪಂದ್ಯ ಮಂಗಳವಾರ (ಡಿಸೆಂಬರ್ 6) ಭಾರತೀಯ ಕಾಲಮಾನ ಮಧ್ಯಾಹ್ನ 3:00 ರಿಂದ ಆರಂಭವಾಗಲಿದೆ.
ಲಂಕಾ ಪ್ರೀಮಿಯರ್ ಲೀಗ್ನ ಎರಡನೇ ಪಂದ್ಯ ಎಷ್ಟು ಗಂಟೆಗೆ ನಡೆಯಲಿದೆ?
ಕೊಲಂಬೊ ಸ್ಟಾರ್ಸ್ ಮತ್ತು ಕ್ಯಾಂಡಿ ಫಾಲ್ಕನ್ಸ್ ನಡುವಿನ ಎರಡನೇ ಪಂದ್ಯ ಮಂಗಳವಾರ (ಡಿಸೆಂಬರ್ 6) ಭಾರತೀಯ ಕಾಲಮಾನ ರಾತ್ರಿ 7:30 ರಿಂದ ಆರಂಭವಾಗಲಿದೆ.
ಇದನ್ನೂ ಓದಿ: IPL 2023 Mini Auction: ಕೆಎಲ್ ರಾಹುಲ್ ನಾಯಕತ್ವ ಕೊನೆಗೊಳ್ಳುತ್ತಾ? ಲಕ್ನೋ ತಂಡದ ಮುಂದಿನ ಕ್ಯಾಪ್ಟನ್ ಯಾರು?
ಐಪಿಎಲ್ ನಿಯಮದಲ್ಲಿಯೂ ಬದಲಾವಣೆ:
ಇನ್ನು, ಟಿ20 ಕ್ರಿಕೆಟ್ನ ಶ್ರೀಮಂತ್ ಲೀಗ್ ಐಪಿಎಲ್ ಮುಂಬರುವ ಲೀಗ್ಗಾಗಿ ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ಮಿನಿ ಹರಾಜು ಆಯೋಜಿಸಿದೆ. ಇದಲ್ಲದೇ ಈ ಬಾರಿ ಐಪಿಎಲ್ನಲ್ಲಿ ಹೊಸ ನಿಯಮ ಸಹ ಜಾರಿಗೆ ತರಲಿದೆ. ಐಪಿಎಲ್ 2023ರಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಜಾರಿಗೆ ಬರಲಿದೆ. ಈ ನಿಯಮದ ಕುರಿತು ಸರಳವಾಗಿ ಹೇಳುವುದಾದರೆ, ಬದಲಿ ಆಟಗಾರನನ್ನು ಇಂಪ್ಯಾಕ್ಟ್ ಪ್ಲೇಯರ್ ಎಂದು ವಿವರಿಸಲಾಗಿದೆ. ಈಗಾಗಲೇ ಫುಟ್ಬಾಲ್ ಮತ್ತು ರಗ್ಬಿ ಆಟಗಳನ್ನು ವೀಕ್ಷಿಸುವವರಿಗೆ ಇಂಪ್ಯಾಕ್ಟ್ ಪ್ಲೇಯರ್ ಏನೆಂದು ಅರ್ಥವಾಗುತ್ತದೆ. ಪ್ರಸ್ತುತ, ಟಾಸ್ ನಂತರ ಘೋಷಿಸಲಾದ ಅಂತಿಮ ತಂಡದ (11) ಆಟಗಾರರಿಗೆ ಮಾತ್ರ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಲು ಅವಕಾಶವಿದೆ. ಮಧ್ಯದಲ್ಲಿ ಯಾರಾದರೂ ಗಾಯಗೊಂಡರೆ, ಬದಲಿ ಆಟಗಾರ ಕೇವಲ ಫೀಲ್ಡಿಂಗ್ಗೆ ಸೀಮಿತವಾಗಿರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ